ಸುರತ್ಕಲ್ ಬೀಚ್ ಬಳಿ ಕನ್ನಡಿ ಹಾವಿನಂತಿರುವ ಅಪರೂಪದ ಮೀನು ಪತ್ತೆ

ಮಂಗಳೂರು : ಸಮುದ್ರದ ಆಳದಲ್ಲಿ ವಾಸಿಸುವ ಅರೋಳಿ ಮೀನು (ಲಿಯೊಪೋರ್ಡ್‌ ಹನಿಕೋಂಬ್‌ ಈಲ್‌) ಎಂದು ಕರೆಯಲ್ಪಡುವ ಅಪರೂಪದ ಮೀನು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ ಸಮೀಪದ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಇದು ಸುರತ್ಕಲ್ ಬೀಚ್ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದು ಸುಮಾರು ಎರಡು ಅಡಿಗಿಂತ ಹೆಚ್ಚು ಉದ್ದವಿದೆ. ಇದರ ವೈಜ್ಞಾನಿಕ ಹೆಸರು ಜಿಮ್ನೋಥೊರಾಕ್ಸ್ ಮೊರಿಂಗಾ. ತಕ್ಷಣ ನೋಡಲು ಕನ್ನಡಿ ಹಾವಿನಂತೆ ಕಂಡು ಬರುವ ಈ ಮೀನು ಮೈಮೇಲೆ ಕಪ್ಪು ಚುಕ್ಕೆಗಳಿಂದ ಬಹಳಷ್ಟು ಆಕರ್ಷಣೀಯವಾಗಿದೆ. , ಮೇಲ್ನೋಟಕ್ಕೆ ಅಕ್ವೇರಿಯಂನಲ್ಲಿ ಸಾಕುವ ಮೀನಿನಂತೆ ಕಂಡರೂ ಹಾವಿನಂತೆ ಉದ್ದವಾಗಿ ಬೆಳೆಯುತ್ತದೆ. ಇದು ಸ್ವಲ್ಪ ವಿಷಪೂರಿತವಾಗಿರುವುದರಿಂದ ಇದನ್ನು ತಿನ್ನುವುದಿಲ್ಲ. ಹೆಚ್ಚಾಗಿ ಕಲ್ಲು ಪ್ರದೇಶದ ಜಾಗದಲ್ಲಿ ವಾಸಿಸುತ್ತದೆ ಮತ್ತು ಸಣ್ಣಮೀನುಗಳನ್ನು ತಿಂದು ಬದುಕುತ್ತದೆ. ಇವು ಸಮುದ್ರದಲ್ಲಿ ಕಲ್ಲುಗಳಿರುವಲ್ಲಿ ಮಾತ್ರ ಹೆಚ್ಚಾಗಿ ಇರುತ್ತದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement