ಡಿ.ಕೆ. ಶಿವಕುಮಾರ ಭಾರತದ ಅತ್ಯಂತ ಶ್ರೀಮಂತ ಶಾಸಕ: ಈ ಶಾಸಕರ ಆಸ್ತಿ ಕೇವಲ ₹1,700-ಅತಿ ಹೆಚ್ಚು- ಅತಿ ಕಡಿಮೆ ಆಸ್ತಿ ಇರುವ ಶಾಸಕರ ಟಾಪ್ 10 ಪಟ್ಟಿ..

ನವದೆಹಲಿ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅತ್ಯಂತ ಶ್ರೀಮಂತ ಶಾಸಕರಾಗಿದ್ದರೆ, ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರೊಬ್ಬರ ಬಳಿ ಕೇವಲ ₹ 1700 ಆಸ್ತಿ ಇದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್‌(ಎಡಿಆರ್‌)ನ ವರದಿಯ ಪ್ರಕಾರ, ಭಾರತದಾದ್ಯಂತ ಶಾಸಕಾಂಗ ಸಭೆಗಳ ಪ್ರತಿ ಸದಸ್ಯರ ಸರಾಸರಿ ಆಸ್ತಿ ₹13.63 ಕೋಟಿಯಷ್ಟಿದೆ. ಇವರಲ್ಲಿ ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವವರು ಸರಾಸರಿ ₹16.36 ಕೋಟಿ ಆಸ್ತಿ ಹೊಂದಿದ್ದರೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದವರು ಸರಾಸರಿ ₹11.45 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್‌ (ADR) ವರದಿ ಹೇಳಿದೆ. ಎಡಿಆರ್‌ 28 ರಾಜ್ಯದ ವಿಧಾನಸಭೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 4,001 ಹಾಲಿ ಶಾಸಕರನ್ನು ವಿಶ್ಲೇಷಿಸಿದೆ.
ಕರ್ನಾಟಕದ ಉಪಮುಖ್ಯಮಂತ್ರಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ ₹ 1,413 ಕೋಟಿ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರೊಬ್ಬರು ಕೇವಲ ₹ 1700 ಆಸ್ತಿ ಘೋಷಿಸಿದ್ದಾರೆ. ಮ
ಅತಿ ಹೆಚ್ಚು ಆಸ್ತಿ ಹೊಂದಿರುವ ಟಾಪ್ 10 ಶಾಸಕರು
1. ಡಿ ಕೆ ಶಿವಕುಮಾರ್ (ಕಾಂಗ್ರೆಸ್‌) – ಕನಕಪುರ, ಕರ್ನಾಟಕ 2023 – ಒಟ್ಟು ಆಸ್ತಿ: ₹1413 ಕೋಟಿ
2. ಕೆ.ಎಚ್. ಪುಟ್ಟಸ್ವಾಮಿ ಗೌಡ (ಸ್ವತಂತ್ರ) – ಗೌರಿಬಿದನೂರು, ಕರ್ನಾಟಕ 2023 – ಒಟ್ಟು ಆಸ್ತಿ: ₹1267 ಕೋಟಿ
3. ಪ್ರಿಯಕೃಷ್ಣ (ಕಾಂಗ್ರೆಸ್‌) – ಗೋವಿಂದರಾಜನಗರ, ಕರ್ನಾಟಕ 2023 – ಒಟ್ಟು ಆಸ್ತಿ: ₹1156 ಕೋಟಿ
4. ಎನ್. ಚಂದ್ರಬಾಬು ನಾಯ್ಡು (ಟಿಡಿಪಿ) – ಕುಪ್ಪಂ, ಆಂಧ್ರ ಪ್ರದೇಶ 2019 – ಒಟ್ಟು ಆಸ್ತಿ: ₹668 ಕೋಟಿ
5. ಜಯಂತಿಭಾಯ್ ಸೋಮಾಭಾಯ್ ಪಟೇಲ್ (ಬಿಜೆಪಿ) – ಮಾನ್ಸಾ, ಗುಜರಾತ್ 2022 – ಒಟ್ಟು ಆಸ್ತಿ: ₹661 ಕೋಟಿ
6. ಸುರೇಶ ಬಿ.ಎಸ್. (ಕಾಂಗ್ರೆಸ್‌) – ಹೆಬ್ಬಾಳ, ಕರ್ನಾಟಕ 2023 – ಒಟ್ಟು ಆಸ್ತಿ: ₹648 ಕೋಟಿ
7. ವೈಎಸ್ ಜಗನ್ ಮೋಹನ್ ರೆಡ್ಡಿ (YSRCP) – ಪುಲಿವೆಂಡ್ಲಾ, ಆಂಧ್ರ ಪ್ರದೇಶ 2019 – ಒಟ್ಟು ಆಸ್ತಿ: ₹510 ಕೋಟಿ
8. ಪರಾಗ್ ಶಾ (ಬಿಜೆಪಿ) – ಘಾಟ್‌ಕೋಪರ್ ಪೂರ್ವ, ಮಹಾರಾಷ್ಟ್ರ 2019 – ಒಟ್ಟು ಆಸ್ತಿ: ₹500 ಕೋಟಿ
9. ಟಿ.ಎಸ್. ಬಾಬಾ (ಕಾಂಗ್ರೆಸ್‌) – ಅಂಬಿಕಾಪುರ, ಛತ್ತೀಸ್‌ಗಢ 2018 – ಒಟ್ಟು ಆಸ್ತಿ: ₹500 ಕೋಟಿ
10. ಮಂಗಲಪ್ರಭಾತ್ ಲೋಧಾ (ಬಿಜೆಪಿ) – ಮಲಬಾರ್ ಹಿಲ್, ಮಹಾರಾಷ್ಟ್ರ 2019 – ಒಟ್ಟು ಆಸ್ತಿ: ₹441 ಕೋಟಿ

ಪ್ರಮುಖ ಸುದ್ದಿ :-   ಪರೀಕ್ಷೆಯಲ್ಲಿ ಫೇಲ್‌ ಆದ್ರೂ 2 ವರ್ಷ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಹಿಳೆ..! ಸಬ್-ಇನ್ಸ್‌ಪೆಕ್ಟರ್ ಆಗಿ‌ ಪೋಸ್‌...!!

ಅತಿ ಕಡಿಮೆ ಆಸ್ತಿ ಹೊಂದಿರುವ ಟಾಪ್ 10 ಶಾಸಕರು
1. ನಿರ್ಮಲಕುಮಾರ ಧಾರಾ (ಬಿಜೆಪಿ) – ಸಿಂಧೂ (SC), ಪಶ್ಚಿಮ ಬಂಗಾಳ 2021 – ಒಟ್ಟು ಆಸ್ತಿ: ₹1,700
2. ಮಕರಂದ ಮುದುಲಿ (ಸ್ವತಂತ್ರ) – ರಾಯಗಡ, ಒಡಿಶಾ 2019 – ಒಟ್ಟು ಆಸ್ತಿ: ₹15,000
3. ನರಿಂದರ್ ಪಾಲ್ ಸಿಂಗ್ ಸಾವ್ನಾ (AAP) – ಫಜಿಲ್ಕಾ, ಪಂಜಾಬ್ 2022 – ಒಟ್ಟು ಆಸ್ತಿ: ₹18,370
4. ನರಿಂದರ್ ಕೌರ್ ಭಾರಜ್ (AAP) – ಸಂಗ್ರೂರ್, ಪಂಜಾಬ್ 2022 – ಒಟ್ಟು ಆಸ್ತಿ: ₹24,409
5. ಮಂಗಲ್ ಕಾಳಿಂದಿ (JMM) – ಜುಗ್ಸಲೈ (SC), ಜಾರ್ಖಂಡ್ 2019 – ಒಟ್ಟು ಆಸ್ತಿ: ₹30,000
6. ಪುಂಡರೀಕಕ್ಷ್ಯ ಸಹಾ (AITC) – ನಬದ್ವಿಪ್, ಪಶ್ಚಿಮ ಬಂಗಾಳ 2021 – ಒಟ್ಟು ಆಸ್ತಿ: ₹30,423
7. ರಾಮಕುಮಾರ ಯಾದವ್ (ಕಾಂಗ್ರೆಸ್‌) – ಚಂದ್ರಾಪುರ, ಛತ್ತೀಸ್‌ಗಢ 2018 – ಒಟ್ಟು ಸ್ವತ್ತುಗಳು: ₹30,464
8. ಅನಿಲಕುಮಾರ ಅನಿಲ್ ಪ್ರಧಾನ್ (SP) – ಚಿತ್ರಕೂಟ, ಉತ್ತರ ಪ್ರದೇಶ 2022 – ಒಟ್ಟು ಆಸ್ತಿ: ₹30,496
9. ರಾಮ ಡಂಗೋರ್ (ಬಿಜೆಪಿ) – ಪಂಧಾನ (ಎಸ್‌ಟಿ), ಮಧ್ಯಪ್ರದೇಶ 2018 – ಒಟ್ಟು ಆಸ್ತಿ: ₹50,749
10. ವಿನೋದ ಭಿವಾ ನಿಕೋಲ್ (ಸಿಪಿಐ(ಎಂ)) – ದಹಾನು (ಎಸ್‌ಟಿ), ಮಹಾರಾಷ್ಟ್ರ 2019 – ಒಟ್ಟು ಆಸ್ತಿ: ₹51,082

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ರಾಷ್ಟ್ರದಾದ್ಯಂತ ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಶಾಸಕರ ಸ್ವಯಂ ಪ್ರಮಾಣ ಪತ್ರಗಳನ್ನು ವಿಶ್ಲೇಷಿಸಿದೆ. ಶಾಸಕರು ತಮ್ಮ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಅಫಿಡವಿಟ್‌ಗಳಿಂದ ಡೇಟಾವನ್ನು ಹೊರತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ. 28 ರಾಜ್ಯ ವಿಧಾನಸಭೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 4033 ಶಾಸಕರಲ್ಲಿ ಒಟ್ಟು 4001 ಶಾಸಕರನ್ನು ವಿಶ್ಲೇಷಿಸಲಾಗಿದೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement