ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಚಿತ್ರಕೋಟೆ ಜಲಪಾತದ 90 ಅಡಿಗಳಷ್ಟು ಎತ್ತರದಿಂದ ಬಾಲಕಿಯೊಬ್ಬಳು ಜಿಗಿದ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂದೆ-ತಾಯಿಗಳು ಬಾಲಕಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬೈದಿದ್ದಕ್ಕೆ ಅವಳು ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಬಾಲಕಿ ನೀರಿನಲ್ಲಿ ತೇಲುತ್ತಿದ್ದರಿಂದ ಬದುಕುಳಿದಿದ್ದಾಳೆ.
ಮಂಗಳವಾರ ಸಂಜೆ ಚಿತ್ರಕೂಟ ಚೌಕಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೇಲಿಂದ ಜಿಗಿಯಲು ಜಲಪಾತದ ಅಂಚನ್ನು ತಲುಪುವ ಮುನ್ನ ಆಕೆ ಬಹಳ ಹೊತ್ತು ಜಲಪಾತದ ಸುತ್ತ ಅಲೆದಿದ್ದಾಳೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಘಟನಾ ಸ್ಥಳದಲ್ಲಿ ಬಾಲಕಿಯನ್ನು ಗಮನಿಸಿದ ಪ್ರವಾಸಿಗರು ಮತ್ತು ಸ್ಥಳೀಯರು, ಅವಳನ್ನು ಜಿಗಿಯದಂತೆ ಒತ್ತಾಯಿಸಿದರು ಮತ್ತು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮನವೊಲಿಸಲು ಪ್ರಯತ್ನಿಸಿದರು, ಆದರೆ ಅವರು ಅವರ ಮನವಿಯನ್ನು ನಿರ್ಲಕ್ಷಿಸಿ ಸುಮಾರು 90 ಅಡಿಗಳಷ್ಟು ಎತ್ತರದಿಂದ ಜಿಗಿದಿದ್ದಾಳೆ ಎಂದು ವರದಿ ತಿಳಿಸಿದೆ.
ಸ್ಥಳದಲ್ಲಿದ್ದವರು ಈ ಕೃತ್ಯವನ್ನು ದಾಖಲಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊ ಕ್ಲಿಪ್‌ನಲ್ಲಿ, ಹುಡುಗಿ ಜಲಪಾತಕ್ಕೆ ಹಾರುವ ಮೊದಲು ಅದರ ಅಂಚಿನಲ್ಲಿ ನಿಂತಿರುವುದನ್ನು ಕಾಣಬಹುದು.
ಇಂದ್ರಾವತಿ ನದಿಯಲ್ಲಿ ಜಗದಲ್‌ಪುರದಿಂದ 38 ಕಿಮೀ ದೂರದಲ್ಲಿರುವ ಚಿತ್ರಕೋಟೆ ಜಲಪಾತವನ್ನು ಸ್ಥಳೀಯರು ಮತ್ತು ಪ್ರವಾಸಿಗರು “ಮಿನಿ ನಯಾಗರಾ ಫಾಲ್ಸ್” ಎಂದು ಕರೆಯುತ್ತಾರೆ.
ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಹುಡುಗಿ ಜಲಪಾತದ ಹತ್ತಿರ ವಾಸಿಸುತ್ತಾಳೆ. ತನಿಖೆಯ ವೇಳೆ, ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಾಲಕಿಯನ್ನು ಆಕೆಯ ತಂದೆ-ತಾಯಿಗಳು ಬೈದಿದ್ದರಿಂದ ಬಾಲಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಇದೀಗ ಬಾಲಕಿಯನ್ನು ಆಕೆಯ ಕುಟುಂಬದವರಿಗೆ ಒಪ್ಪಿಸಲಾಯಿತು.
ಮಳೆಗಾಲದಲ್ಲಿ ಈ ಜಲಪಾತವು ಸುಮಾರು 300 ಮೀಟರ್ ಅಗಲವಾಗಿರುತ್ತದೆ. ಚಿತ್ರಕೋಟೆ ಜಲಪಾತವು ಸುಂದರವಾದ ದೃಶ್ಯಾವಳಿಗಳನ್ನು ನೀಡುತ್ತದೆ ಮತ್ತು ವಿಶೇಷವಾಗಿ ಮಳೆಗಾಲದಲ್ಲಿ ಅನೇಕರಿಗೆ ಪ್ರಮುಖ ಪಿಕ್ನಿಕ್ ತಾಣವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ