ಬೆಂಗಳೂರು : ಶಂಕಿತ ಉಗ್ರನ ಮನೆಯಲ್ಲಿ ನಾಲ್ಕು ಗ್ರೆನೇಡ್​ ಪತ್ತೆ

ಬೆಂಗಳೂರು : ಬೆಂಗಳೂರನ್ನು ಟಾರ್ಗೆಟ್‌ ಮಾಡಿ ಸ್ಫೋಟಿಸಲು ಸಂಚು ರೂಪಿಸಿದ್ದ ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಬಂಧಿಸಿದ್ದು, ಆರೋಪಿಗಳ ಪೈಕಿ ಓರ್ವನ ಮನೆಯಲ್ಲಿ ನಾಲ್ಕು ಗ್ರೆನೇಡ್ ಪತ್ತೆಯಾಗಿದೆ.
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಬಂಧಿತ ಆರೋಪಿ ಜಾಹೀದ್ ತಬ್ರೇಜ್ ಮನೆಯಲ್ಲಿ ಗ್ರೆನೇಡ್ ಇಟ್ಟಿರುವುದನ್ನು​ ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಜುನೈದ್ ಎಂಬಾತ ವಿದೇಶದಲ್ಲಿದ್ದುಕೊಂಡು ಅಪರಿಚಿತ ವ್ಯಕ್ತಿಯಿಂದ ಜಾಹೀದ್‌ಗೆ ಗ್ರೆನೇಡ್ ಪೂರೈಕೆ ಮಾಡಿಸಿದ್ದ ಎನ್ನಲಾಗಿದೆ.
ಈ ಬಗ್ಗೆ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದ ಜಂಟಿ ಪೊಲೀಸ್‌ ಆಯುಕ್ತ ಡಾ. ಎಸ್‌ ಡಿ ಶರಣಪ್ಪ, “ಶಂಕಿತ ಐವರು ಉಗ್ರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಆರೋಪಿ ಜಾಹೀದ್‌ ಎಂಬಾತ ಈಗ ವಿದೇಶದಲ್ಲಿರುವ ಪ್ರಮುಖ ಆರೋಪಿ ಜತೆಗೆ ಸಂಪರ್ಕದಲ್ಲಿದ್ದ ಎಂದು ತಿಳಿಸಿದ್ದಾರೆ.
ಜಾಹೀದ್ ಪ್ರಮುಖ ಗ್ರೆನೇಡ್‌ ಅನ್ನು ತನ್ನ ಮನೆಯಲ್ಲಿ ಸುರಕ್ಷಿತವಾಗಿಟ್ಟಿದ್ದ. ಆರೋಪಿ ನೀಡಿದ ಮಾಹಿತಿ ಮೇರೆಗೆ ಬಾಂಬ್ ಸ್ಕ್ವಾಡ್ ಕರೆದುಕೊಂಡು ಸಿಸಿಬಿ ತಂಡ ಆರೋಪಿ ಮನೆ ಪರಿಶೀಲನೆ ನಡೆಸಿದೆ. ಈ ವೇಳೆ ನಾಲ್ಕು ಜೀವಂತ ಗ್ರೆನೇಡ್‌ಗಳು ಸಿಕ್ಕಿದೆ. ಆರೋಪಿ ಮನೆಯ ಬೀರುವಿನಲ್ಲಿ ಗ್ರೆನೇಡ್​​ಗಳನ್ನು ಬಟ್ಟೆಯಲ್ಲಿ ಸುತ್ತಿ​ ಸುರಕ್ಷಿತವಾಗಿಟ್ಟಿದ್ದ. ಗ್ರೆನೇಡ್​ ಜಪ್ತಿ ಮಾಡಲಾಗಿದೆ ಎಂದರು.
ಬೇರೊಬ್ಬ ವ್ಯಕ್ತಿಯ ಮೂಲಕ ಗ್ರೆನೇಡ್ ಪಾರ್ಸಲ್ ನೀಡಲಾಗಿದೆ. ಇದನ್ನು ಪಾರ್ಸಲ್‌ ಮಾಡಿದರವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಇದಕ್ಕಾಗಿ ಸಿಸಿಬಿ ವಿಶೇಷ ತಂಡ ರಚಿಸಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿದೇಶದಲ್ಲಿರುವ ಆರೋಪಿ ಪತ್ತೆಗಾಗಿ ಬೇರೆ ಬೇರೆ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಸೆ.12ರಂದು ಚಂದಾವರ ಹನುಮಂತ ದೇವಸ್ಥಾನದಲ್ಲಿ ರಾಮತಾರಕ ಮಂತ್ರ ಪಠಣ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement