ಅಮೆರಿಕ ನೌಕಾಪಡೆ ಮುಖ್ಯಸ್ಥರಾಗಿ ಇದೇ ಮೊದಲ ಬಾರಿಗೆ ಮಹಿಳೆ ಆಯ್ಕೆ

ವಾಷಿಂಗ್ಟನ್: ಅಮೆರಿಕದ ನೌಕಾಪಡೆ ಮುನ್ನಡೆಸಲು ಅಡ್ಮಿರಲ್ ಲಿಸಾ ಫ್ರಾಂಚೆಟ್ಟಿ ಅವರನ್ನು ನಾಮನಿರ್ದೇಶನ ಮಾಡುವುದಾಗಿ ಅಧ್ಯಕ್ಷ ಜೋ ಬೈಡನ್‌ ಶುಕ್ರವಾರ ಪ್ರಕಟಿಸಿದ್ದಾರೆ. ಈ ಸ್ಥಾನಕ್ಕೆ ನೇಮಕವಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಲಿಸಾ ಫ್ರಾಂಚೆಟ್ಟಿ ಪಾತ್ರರಾಗಿದ್ದಾರೆ. ಅವರು ಜಂಟಿ ಚೀಫ್ಸ್ ಆಫ್ ಸ್ಟಾಫ್‌ನಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಆದರೆ ಸೆನೆಟ್ ಅವರ ಹೆಸರನ್ನು ದೃಢೀಕರಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ, ಸೆನೆಟ್ ಅವರ ನೇಮಕಾತಿಯನ್ನು ಅನುಮೋದಿಸಿದರೆ, ಅವರು ಅಮೆರಿಕದಲ್ಲಿ ಯಾವುದೇ ಮಿಲಿಟರಿ ಸೇವೆಗೆ ಮುಖ್ಯಸ್ಥರಾಗುವ ಮೊದಲ ಮಹಿಳೆಯಾಗಲಿದ್ದಾರೆ.
ಫ್ರಾಂಚೆಟ್ಟಿ 1985 ರಲ್ಲಿ ನೌಕಾಪಡೆಗೆ ಸೇರಿದರು. ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾಪಡೆಯಲ್ಲಿ ನಾಲ್ಕು-ಸ್ಟಾರ್ ಅಡ್ಮಿರಲ್ ಶ್ರೇಣಿಯನ್ನು ಪಡೆದ ಎರಡನೇ ಮಹಿಳೆಯಾಗಿದ್ದಾರೆ. ಅವರು ಯುರೋಪ್ ಮತ್ತು ಆಫ್ರಿಕಾದಲ್ಲಿ ಅಮೆರಿಕ ನೌಕಾ ಪಡೆಗಳ ಉಪ ಕಮಾಂಡರ್ ಆಗಿದ್ದರು ಮತ್ತು ಯುದ್ಧದ ಕೌಶಲ್ಯಾಭಿವೃದ್ಧಿಗಾಗಿ ನೌಕಾ ಕಾರ್ಯಾಚರಣೆಗಳ ಉಪ ಮುಖ್ಯಸ್ಥರಾಗಿದ್ದರು. ಅವರು ಸೆಪ್ಟೆಂಬರ್ 2022 ರಲ್ಲಿ ನೌಕಾ ಕಾರ್ಯಾಚರಣೆಗಳ ಉಪ ಮುಖ್ಯಸ್ಥರಾದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement