ಲೋಕಸಭೆ ಚುನಾವಣೆ : ಜೆಡಿಎಸ್-ಬಿಜೆಪಿ ಮೈತ್ರಿ ಊಹಾಪೋಹಕ್ಕೆ ತೆರೆ ಎಳೆದ ದೇವೇಗೌಡರು-ಅವರು ಹೇಳಿದ್ದೇನು..?

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿಯಾಗುವ ಸಾಧ್ಯತೆ ಕುರಿತು ಇದ್ದ ಊಹಾಪೋಹಗಳಿಗೆ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ತೆರೆ ಎಳೆದಿದ್ದಾರೆ.
ಇಂದು, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲುತ್ತೇವೆ ಎಂಬುದು ಗೊತ್ತಿಲ್ಲ. ಆದರೆ ಜೆಡಿಎಸ್‌ ಸ್ವತಂತ್ರವಾಗಿ ಹೋರಾಟ ಮಾಡುತ್ತದೆ. ನಾನು ಮುಖ್ಯಮಂತ್ರಿಯಾದೆ, ಪ್ರಧಾನಿಯಾದೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಈ ಪಕ್ಷ ಅಳಿಸಿ ಹಾಕುತ್ತೇವೆ ಅಂದರೆ ಅದು ಸಾಧ್ಯವಾಗದ ಮಾತು. ನಮ್ಮ 19 ಶಾಸಕರು, 7 ವಿಧಾನಪರಿಷತ್ ಸದಸ್ಯರ ಜೊತೆ ಕುಳಿತು ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಜಿ.ಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿಸಲಾಗಿದೆ. ಪಕ್ಷಕ್ಕಾಗಿ ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಪಕ್ಷವನ್ನು ಬಲವರ್ಧನೆ ಮಾಡುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗೆ ಬೇಕಾದಾಗ ಜೆಡಿಎಸ್‌ ಪಕ್ಷ ಜಾತ್ಯತೀತವಾಗುತ್ತದೆ. ಅವರಿಗೆ ನಮ್ಮ ಅಗತ್ಯವಿಲ್ಲದೆ ಇದ್ದಾಗ ನಮ್ಮದು ಜಾತ್ಯತೀತ ಪಕ್ಷವಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.
ಇತ್ತೀಚಿಗೆ ಬೆಂಗಲೂರಲ್ಲಿ ನಡೆದ ವಿಪಕ್ಷಗಳ ಮೈತ್ರಿಕೂಟದ ಸಭೆಗೆ ಆಹ್ವಾನ ನೀಡದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಆಹ್ವಾನ ನೀಡಲು ಬಯಸಿದ್ದರು, ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಕೆಲವರು ಅದಕ್ಕೆ ವಿರೋಧಿಸಿದರು. ಹೀಗಾಗಿ ನಮಗೆ ಆಹ್ವಾನ ನೀಡಲಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕತೆ ಬಗ್ಗೆ ಮಾತನಾಡುತ್ತಾರೆ. ನೀವು ಮಾತನಾಡುವ ಮಾತು ಹೃದಯದ ಅಂತರಾಳದಿಂದ ಬರಬೇಕು. ಅಧಿಕಾರ ಬರುತ್ತದೆ ಹೋಗುತ್ತದೆ, ಆದರೆ ನೈತಿಕತೆ ಮುಖ್ಯ ಎಂದು ಕಿಡಿಕಾರಿದರು.

ಪ್ರಮುಖ ಸುದ್ದಿ :-   ಸಾಲದ ಹಣ ಮರಳಿ ಕೊಡಲು ತಡವಾಗಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ : ಮನನೊಂದು ರೈತ ಆತ್ಮಹತ್ಯೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement