ಮದುವೆಯಾಯ್ತೋ .?… ಇಲ್ಲವೋ? : ಭಾರತದ ಮಹಿಳೆ ಅಂಜು- ಆಕೆಯ ಪಾಕಿಸ್ತಾನಿ ಫೇಸ್‌ಬುಕ್ ಸ್ನೇಹಿತ ಹೇಳಿದ್ದೇನು..?

34 ವರ್ಷದ ವಿವಾಹಿತ ಭಾರತೀಯ ಮಹಿಳೆ ಮತ್ತು ಎರಡು ಮಕ್ಕಳ ತಾಯಿ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾಳನ್ನು ಮದುವೆಯಾಗಿದ್ದಾಳೆ ಎಂಬ ವರದಿಗಳ ನಂತರ ಇಬ್ಬರೂ ಈ ವರದಿಗಳನ್ನು ನಿರಾಕರಿಸಿದ್ದಾರೆ ಎಂದು ಇಂಡಿಯಾ ಟುಡೆ ಮಾಧ್ಯಮ ಪೋರ್ಟಲ್ ವರದಿ ಮಾಡಿದೆ.
ಅಂಜು ಇಸ್ಲಾಂಗೆ ಮತಾಂತರಗೊಂಡ ನಂತರ ಸ್ಥಳೀಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ ಎಂದು ಪಾಕಿಸ್ತಾನಿ ಪೊಲೀಸರು ಖಚಿತಪಡಿಸಿದ ನಂತರ ಅಂಜು ಹಾಗೂ ನಸ್ರುಲ್ಲಾ ಇಬ್ಬರೂ ಮದುವೆಯಾಗಿರುವುದನ್ನು ನಿರಾಕರಿಸಲಾಗಿದೆ. ಅಂಜು ಪಾಕಿಸ್ತಾನದ ವೀಸಾದಲ್ಲಿ ಕಾನೂನುಬದ್ಧವಾಗಿ ಅಲ್ಲಿಗೆ ಪ್ರಯಾಣಿಸಿದ್ದಾಳೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ನಸ್ರುಲ್ಲಾ ಮದುವೆಯ ವರದಿಗಳನ್ನು ಅಲ್ಲಗಳೆದಿದ್ದಾರೆ. “ಇಲ್ಲ, ಇದೆಲ್ಲವೂ ಸುಳ್ಳು, ವದಂತಿಗಳು ಹರಡುತ್ತಿವೆ, ನಮ್ಮ ಮದುವೆ ನಡೆದಿಲ್ಲ” ಎಂದು ಅವರು ಹೇಳಿದ್ದಾರೆ.
ಅಂಜು ಅಪಾಯದಲ್ಲಿರುವ ಕಾರಣ ನ್ಯಾಯಾಲಯದ ಮುಂದೆ ಹಾಜರಾಗಿ ಭದ್ರತೆ ಕೋರಿದ್ದೇವೆ. ಅಂಜು ವಿದೇಶಿ ಮಹಿಳೆ ಎಂಬ ಕಾರಣಕ್ಕೆ ಸರ್ಕಾರ ನಮಗೆ 50 ಪೊಲೀಸ್ ಅಧಿಕಾರಿಗಳ ಭದ್ರತೆ ಒದಗಿಸಿದೆ ಎಂದು ಅವರು ಹೇಳಿದರು.
ಮದುವೆ ಪ್ರಮಾಣ ಪತ್ರದ ಸತ್ಯಾಸತ್ಯತೆಯನ್ನು ಅಲ್ಲಗಳೆದ ಅವರು, ಸುಳ್ಳು ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದಿದ್ದಾರೆ. ಅಂಜು ನನ್ನ ಆತ್ಮೀಯ ಸ್ನೇಹಿತೆ, ಅಂಜು ಪಾಕಿಸ್ತಾನದಲ್ಲಿರುವ ವಿದೇಶಿ ಪ್ರಜೆ. ಆಕೆಯ ಜೀವ ಅಪಾಯದಲ್ಲಿದೆ. ಆಕೆಯ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಯಬಹುದು. ಇಲ್ಲಿ ವಿವಿಧ ರೀತಿಯ ಜನರಿದ್ದಾರೆ. ನಾವು ಅವಳನ್ನು ರಕ್ಷಿಸಲು ಬಯಸುತ್ತೇವೆ, ಅದಕ್ಕಾಗಿಯೇ ನಾವು ನ್ಯಾಯಾಲಯದ ಮುಂದೆ ಹಾಜರಾಗಿದ್ದೇವೆ ಎಂದು ನಸ್ರಲ್ಲಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

ವೈರಲ್‌ ಆಗಿರುವುದು ನನ್ನ ಮದುವೆಯ ಪ್ರಮಾಣಪತ್ರವಲ್ಲ. ಇವು ಸುಳ್ಳು ವದಂತಿಗಳು ಎಂದು ಹೇಳಿದ್ದಾರೆ.
ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ನಸ್ರುಲ್ಲಾ ಅವರು, “ಬುರ್ಖಾ ಧರಿಸುವುದು ಇಲ್ಲಿನ ಸಂಪ್ರದಾಯ. ಯಾರೂ ಆಕೆಯನ್ನು ಗುರುತಿಸದಂತೆ ಅಂಜು ಅದನ್ನು ಧರಿಸಿದ್ದಳು.. ಅವಳು ಅವಳ ಧರ್ಮವನ್ನು ಈಗಲೂ ಪಾಲಿಸುತ್ತಾಳೆ ಎಂದು ಹೇಳಿದ್ದಾರೆ. ಅವಳು ನನ್ನ ಆತ್ಮೀಯ ಸ್ನೇಹಿತೆ. ಅವಳು ಪ್ರವಾಸಿ ವೀಸಾದಲ್ಲಿ ಬಂದಿದ್ದಳು. ಅವಳು ಪಾಕಿಸ್ತಾನವನ್ನು ನೋಡಬೇಕೆಂದು ಬಯಸಿದ್ದಳು ಎಂದು ನಸ್ರುಲ್ಲಾ ಹೇಳಿದ್ದಾರೆ.
ವಿಚ್ಛೇದನದ ನಂತರ ಅಂಜು ಅವರನ್ನು ಮದುವೆಯಾಗುತ್ತೀರಾ ಎಂದು ಕೇಳಿದಾಗ ಆತ “ಅದು ಅವಳ ನಿರ್ಧಾರ, ಅವಳು ಹಾಗೆ ಹೇಳಿದರೆ, ನಾನು ಆಗುತ್ತೇನೆ. ಆದರೆ ಸದ್ಯಕ್ಕೆ ಅವಳು ಭಾರತಕ್ಕೆ ಹಿಂತಿರುಗುತ್ತಿದ್ದಾಳೆ. ವೀಸಾ ಅವಧಿ ಆಗಸ್ಟ್ 4 ರಂದು ಮುಕ್ತಾಯಗೊಳ್ಳುತ್ತದೆ ಎಂದು ಹೇಳಿದ್ದಾನೆ.

ಅಂಜು ಸಹ ಮದುವೆಯ ವರದಿಗಳನ್ನು ನಿರಾಕರಿಸಿದ್ದಾಳೆ. ನಸ್ರುಲ್ಲಾ ಮತ್ತು ನಾನು ಮದುವೆಯಾಗಿದ್ದೇವೆ ಎಂಬ ಹೇಳಿಕೆಗಳು ಸುಳ್ಳು, ಇಲ್ಲಿ ನಾನು ಭಾರತಕ್ಕೆ ಹಿಂತಿರುಗುವುದಕ್ಕೆ ಪ್ರಕ್ರಿಯೆ ಇದೆ, ಅದಕ್ಕಾಗಿಯೇ ನಾನು ಅಲ್ಲಿಗೆ ಹೋಗಿದ್ದೆ. ನಾವು ನ್ಯಾಯಾಲಯಕ್ಕೆ ಹೋಗಲಿಲ್ಲ, ನಾವು ಕೆಲವು ದಾಖಲೆಗಳ ಕೆಲಸಕ್ಕಾಗಿ ಪೊಲೀಸ್ ಠಾಣೆಗೆ ಹೋಗಿದ್ದೆವು ಎಂದು ತಿಳಿಸಿದ್ದಾರೆ.
ವದಂತಿಗಳು ಹಬ್ಬಿವೆ, ಆದರೆ ನಾವು ಮದುವೆಯಾಗಲಿಲ್ಲ” ಎಂದು ಹೇಳಿದ್ದಾಳೆ.
ನ್ಯಾಯಾಲಯದ ಹೊರಗೆ ಬುರ್ಖಾ ಧರಿಸಿರುವ ಬಗ್ಗೆ ಉತ್ತರಿಸಿದ ಅವಳು, ಅದು ಬುರ್ಖಾ ಅಲ್ಲ. ಅದು ಬೇರೆಯೇ ಆಗಿದೆ. ನಾವು ಹೊರಗೆ ಹೋಗುವಾಗ, ಹೀಗೆ ಮುಚ್ಚಿಕೊಳ್ಳುವ ಅಗತ್ಯವಿದೆ, ಅದಕ್ಕಾಗಿಯೇ ನಾನು ಅದನ್ನು ಧರಿಸಿದ್ದೇನೆ.ನಾವು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಹೊರಗೆ ಹೋಗಿದ್ದೇವೆ ಅಷ್ಟೆ. ಆದರೆ ನಾವು ಮದುವೆಯಾಗಲಿಲ್ಲ ಎಂದು ಹೇಳಿದ್ದಾಳೆ.
ಮಲಕಂಡ್ ವಿಭಾಗದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ ಅವರು ಅಂಜು (35) ಮತ್ತು ನಸ್ರುಲ್ಲಾ (29) ಅವರ ನಿಕ್ಕಾವನ್ನು ದೃಢಪಡಿಸಿದರು, ಮಹಿಳೆ ಇಸ್ಲಾಂಗೆ ಮತಾಂತರಗೊಂಡ ನಂತರ ಫಾತಿಮಾ ಎಂಬ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಅಮೆರಿಕದಲ್ಲಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement