ಸೂತಕವೆಂದು ಬಾಣಂತಿ-ಶಿಶುವನ್ನು ಊರ ಹೊರಗಿಟ್ಟ ಕುಟುಂಬಸ್ಥರು: ಅನಾರೋಗ್ಯದಿಂದ ಮಗು ಸಾವು

ತುಮಕೂರು : ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗೆ ಇರಿಸಿದ್ದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಆಘಾತಕಾರಿ ಘಟನೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಗುವು ವಿಪರೀತ ಶೀತದಿಂದ ಬಳಲಿದ ನಂತರ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಗ್ರಾಮದ ಸಿದ್ದೇಶ ಮತ್ತು ವಸಂತಾ ದಂಪತಿಯ ಮಗು ಮೃತಪಟ್ಟಿದೆ.
ಕುಟುಂಬಸ್ಥರು ಮೈಲಿಗೆ ಎಂಬ ಕಾರಣದಿಂದ ಗಾಳಿ, ಮಳೆ ಇದ್ದರೂ ಕೂಡ ಮಗು ಮತ್ತು ಬಾಣಂತಿಯನ್ನು ಊರ ಹೊರಗೆ ಇರಿಸಲಾಗಿತ್ತು. ಇದರಿಂದ ಮಗು ಅನಾರೋಗ್ಯಕ್ಕೆ ತುತ್ತಾಯಿತು ಎನ್ನಲಾಗಿದೆ. ತಾಯಿ ಕಳೆದ ತಿಂಗಳು ಜೂನ್ 22ರಂದು ಅವಳಿ‌ ಮಕ್ಕಳಿಗೆ ಜನ್ಮ ನೀಡಿದ್ದು, ಏಳು ತಿಂಗಳಲ್ಲಿ ಹೆರಿಗೆ ಆಗಿದ್ದರಿಂದ ಒಂದು ಮಗು ಮೃತಪಟ್ಟಿದೆ ಎನ್ನಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement