ಅಯ್ಯೋ ದೇವ್ರೆ…: ಐಫೋನ್ ಖರೀದಿಸಲು ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿದ ದಂಪತಿ….!

ಕೋಲ್ಕತ್ತಾ: ಪಶ್ಚಿಮ ಬಂಗಾಳದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ದಂಪತಿ ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ದಂಪತಿ ರೀಲ್‌ಗಳನ್ನು ಮಾಡಲು ದುಬಾರಿ ಐಫೋನ್ ಖರೀದಿಸಿದ್ದಾರೆ ಎನ್ನಲಾಗಿದೆ. ಈ ವಿಲಕ್ಷಣ ಬೆಳವಣಿಗೆಯು ರಾಜ್ಯದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ತನಿಖೆ ನಡೆಯುತ್ತಿದ್ದು, ಮಗುವಿನ ತಾಯಿ ಸತಿ ಎಂಬವಳನ್ನು ಈಗಾಗಲೇ ಬಂಧಿಸಲಾಗಿದೆ.
ಸಿಕ್ಕಿಬಿದ್ದಿದ್ದು ಹೇಗೆ….?
ಕುತೂಹಲಕಾರಿಯಾಗಿ, ದಂಪತಿ ಮಗುವನ್ನು ಮಾರಾಟ ಮಾಡಿದ್ದರ ಬಗ್ಗೆ ನೆರೆಹೊರೆಯವರು ಎಚ್ಚರಿಸಿದ್ದಾರೆ. ಪನಿಹಟಿ ಗಾಂಧಿನಗರ ಪ್ರದೇಶದಲ್ಲಿನ ಅವರ ನೆರೆಹೊರೆಯವರು ಮಗುವಿನ ಅನುಪಸ್ಥಿತಿ ಗಮನಿಸಿದ ನಂತರ ಮತ್ತು ಗಂಡ-ಹೆಂಡತಿ ನಡವಳಿಕೆಯಲ್ಲಿ ಹಠಾತ್ ಬದಲಾವಣೆ ಗಮನಿಸಿದ ನಂತರ ಅನುಮಾನಗೊಂಡರು.
ಇವರು ದಿನಗಳ ಹಿಂದೆ ತಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಲು ಹೆಣಗಾಡುತ್ತಿದ್ದರು ಮತ್ತು ಇದ್ದಕ್ಕಿದ್ದಂತೆ ಅವರು ಐಫೋನ್ ಖರೀದಿಸಿದರು ಮತ್ತು ರೀಲ್‌ಗಳನ್ನು ಚಿತ್ರೀಕರಿಸಲು ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಮಾಡಿದರು. ಸಂಶಯಬಂದ ನೆರೆಹೊರೆಯವರು ಮಗು ಎಲ್ಲಿದೆ ಎಂದು ಕೇಳಿದಾಗ, ದಂಪತಿ ಹಣಕ್ಕಾಗಿ ತಮ್ಮ ಮಗನನ್ನು ಮಾರಾಟ ಮಾಡಿರುವುದನ್ನು ಒಪ್ಪಿಕೊಂಡರು.

ಪ್ರಮುಖ ಸುದ್ದಿ :-   'ಪ್ರಿಯಾಂಕಾ ಗಾಂಧಿ ವಿರುದ್ಧ ಪಕ್ಷದಲ್ಲೇ ದೊಡ್ಡ ಪಿತೂರಿ...ಜೂನ್ 4ರ ನಂತರ ಕಾಂಗ್ರೆಸ್ ಅಣ್ಣ-ತಂಗಿ ಬಣಗಳಾಗಿ ವಿಭಜನೆ' : ಕಾಂಗ್ರೆಸ್‌ ಮಾಜಿ ನಾಯಕನ ಸ್ಫೋಟಕ ಹೇಳಿಕೆ

ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಖಾರ್ದಾ ಪ್ರದೇಶದಲ್ಲಿ ಮಹಿಳೆಯೊಬ್ಬರ ಬಳಿ ಇದ್ದ ಮಗುವನ್ನು ರಕ್ಷಿಸಲಾಗಿದೆ. ಮೊಬೈಲ್ ಫೋನ್ ಖರೀದಿಸಲು ಹಣಕ್ಕಾಗಿ ದಂಪತಿ ತಮ್ಮ ಮಗನನ್ನು ಈ ಮಹಿಳೆಗೆ ಮಾರಾಟ ಮಾಡಿದ್ದರು. ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಏಳು ವರ್ಷದ ಮಗಳಿದ್ದಾಳೆ, ಆದರೆ ದಂಪತಿ ಮಾದಕ ವ್ಯಸನದಲ್ಲಿ ತೊಡಗುತ್ತಾರೆ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.

ಮಗಳನ್ನೂ ಮಾರಾಟ ಮಾಡಲು ಬಯಸಿದ್ದರು….
ಸ್ಥಳೀಯ ಕೌನ್ಸಿಲರ್ ಹೇಳಿಕೆಯ ಪ್ರಕಾರ, ದಂಪತಿ ತಮ್ಮ ಮಗಳನ್ನೂ ಮಾರಾಟ ಮಾಡಲು ಹೊರಟಿದ್ದರು. ಸ್ಥಳೀಯ ಕೌನ್ಸಿಲರ್ ತಾರಕ್ ಗುಹಾ ಪ್ರಕಾರ, “ಹುಡುಗನನ್ನು ಮಾರಾಟ ಮಾಡಿದ ನಂತರ, ಜಯದೇವ ಶನಿವಾರ ಮಧ್ಯರಾತ್ರಿ ಹುಡುಗಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ. ವಿಷಯ ತಿಳಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಜಯದೇವನನ್ನು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯಂತೆ, ಬಡತನ ಅಥವಾ ಇನ್ನಾವುದೇ ಕಾರಣಕ್ಕಾಗಿ ಹುಡುಗನನ್ನು ಮಾರಾಟ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಬ್ಯಾರಕ್‌ಪೋರ್ ಕಮಿಷನರೇಟ್‌ನ ಪೊಲೀಸ್ ಅಧಿಕಾರಿಯ ಪ್ರಕಾರ, ತನಿಖೆ ನಡೆಯುತ್ತಿದೆ ಮತ್ತು ಪ್ರಕರಣವನ್ನು ಎಲ್ಲಾ ಕೋನಗಳಿಂದ ನೋಡಲಾಗುತ್ತಿದೆ.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement