ಟವರ್‌ನ 13ನೇ ಮಹಡಿಗೆ ಏರಿದ ಭಾರತೀಯ ರಾಕ್ ಹೆಬ್ಬಾವು…!

ಮುಂಬೈ: ನಾಲ್ಕು ಅಡಿ ಉದ್ದದ ಭಾರತೀಯ ರಾಕ್ ಹೆಬ್ಬಾವು (ಕಪ್ಪು-ಬಾಲದ ಹೆಬ್ಬಾವು) ಮುಂಬೈನ ಘಾಟ್‌ಕೋಪರ್‌ನ (ಪಶ್ಚಿಮ) ಗೋಪುರದ 13 ನೇ ಮಹಡಿಯ ಟೆರೇಸ್‌ಗೆ ಹೇಗೋ ಏರಿದ ಘಟನೆ ನಡೆದಿದ್ದು, ಅದನ್ನು ಈಗ ರಕ್ಷಿಸಲಾಗಿದೆ. ಈ ಹಾವು ಅಷ್ಟು ಎತ್ತರವನ್ನು ಹೇಗೆ ತಲುಪಿತು ಎಂಬುದೇ ಈಗ ಕೌತುಕವಾಗಿದೆ.
ಪ್ರಾಣಿ ಪ್ರಿಯರು ಮತ್ತು ನಿವಾಸಿಗಳು ಮುಂಬೈನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಪ್ರಾಣಿ ಕಾರ್ಯಕರ್ತ ಸೂರಜ್ ಸಹಾ ಅವರಿಗೆ ಮಾಹಿತಿ ನೀಡಿದರು. ಸಹಾ ಅವರು ತಮ್ಮ ತಂಡದೊಂದಿಗೆ ಮಂಗಳವಾರದಂದು ಘಾಟ್‌ಕೋಪರ್ (ಪಶ್ಚಿಮ)ದ ಎಲ್‌ಬಿಎಸ್ ರಸ್ತೆಯಲ್ಲಿರುವ ವ್ರಜ ಪ್ಯಾರಡೈಸ್ ಕಟ್ಟಡದ ಟೆರೇಸ್ ಮೇಲೆ ಕುಳಿತಿದ್ದ ಹೆಬ್ಬಾವಿನ ಅಸಾಮಾನ್ಯ ದೃಶ್ಯವನ್ನು ವೀಕ್ಷಿಸಿದರು. ಆದರೆ ಟೆರೇಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯದಿಂದಾಗಿ ಹೆಬ್ಬಾವು ಸಂಪೂರ್ಣವಾಗಿ ಒದ್ದೆ ಸಿಮೆಂಟ್‌ ಬಣ್ಣದಿಂದ ಕೂಡಿತ್ತು. ಅವರು ತಕ್ಷಣವೇ ರಾಜ್ಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಕ್ಷಿಪ್ರವಾಗಿ ಸ್ಪಂದಿಸಿದ ಮುಂಬೈ ರೇಂಜ್ ಫಾರೆಸ್ಟ್ ಆಫೀಸರ್ ರಾಕೇಶ್ ಭೋರ್ ತಂಡವು ಸ್ಥಳಕ್ಕೆ ಆಗಮಿಸಿತು. ಹಾಗೂ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಿತು. ಭಾರತೀಯ ರಾಕ್ ಹೆಬ್ಬಾವು ಸಂರಕ್ಷಿತ ವನ್ಯಜೀವಿ ಪ್ರಭೇದವಾಗಿದೆ. ಅದೃಷ್ಟವಶಾತ್, ಹೆಬ್ಬಾವನ್ನು ನೋಡಿದವರು ಅದಕ್ಕೆ ಯಾವುದೇ ಹಾನಿ ಮಾಡಲಿಲ್ಲ, ಇದು ಜನರಲ್ಲಿ ಹೆಚ್ಚುತ್ತಿರುವ ವನ್ಯಜೀವಿ ಜಾಗೃತಿಗೆ ಸಾಕ್ಷಿಯಾಗಿದೆ.
ಭಾರತೀಯ ರಾಕ್‌ ಹೆಬ್ಬಾವು ಸಾಮಾನ್ಯವಾಗಿ 3 ಮೀ (9 ಅಡಿ 10 ಇಂಚು) ವರೆಗೆ ಬೆಳೆಯುತ್ತದೆ. ಎಲ್ಲಾ ಹೆಬ್ಬಾವುಗಳಂತೆ, ಇದು ವಿಷರಹಿತವಾಗಿದೆ.
ಭಾರೀ ಮಳೆಯ ಸಮಯದಲ್ಲಿ ಹೆಬ್ಬಾವು ಮತ್ತು ಇತರ ಸರೀಸೃಪಗಳ ನೈಸರ್ಗಿಕ ಆವಾಸಸ್ಥಾನವು ಪ್ರವಾಹಕ್ಕೆ ತುತ್ತಾಗುತ್ತವೆ. ಹೀಗಾಗಿ ಎತ್ತರದ ಸ್ಥಳಗಳನ್ನು ಹುಡುಕುತ್ತವೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಅಲ್ಲದೆ, ಭಾರತೀಯ ರಾಕ್ ಹೆಬ್ಬಾವುಗಳು ಅರಣ್ಯಗಳಲ್ಲಿ ಅತ್ಯುತ್ತಮ ಆರೋಹಿಗಳು ಎಂದು ಹೇಳಲಾಗುತ್ತದೆ. ಏಕೆಂದರೆ ಅವುಗಳು ಮರಗಳನ್ನು ಮತ್ತು ಕಲ್ಲಿನ ಮೇಲ್ಮೈಗಳನ್ನು ಸುಲಭವಾಗಿ ಏರುತ್ತವೆ.

ಪ್ರಮುಖ ಸುದ್ದಿ :-   'ಹಾವಿನ ತಲೆಗಾಗಿ ಹೋಗಿದ್ದೇವೆ....': ಪಾಕ್ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯ ಬಗ್ಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement