ಮದುವೆಯಾಗಲುನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಬ್ಬಿಣದ ರಾಡ್‌ ನಿಂದ ಹೊಡೆದು ಕೊಂದ ಸೋದರ ಸಂಬಂಧಿ

ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯಾ ನಗರದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿನಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.
ನರ್ಗೀಸ್ ಎಂದು ಗುರುತಿಸಲಾದ ಯುವತಿ ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿನಿ. ಪೊಲೀಸರ ಪ್ರಕಾರ, ಆಕೆಯನ್ನು ಮದುವೆಯಾಗಲು ನಿರಾಕರಿಸಿದ ಕಾರಣ ಅವಳ ಸ್ವಂತ ಸೋದರಸಂಬಂಧಿಯೇ ಅವಳನ್ನು ಕೊಂದಿದ್ದಾನೆ. ದೆಹಲಿಯ ಅರಬಿಂದೋ ಕಾಲೇಜ್ ಬಳಿಯ ಮಾಳವೀಯ ನಗರದ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಕೊಲೆಗೆ ಸಂಬಂಧಿಸಿದಂತೆ ಆಕೆಯ 28 ವರ್ಷದ ಸೋದರಸಂಬಂಧಿ ಇರ್ಫಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇರ್ಫಾನ್ ಸರಿಯಾಗಿ ದುಡಿಯುತ್ತಿಲ್ಲ ಎಂಬ ಕಾರಣಕ್ಕೆ ಯುವತಿಯ ಮನೆಯವರು ಆತನಿಗೆ ನರ್ಗೀಸಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದರು. ಆತ ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿಗಾಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

ನರ್ಗೀಸ್ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ ನಂತರ ಇರ್ಫಾನ್ ಅಸಮಾಧಾನಗೊಂಡಿದ್ದಾನೆ. ನರ್ಗೀಸ್ ಮಾಳವೀಯ ನಗರದಲ್ಲಿ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಿದ್ದಳು ಮತ್ತು ಆಕೆ ಕೊಲೆಯಾದ ಪಾರ್ಕ್ ಮೂಲಕ ನಿಯಮಿತವಾಗಿ ಹಾದು ಹೋಗುತ್ತಿದ್ದಳು ಎಂದು ಆರೋಪಿ ಇರ್ಫಾನ್‌ನಿಗೆ ತಿಳಿದಿತ್ತು.
ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಇರ್ಫಾನ್ ಪಾರ್ಕ್ ತಲುಪಿ, ನರ್ಗಿಸ್ ಜೊತೆ ಮಾತನಾಡಲು ಬಯಸುವುದಾಗಿ ತಿಳಿಸಿದ್ದಾನೆ. ಆಕೆ ಮಾತನಾಡಲು ನಿರಾಕರಿಸಿದಾಗ ಕಬ್ಬಿಣದ ರಾಡ್‌ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತನಿಖೆ ವೇಳೆ ಇರ್ಫಾನ್ ಮೂರು ದಿನ ಮೊದಲೇ ಕೊಲೆಗೆ ಯೋಜನೆ ರೂಪಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದರು. ಪೊಲೀಸರಿಗೆ ಸಂತ್ರಸ್ತೆಯ ದೇಹದ ಬಳಿ ರಾಡ್ ಪತ್ತೆಯಾಗಿದೆ ಮತ್ತು ಆಕೆಯ ತಲೆಯ ಮೇಲೆ ಗಾಯಗಳಿದ್ದವು. ಹತ್ಯೆಗೆ ಸಂಬಂಧಿಸಿದಂತೆ ಇರ್ಫಾನ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ದಕ್ಷಿಣ ದೆಹಲಿಯ ಮಾಳವೀಯ ನಗರದ ಅರಬಿಂದೋ ಕಾಲೇಜು ಬಳಿ 25 ವರ್ಷದ ಯುವತಿಯ ಶವ ಪತ್ತೆಯಾಗಿದೆ ಎಂಬ ಮಾಹಿತಿ ನಮಗೆ ಬಂದಿತು. ಆಕೆಯ ದೇಹದ ಬಳಿ ಕಬ್ಬಿಣದ ರಾಡ್ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ರಕ್ತ ಆಕೆಯ ತಲೆಯಿಂದ ಒಸರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement