ಟೊಮೆಟೊ ತುಂಬಿಕೊಂಡು ಕೋಲಾರದಿಂದ ರಾಜಸ್ಥಾನಕ್ಕೆ ಹೊರಟಿದ್ದ ಲಾರಿ ನಾಪತ್ತೆ

ಕೋಲಾರ : ಇಡೀ ದೇಶದಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಬಂದ ಬೆನ್ನಿಗೇ ಈಗ ಟೊಮೆಟೊ ಕಳ್ಳತನ ಜಾಸ್ತಿಯಾಗಿದೆ. ಈಗ ಕೋಲಾರದಿಂದ ರಾಜಸ್ಥಾನಕ್ಕೆ 21 ಲಕ್ಷ ರೂ. ಮೌಲ್ಯದ ಟೊಮೆಟೊ ಲೋಡ್‌ ಮಾಡಿಕೊಂಡು ಹೊರಟಿದ್ದ ಲಾರಿ ಮಾರ್ಗ ಮಧ್ಯದಲ್ಲಿಯೇ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪೊಲೀಸ್‌ ದೂರು ದಾಖಲಾಗಿದೆ. ಕೋಲಾರ ಮಾರುಕಟ್ಟೆಯಿಂದ ರಾಜಸ್ಥಾನ ರಾಜ್ಯದ ಜೈಪುರ ನಗರಕ್ಕೆ ಲಾರಿ ಹೊರಟಿತ್ತು. ಕೋಲಾರದ ಮೆಹತ್ ಟ್ರಾನ್ಸ್ ಪೋರ್ಟ್ ಗೆ ಸೇರಿದ ಲಾರಿಯು ಜುಲೈ 27 ರಂದು ಹೊರಟಿದ್ದು, ಇಷ್ಟರಲ್ಲಾಗಲೇ ಜೈಪುರಕ್ಕೆ ತಲುಪಬೇಕಿತ್ತು. ಆದರೆ, ಲಾರಿ ಸಮೇತವಾಗಿ ಚಾಲಕ ನಾಪತ್ತೆಯಾಗಿದ್ದಾನೆ. ಚಾಲಕ ಫೋನ್‌ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಲ್ಲಿ ಸುಮಾರು ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ತುಂಬಲಾಗಿತ್ತು. ಇದರಿಂದ ಕಂಗಾಲಾಗಿರುವ ಮಂಡಿ ಮಾಲೀಕ ಕೋಲಾರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement