ಟೊಮೆಟೊ ಲಾರಿ ನಾಪತ್ತೆ ಪ್ರಕರಣ : ಗುಜರಾತಲ್ಲಿ ಲಾರಿ ಪತ್ತೆ, 21 ಲಕ್ಷ ರೂ. ಬೆಲೆಯ ಟೊಮೆಟೊ ಮಾರಾಟ ಮಾಡಿ ಚಾಲಕ ಪರಾರಿ

ಕೋಲಾರ: ಕೋಲಾರದ ಎಪಿಎಂಸಿಯಿಂದ ಸುಮಾರು 21 ಲಕ್ಷ ರೂ. ಮೌಲ್ಯದ ಟೊಮೆಟೊ ತುಂಬಿಕೊಂಡು ರಾಜಸ್ಥಾನಕ್ಕೆ ಒಯ್ಯುವಾಗ ನಾಪತ್ತೆಯಾಗಿದ್ದ ಲಾರಿ ಗುಜರಾತಿನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಹೋಗಬೇಕಿದ್ದ ಲಾರಿ ಗುಜರಾತ್​ನ ಅಹಮದಾಬಾದ್​ನಲ್ಲಿ ಪತ್ತೆಯಾಗಿದ್ದು, ಲಾರಿ ಚಾಲಕ ಟೊಮೆಟೊವನ್ನು ಅರ್ಧ ಬೆಲೆಗೆ ಮಾರಾಟ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಲಾರಿ ಚಾಲಕ ಅನ್ವರ್​ ಲಾರಿಯಲ್ಲಿ ಅಳವಡಿಸಿದ್ದ ಜಿಪಿಎಸ್ ಕಿತ್ತುಹಾಕಿ ಲಾರಿಯನ್ನು ರಾಜಸ್ಥಾನದ ಬದಲು ಅಹಮದಾಬಾದ್​ಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿ ಟೊಮೆಟೊವನ್ನು ಅರ್ಧ ದರಕ್ಕೆ ಮಾರಾಟ ಮಾಡಿ, ನಂತರ ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ.
ಟೊಮೆಟೊ ಮಾರಾಟದಿಂದ ಬಂದ ಹಣದೊಂದಿಗೆ ನಾಪತ್ತೆಯಾಗಿರುವ ಚಾಲಕ ಅನ್ವರ್ ವಿರುದ್ಧ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.
ಟೊಮೆಟೊ ದರದಲ್ಲಿ ಭಾರೀ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಟೊಮೆಟೊ ಕಳ್ಳತನದ ಅನೇಕ ಪ್ರಕರಣಗಳು ವರದಿಯಾಗಿವೆ. ಈ ಮಧ್ಯೆ ಕೋಲಾರದ ಎಪಿಎಂಸಿಯಿಂದ ಸುಮಾರು 21 ಲಕ್ಷ ಮೌಲ್ಯದ ಟೊಮೆಟೊ ಹೊತ್ತು ರಾಜಸ್ಥಾನ ಕಡೆ ಹೊರಟಿದ್ದ ಲಾರಿ ನಾಪತ್ತೆಯಾಗಿತ್ತು. ಕೋಲಾರ ಎಪಿಎಂಸಿ ಮಾರುಕಟ್ಟೆಯ ಮುನಿರೆಡ್ಡಿ ಎಂಬುವರು ಸುಮಾರು 21 ಲಕ್ಷ ರೂ. ಮೌಲ್ಯದ ಸುಮಾರು 750 ಕ್ರೇಟ್‌ (11 ಟನ್‌) ಟೊಮೆಟೊವನ್ನು ಜುಲೈ 27ರಂದು ರಾಜಸ್ಥಾನದ ಜೈಪುರಕ್ಕೆ ಮೆಹತ್‌ ಟ್ರಾನ್ಸ್‌ಪೋರ್ಟ್ ಗೆ ಸೇರಿದ ಲಾರಿಯ ಮೂಲಕ ಕಳುಹಿಸಿದ್ದರು. ಅದು ನಿಗದಿತ ಸಮಯಕ್ಕೆ ರಾಜಸ್ಥಾನದ ನಿಗದಿತ ಸಮಯಕ್ಕೆ ತಲುಪದ ಕಾರಣ ಅವರು ಲಾರಿ ಚಾಲಕನ ಮೊಬೈಲ್‌ ನಂಬರಿಗೆ ಸಂಪರ್ಕಿಸಲು ಪ್ರಯತ್ನಿಸದರೂ ಅದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement