ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಡಿ ಎಂಬ ವಿಪಕ್ಷಗಳ ಮೈತ್ರಿಕೂಟದ ಸಲಹೆ ನಡುವೆಯೂ ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಂಡ ಶರದ್‌ ಪವಾರ್‌

ಪುಣೆ: ವಿರೋಧ ಪಕ್ಷಗಳ ಮೈತ್ರಿಕೂಟದ ಹಿರಿಯ ನಾಯಕರಲ್ಲಿ ಒಬ್ಬರಾದ ಶರದ್ ಪವಾರ್ ಅವರು ಇಂದು, ಸೋಮವಾರ ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ಕಾರ್ಯಕ್ರಮಕ್ಕೆ ಹೋಗದಂತೆ ಒತ್ತಾಯಿಸಿದ ಅವರ ಮಿತ್ರಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರದ ಮಧ್ಯೆ, ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಹಾಗೂ ಶರದ್‌ ಪವಾರ್‌ ವೇದಿಕೆಯಲ್ಲಿ ಪರಸ್ಪರ ಆತ್ಮೀಯವಾಗಿ ಶುಭಾಶಯ ಕೋರಿದರು. ಕಾರ್ಯಕ್ರಮದ ಆರಂಭದಲ್ಲಿ, ಪ್ರಧಾನಿ ಮೋದಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ಬಳಿಗೆ ತೆರಳಿದರು.
ಲೋಕಮಾನ್ಯ ತಿಲಕ್‌ ಸ್ಮಾರಕ ಮಂದಿರ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರದ್ ಪವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಪ್ರಧಾನಿ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಎನ್‌ಸಿಪಿಯಲ್ಲಿ ಬಂಡಾಯವೆದ್ದು ಈಗ ಉಪಮುಖ್ಯಮಂತ್ರಿಯಾಗಿರುವ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಇದ್ದರು. ಪ್ರಧಾನಿ ಮೋದಿ ಅಜಿತ್ ಪವಾರ್ ಅವರನ್ನು ಅಭಿನಂದಿಸಿದರು.
ಪ್ರಧಾನಿ ಮೋದಿ ಮಾತನಾಡಿ, ಅಪನಂಬಿಕೆಯ ವಾತಾವರಣದಲ್ಲಿ ಅಭಿವೃದ್ಧಿ ಅಸಾಧ್ಯ. ಒಬ್ಬರಿಗೊಬ್ಬರು ನಂಬಿಕೆ ನಮ್ಮನ್ನು ಬಲಗೊಳಿಸುತ್ತದೆ ಎಂದು ಹೇಳಿದರು. ಸ್ವಾತಂತ್ರ್ಯದ ಐಕಾನ್ ಲೋಕಮಾನ್ಯ ಬಾಲಗಂಗಾಧರ ತಿಲಕ್ ಕುರಿತು ಮಾತನಾಡಿದ ಪ್ರಧಾನಿ ಮೋದಿ,”ಲೋಕಮಾನ್ಯ ತಿಲಕ್ ಅವರು ಯುವ ಪ್ರತಿಭೆಗಳನ್ನು ಗುರುತಿಸುವ ಈ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದರು ಎಂದರು.

ಪ್ರಮುಖ ಸುದ್ದಿ :-   ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

ಏಳು ವರ್ಷಗಳ ಹಿಂದೆ ಪ್ರಧಾನಿ ಮೋದಿ ಮತ್ತು ಶರದ್ ಪವಾರ್ ಕೊನೆಯ ಬಾರಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮಹಾರಾಷ್ಟ್ರದ ಅವರ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ, ಇಂದಿನ ಕಾರ್ಯಕ್ರಮಕ್ಕೆ ಹೋಗದಂತೆ ಒತ್ತಾಯಿಸಿತ್ತು. ಮಿತ್ರಪಕ್ಷಗಳು ಪವಾರ್ ಕಾರ್ಯಕ್ರಮದಿಂದ ದೂರ ಉಳಿಯಬೇಕೆಂದು ಹೇಳಿದ್ದವು.
ಶರದ್‌ ಪವಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ ಅವರ ಶಿವಸೇನೆ, ಅವರ ವಿರುದ್ಧ ಎದ್ದಿರುವ ಅನುಮಾನಗಳನ್ನು ನಿವಾರಿಸಲು ಅವರು ಸಮಾರಂಭಕ್ಕೆ ಹೋಗದೇ ಇರಬಹುದಿತ್ತು ಎಂದು ಹೇಳಿದೆ.
ಪ್ರಧಾನಿ ಮೋದಿ ಎನ್‌ಸಿಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು ಮತ್ತು ನಂತರ ಪಕ್ಷದಲ್ಲಿ ಒಡಕು ಮೂಡಿಸಿದರು ಮತ್ತು ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ಕೆಸರೆರಚಿದರು. ಇನ್ನೂ ಶರದ್ ಪವಾರ್ ಮೋದಿಯನ್ನು ಸ್ವಾಗತಿಸುತ್ತಾರೆ … ಇದು ಕೆಲವರಿಗೆ ಸರಿ ಹೋಗಿಲ್ಲ. ಇದು ಶರದ್ ಪವಾರ್‌ ಅವರಿಗೆ ಉತ್ತಮ ಅವಕಾಶವಾಗಿದೆ. ಕಾರ್ಯಕ್ರಮಕ್ಕೆ ಬೆನ್ನು ತಿರುಗಿಸಿ ಮತ್ತು ಜನರಲ್ಲಿ ಅವರ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸಿ” ಎಂದು ಉದ್ಧವ್ ಠಾಕ್ರೆ ಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. ಪವಾರ್ ಅವರು ವಿರೋಧ ಪಕ್ಷದ ಮೈತ್ರಿಕೂಟದ “ಪ್ರಮುಖ ನಾಯಕರಾಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement