ವೀಡಿಯೊ…| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

ಲಕ್ನೋ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಫೇಶಿಯಲ್ ಮಾಡಿಸಿಕೊಂಡ ಶಿಕ್ಷಕಿಯೊಬ್ಬರಿಗೆ ಮುಖ್ಯಾಧ್ಯಾಪಕಿಯೊಬ್ಬರು ಕಚ್ಚಿದ ಘಟನೆಯ ಹಸಿಯಾಗಿರುವಾಗಲೇ ಶಾಲೆಗೆ ತಡವಾಗಿ ಬಂದ ಆರೋಪದ ಮೇಲೆ ಪ್ರಾಂಶುಪಾಲರೊಬ್ಬರು ಶಿಕ್ಷಕಿಯೊಬ್ಬರಿಗೆ ಥಳಿಸಿರುವ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಗ್ರಾದ ಸೀಗಾನಾ ಗ್ರಾಮದ ಪೂರ್ವ-ಪ್ರೌಢಶಾಲೆಯ ಪ್ರಾಂಶುಪಾಲೆಯು ಶಿಕ್ಷಕಿ ಮೇಲೆ ಹಲ್ಲೆ ನದಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಹೊಡೆದಾಟದ ಸಮಯದಲ್ಲಿ ತನ್ನ ಬಟ್ಟೆಗಳನ್ನು ಹರಿದು ಹಾಕಲು ಶಿಕ್ಷಕಿ ಯತ್ನಿಸಿದ್ದಾರೆ ಎಂದು ಪ್ರಾಂಶಪಾಲರು ಆರೋಪಿಸಿದ್ದಾರೆ. ಮೇ 3 ರಂದು ಆಗ್ರಾದ ಪ್ರಾಥಮಿಕ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿಯನ್ನು ಪ್ರಾಂಶುಪಾಲರು ತರಾಟೆಗೆ ತೆಗೆದುಕೊಂಡ ನಂತರ ಜಗಳ ಪ್ರಾರಂಭವಾಯಿತು, ಇದು ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಪ್ರಾಂಶುಪಾಲೆ ತರಾಟೆಗೆ ತೆಗೆದುಕೊಂಡ ನಂತರ ಶಿಕ್ಷಕಿ ಅದಕ್ಕೆ ಪ್ರತಿಕ್ರಿಯಿಸಿದ್ದು, ಪ್ರಾಂಶುಪಾಲರು ಕೂಡ ಕಳೆದ ನಾಲ್ಕು ದಿನಗಳಿಂದ ತಡವಾಗಿ ಬರುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ಇಬ್ಬರ ನಡುವೆ ವಾಗ್ವಾದ ಜೋರಾಗಿ ಅದು ವಿಕೋಪಕ್ಕೆ ಹೋಗಿ
ದೈಹಿಕ ಹಲ್ಲೆಗೆ ಕಾರಣವಾಯಿತು. ನಂತರ ಪ್ರಾಂಶುಪಾಲರು ಮತ್ತು ಶಿಕ್ಷಕರು ತೀವ್ರ ವಾಗ್ವಾದಕ್ಕಿಳಿದರು ಮತ್ತು ಅವಹೇಳನಕಾರಿ ಭಾಷೆ ಸಹ ಬಳಸಿದರು ಎನ್ನಲಾಗಿದೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸಿದರು, ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು. ಶಿಕ್ಷಕರು ಪ್ರಾಂಶುಪಾಲರ ಬಟ್ಟೆಯನ್ನು ಹರಿದು ಹಾಕುವುದರೊಂದಿಗೆ ವಾಗ್ವಾದ ಕೊನೆಗೊಂಡಿತು ಮತ್ತು ನಂತರ ಪ್ರಾಂಶುಪಾಲರು ಶಿಕ್ಷಕಿ ಕೂದಲನ್ನು ಎಳೆಯುವ ಮೂಲಕ ಪ್ರತೀಕಾರ ತೀರಿಸಿಕೊಂಡರು ಎಂದು ಹೇಳಲಾಗಿದೆ. ಇದರಿಂದ ಶಿಕ್ಷಕಿಯ ಕಣ್ಣಿಗೆ ಗಾಯಗಳಾಗಿವೆ.
ಘಟನೆ ಸಂಬಂಧ ಸಿಕಂದರಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಇಬ್ಬರು ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿರುವುದರಿಂದ ಇನ್ನೂ ಯಾವುದೇ ಔಪಚಾರಿಕ ಪ್ರಕರಣ ದಾಖಲಾಗಿಲ್ಲ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement