ಮಾನನಷ್ಟ ಪ್ರಕರಣ : ದೋಷಾರೋಪಣೆ ಸಮರ್ಥನೀಯವಲ್ಲ, ಕ್ಷಮೆ ಕೇಳುವುದಿಲ್ಲ ಎಂದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೋದಿ ಉಪನಾಮದ ಕುರಿತು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ. ಹಾಗೂ ತಾನು ತಪ್ಪಿತಸ್ಥನಲ್ಲ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆಯಲ್ಲಿ ತಮ್ಮ ಶಿಕ್ಷೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
“ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ ಹೊಂದಿದ್ದಾರೆ? ಎಂದು ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾಡಿದ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗಾಗಿ ಬಿಜೆಪಿ ನಾಯಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ ಮೋದಿ ಅವರು 2019 ರಲ್ಲಿ ರಾಹುಲ್‌ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ರಾಹುಲ್‌ ಗಾಂಧಿ ತಮ್ಮ ಉತ್ತರದಲ್ಲಿ ಕ್ಷಮೆಯಾಚಿಸಲು ನಿರಾಕರಿಸಿದ ಕಾರಣಕ್ಕಾಗಿ ಪೂರ್ಣೇಶ ಮೋದಿ ತಮಗೆ “ಅಹಂಕಾರಿ” ಎಂಬ “ನಿಂದನೆ” ಪದಗಳನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ. “ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ನನ್ನ ಕ್ಷಮೆಯಾಚನೆಗೆ ಒತ್ತಾಯಿಸಲಾಗಿದೆ.ನನ್ನ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಮತ್ತು ಜನಪ್ರತಿನಿಧಿ ಕಾಯಿದೆ ಸಂಪೂರ್ಣ ದುರುಪಯೋಗವಾಗಿದೆ ಮತ್ತು ಈ ನ್ಯಾಯಾಲಯವು ಅದನ್ನು ಪರಿಗಣಿಸಬಾರದು ಮತ್ತು ತಾನು ಕ್ಷಮೆಯಾಚಿಸುವುದಿದ್ದರೆ ಅದನ್ನು ಮೊದಲೇ ಮಾಡುತ್ತಿದ್ದೆ ಎಂದು ಅಫಿಡವಿಟ್‌ನಲ್ಲಿ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಕೇರಳದ ವಯನಾಡ್‌ನಿಂದ ಲೋಕಸಭಾ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ, ತಮ್ಮ ಅಪರಾಧವನ್ನು “ಕ್ಷುಲ್ಲಕ” ಎಂದು ಹೇಳಿದ್ದು ಆದರೆ “ಅಸಾಧಾರಣ” ಪ್ರಕರಣ ಹೊಂದಿರುವುದಾಗಿ ಹೇಳಿದ್ದಾರೆ. ಮತ್ತು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದರಿಂದ ತಮಗೆ ಸರಿಪಡಿಸಲಾಗದ ಹಾನಿಯಾಗಿದೆ ಎಂದು ಸಲ್ಲಿಸಿದ್ದಾರೆ.
ತಮ್ಮ ಮೇಲಿನ ಅಪರಾಧ ನಿರ್ಣಯವನ್ನು ತಡೆಹಿಡಿಯಬೇಕೆಂದು ಪ್ರಾರ್ಥಿಸಿದ್ದಾರೆ. ತಾನು ಲೋಕಸಭೆಯ ನಡೆಯುತ್ತಿರುವ ಅಧಿವೇಶನಗಳಲ್ಲಿ ಮತ್ತು ನಂತರದ ಅಧಿವೇಶನಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕು ಎಂದು ಅವರು ಅಫಿಡವಿಟ್‌ನಲ್ಲಿ ಕೋರಿದ್ದಾರೆ.
‘ಮೋದಿ’ ಎಂಬ ಹೆಸರಿನಲ್ಲಿ ಯಾವುದೇ ಸಮುದಾಯ ಅಥವಾ “ಸಮಾಜ” ದಾಖಲೆಗಳಿಲ್ಲ ಮತ್ತು ಆದ್ದರಿಂದ, ಒಟ್ಟಾರೆಯಾಗಿ ಮೋದಿ ಸಮುದಾಯವನ್ನು ದೂಷಿಸುವ ಅಪರಾಧ ಉದ್ಭವಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದಕ್ಕೂ ಮುನ್ನ ಪೂರ್ಣೇಶ ಮೋದಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ವಿಧಿಸಿದ ವಿರುದ್ಧ ಗಾಂಧಿಯವರ ಮೇಲ್ಮನವಿಯನ್ನು ವಜಾಗೊಳಿಸುವಂತೆ ಕೋರಿದ್ದರು, ಅವರು ಮೋದಿ ಉಪನಾಮವನ್ನು ಹೊಂದಿರುವ ಎಲ್ಲರನ್ನೂ, ವಿಶೇಷವಾಗಿ ಗುಜರಾತ್‌ನ ‘ಮೋದ್ ವಣಿಕ್’ ಜಾತಿಗೆ ಸೇರಿದ ಜನರನ್ನು ಅಪಮಾನಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಜೂನ್ 21 ರಂದು, ಸುಪ್ರೀಂ ಕೋರ್ಟ್ ಗಾಂಧಿಯವರ ಮೇಲ್ಮನವಿಯ ಬಗ್ಗೆ ಮೋದಿ ಮತ್ತು ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೇಳಿತ್ತು.
ಜುಲೈ 15 ರಂದು ಸಲ್ಲಿಸಿದ ಮೇಲ್ಮನವಿಯಲ್ಲಿ, ಜುಲೈ 7 ರ ತೀರ್ಪಿಗೆ ತಡೆ ನೀಡದಿದ್ದರೆ, ಅದು ವಾಕ್, ಅಭಿವ್ಯಕ್ತಿ, ಆಲೋಚನೆ ಮತ್ತು ಹೇಳಿಕೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.
ರಾಜಕೀಯದಲ್ಲಿ ಶುದ್ಧತೆ” ಈ ಕಾಲದ ಅಗತ್ಯ ಎಂದು ಗಮನಿಸಿದ ಹೈಕೋರ್ಟ್ ಅಪರಾಧ ನಿರ್ಣಯಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ರಾಹುಲ್‌ ಗಾಂಧಿ ಅರ್ಜಿಯನ್ನು ವಜಾಗೊಳಿಸಿದೆ.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement