ಕುಮಟಾ: ಕುತೂಹಲಕ್ಕೆ ಕಾರಣವಾದ ಕಡಲತೀರದಲ್ಲಿ ಪತ್ತೆಯಾದ ಸಿಲಿಂಡರ್ ರೂಪದ ವಸ್ತು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಗ್ರಾಮದ ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತುವೊಂದು ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಭಾರೀ ಗಾತ್ರದ ಸಿಲಿಂಡರ್ ರೂಪದ ವಸ್ತು ತೇಲಿ ಬಂದು ಸಮುದ್ರ ತೀರಲ್ಲಿ ಬಿದ್ದಿತ್ತು. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕರಾವಳಿ ಕಾವಲು ಪಡೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ತಂಡ ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆದರೆ ಇದು ಯಾವ ವಸ್ತು ಎಂಬ ಬಗ್ಗೆ ನಿಖರವಾಗಿ ಅವರಿಗೂ ತಿಳಿದಿಲ್ಲ. ಇದು ಯಾವುದಾದರೂ ಹಡಗಿಗೆ ಸೇರಿದ ವಸ್ತುವಾಗಿರಬಹುದು ಎಂದು ಊಹಿಸಲಾಗಿದೆಯೇ ಹೊರತು ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದು ಆಳ ಸಮುದ್ರದಲ್ಲಿ ಹಡಗಿನಿಂದ ಕಳಚಿ ಬಿದ್ದಿದ್ದಾಗಿರಬಹುದು ಅಥವಾ ಹಡಗಿನಲ್ಲಿದ್ದ ಸಿಲಿಂಡರ್ ರೂಪದ ಈ ವಸ್ತು ಸಮುದ್ರ ಪಾಲಾಗಿ ಕಡಲ ಅಲೆಗೆ ಕೊಚ್ಚಿಕೊಂಡು ಸಮುದ್ರದ ತೀರದಕ್ಕೆ ಬಂದು ಬಿದ್ದಿರಬಹುದು ಎಂದು ಊಹಿಸಲಾಗಿದೆ. ಯಾಕೆಂದರೆ ಈ ಸಿಲಿಂಡರ್‌ ಒಳಗೆ ಮಾರ್ಕ್‌ ಮಾಡಿ ಇಂಗ್ಲಿಷ್‌ನಲ್ಲಿ ಗ್ಯಾಸ್‌ ಹಾಗೂ ಲಿಕ್ವಿಡ್‌ ಎಂದು ಬರೆಯಲಾಗಿದೆ. ಒಂದು ಫಲಕದ ಮೇಲೆ ಬರವಣಿಗೆ ಇದೆ. ದೊಡ್ಡ ದೊಡ್ಡ ಬೋಲ್ಟ್‌-ನಟ್‌ ಸಹ ಇದೆ. ಈ ವಸ್ತು ಈಗ ಅಗ್ನಿಶಾಮಕದಳದ ಸುಪರ್ದಿಯಲ್ಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವಿವರಗಳನ್ನು ಕಲೆ ಹಾಕಲಾಗುತ್ತಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement