ಸೈಬರ್​ ವಂಚಕರು ಕಳುಹಿಸಿದ ಲಿಂಕ್​ ಕ್ಲಿಕ್​ ಮಾಡಿ ಹಣ ಕಳಕೊಂಡ ವಿವಿ ಕುಲಪತಿ

ಹಾವೇರಿ : ಶಿಗ್ಗಾವಿ ತಾಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಅವರಿಗೆ ಸೈಬರ್ ವಂಚಕರು 60 ಸಾವಿರ ರೂ. ಪಂಗನಾಮ ಹಾಕಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ಕುರಿತು ಅವರೇ ಶಿಗ್ಗಾವಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಧಾರವಾಡ ಎಸ್‌ಬಿಐ ಬ್ಯಾಂಕ್‌ನ ನವೀಕುಮಾರ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ನನಗೆ ಫೋನ್ ಮಾಡಿದ್ದ. ‘ನಿಮ್ಮ ಫೋನ್ ಪೇಗೆ ಒಂದು ದಿನದ ಟ್ರಾಂಜಾಕ್ಷನ್ ಲಿಮಿಟೇಶನ್ 60 ಸಾವಿರ ರೂ. ಇದ್ದು, ಇದನ್ನು ಮುಂದುವರಿಸಲು ನಾವು ನಿಮ್ಮ ಫೋನ್‌ಗೆ ಲಿಂಕ್ ಕಳುಹಿಸುತ್ತೇನೆ. ಅದಕ್ಕೆ ನೀವು ಯಸ್‌ ಎಂದು ತಿಳಿಸಿದರೆ ಈ ಸೇವೆ ಮುಂದುವರಿಯುತ್ತದೆ ಎಂದು ಹೇಳಿದ್ದಾನೆ. ಅಲ್ಲದೆ, ಟ್ರೂ ಕಾಲರ್​ನಲ್ಲಿ ಬ್ಯಾಂಕ್ ಬ್ಯಾಂಕ್ ಎಂಬ ಹೆಸರು ಕಾಣಿಸಿಕೊಂಡಿದೆ. ಹೀಗಾಗಿ ಆತನ ಬಗ್ಗೆ ನಂಬಿಕೆ ಬಂದಿದೆ. ಸತ್ಯ ಇರಬಹುದು ಎಂದುಕೊಂಡ ಆತ ಕಳುಹಿಸಿದ ಲಿಂಕ್‌ ಓಪನ್‌ ಮಾಡಿದ್ದಾರೆ. ಹಾಗೂ ಪಾಸ್‌ವರ್ಡ್ ಹಾಕಿದ್ದಾರೆ. ತಕ್ಷಣವೇ ಅವರ ಖಾತೆಯಿಂದ 60 ಸಾವಿರ ರೂ. ಹಣ ವರ್ಗಾವಣೆಯಾಗಿರುವ ಕುರಿತು ಅವರಿಗೆ ಎಸ್‌ಎಂಎಸ್ ಬಂದಿದೆ. ತಕ್ಷಣವೇ ಆತನಿಗೆ ಫೋನ್ ಮಾಡಿದರೆ ಆತನ ಫೋನ್‌ ಕಟ್‌ ಆಗಿದೆ. ಈ ಕುರಿತಾಗಿ ಕುಲಪತಿಗಳು ಶಿಗ್ಗಾಂವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಕಡೂರು| ದುಷ್ಕರ್ಮಿಗಳಿಂದ ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement