‘ನಮ್ಮ ಮಕ್ಕಳೊಂದಿಗೆ ನಾವು ವೇಗವಾಗಿ ಓಡಿದೆವು, ಆದರೆ…ʼ : ಮಣಿಪುರದ ಮತ್ತೊಂದು ಸಾಮೂಹಿಕ ಅತ್ಯಾಚಾರ ಭಯಾನಕ ಘಟನೆ ಬೆಳಕಿಗೆ

ಇಂಫಾಲ : ಬುಧವಾರ ಎಫ್‌ಐಆರ್ ದಾಖಲಾದ ನಂತರ ಮಣಿಪುರದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ.
ಮೇ 3 ರಂದು ಜನಾಂಗೀಯ ಘರ್ಷಣೆಗಳು ನಡೆದಾಗ ಚುರಾಚಂದಪುರದ ತನ್ನ ಮನೆಯಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಕುಕಿ ಪುರುಷರು ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು 37 ವರ್ಷದ ಮಹಿಳೆ ದೂರಿದ್ದಾರೆ. ಗುಂಪಿನಿಂದ ತಪ್ಪಿಸಿಕೊಳ್ಳಲು ನಾವು ಸಾಧ್ಯವಾದಷ್ಟು ವೇಗವಾಗಿ ಓಡಿದೆವು” ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಮೇ 3 ರಂದು ಸಂಜೆ 6:30 ರ ಸುಮಾರಿಗೆ ಕುಕಿ ದುಷ್ಕರ್ಮಿಗಳ ಗುಂಪು ಮಹಿಳೆ ಸೇರಿದಂತೆ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದೆ. ಗೊಂದಲದ ನಡುವೆ, ಅವಳು ತನ್ನ ಸೊಸೆ ಮತ್ತು ಇಬ್ಬರು ಗಂಡುಮಕ್ಕಳೊಂದಿಗೆ ತನ್ನ ಅತ್ತಿಗೆಯೊಂದಿಗೆ ಪಲಾಯನ ಮಾಡಲು ಪ್ರಯತ್ನಿಸಿದಳು. ಆದರೆ, ಸುಮಾರು ಅರ್ಧ ಕಿಲೋಮೀಟರ್ ಓಡಿದ ಬಳಿಕ ಎಡವಿ ಬಿದ್ದಿದ್ದಾಳೆ. ಆಕೆಯ ಅತ್ತಿಗೆ ಮಕ್ಕಳೊಂದಿಗೆ ಸುರಕ್ಷಿತವಾಗಿ ಓಡಿಹೋದರು. ಆದರೆ ಮಹಿಳೆಯನ್ನು ಐದಾರು ದುಷ್ಕರ್ಮಿಗಳು ತಡೆದರು.

ವಿರೋಧಿಸಲು ಆಕೆಯ ಪ್ರಯತ್ನಗಳ ಹೊರತಾಗಿಯೂ, ಆಕೆ ಮೇಲೆ ದೈಹಿಕವಾಗಿ ಆಕ್ರಮಣ ಮಾಡಲಾಯಿತು ಮತ್ತು ನಂತರ ಕ್ರೂರ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಲಾಯಿತು. ನನ್ನ ಅಳಲು ತೋಡಿಕೊಂಡರೂ ಯಾರಿಂದಲೂ ಸಹಾಯವಾಗಲಿಲ್ಲ. ನಂತರ ಮತ್ತೆ ಕೆಲವು ಕುಕಿ ದುಷ್ಕರ್ಮಿಗಳು ಅವರೊಂದಿಗೆ ಸೇರಿಕೊಂಡರು. ಆ ಸಮಯದಲ್ಲಿ ನಾನು ಪ್ರಜ್ಞೆ ಕಳೆದುಕೊಂಡೆ. ನಂತರ, ನನಗೆ ಪ್ರಜ್ಞೆ ಬಂದಾಗ, ನಾನು ಕೆಲವು ಮೈಯಿತಿ ಜನರು ಸುತ್ತುವರೆದಿರುವ ಮನೆಯಲ್ಲಿದ್ದೆ ಎಂದು ಮಹಿಳೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಷ್ಣುಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಚುರಚಂದಪುರ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಎಫ್ಐಆರ್ ನಂತರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಮಹಿಳೆ ಈಗ ಸ್ಥಳಾಂತರಗೊಂಡ ಜನರ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement