ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಅನ್ವರ್-ಉಲ್-ಹಕ್ ಕಾಕರ್ ನೇಮಕ

ಇಸ್ಲಾಮಾಬಾದ್ : ಅನ್ವರ್-ಉಲ್-ಹಕ್ ಕಾಕರ್ ಅವರನ್ನು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ.
ಪಾಕಿಸ್ತಾನದ ರಾಷ್ಟ್ರೀ ಅಸೆಂಬ್ಲಿ ವಿಜಸರ್ಜನೆಗೊಂಡಿದ್ದು, ನಿರ್ಗಮಿತ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ವಿರೋಧ ಪಕ್ಷದ ನಾಯಕ ರಾಜಾ ರಿಯಾಜ್ ನಡುವಿನ ಸಭೆಯ ಬಳಿಕ ಅನ್ವರ್-ಉಲ್-ಹಕ್ ಕಾಕರ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಗಳ ಮೇಲ್ವಿಚಾರಣೆಗಾಗಿ ಹಂಗಾಮಿ ಪ್ರಧಾನಿಯಾಗಿ -ಉಲ್-ಹಕ್ ಕಾಕರ್ ಅವರನ್ನು ಈ ಸಭೆಯಲ್ಲಿ ಹೆಸರಿಸಲಾಗಿದೆ.
ಅನ್ವರ್-ಉಲ್-ಹಕ್ ಕಾಕರ್ ಅವರು ಬಲೂಚಿಸ್ತಾನ್ ಅವಾಮಿ ಪಕ್ಷದ (ಬಿಎಪಿ) ಸಂಸದರಾಗಿದ್ದು. ಅವರು ಮುಂದಿನ ಚುನಾವಣೆವರೆಗೆ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾಕರ್ ಅವರು ಭಾನುವಾರ, ಆಗಸ್ಟ್ 13 ರಂದು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅನ್ವರ್-ಉಲ್-ಹಕ್ ಕಾಕರ್ ಯಾರು?
ಅನ್ವರ್-ಉಲ್-ಹಕ್ ಕಾಕರ್ ಅವರು ದೇಶದ ರಾಷ್ಟ್ರೀಯ ಸೆನೆಟ್‌ನಲ್ಲಿ ಪಾಕಿಸ್ತಾನದ ದಂಗೆ-ಪೀಡಿತ ಬಲೂಚಿಸ್ತಾನ್ ಪ್ರಾಂತ್ಯವನ್ನು ಪ್ರತಿನಿಧಿಸುತ್ತಾರೆ. ಅವರು ಮಾರ್ಚ್ 2018 ರಲ್ಲಿ ಅಸೆಂಬ್ಲಿಗೆ ಆಯ್ಕೆಯಾದರು ಮತ್ತು ಮಾರ್ಚ್ 2024 ರವರೆಗೆ ಅಧಿಕಾರಾವಧಿಯನ್ನು ಹೊಂದಿದ್ದಾರೆ.
ಪಾಕಿಸ್ತಾನದ ಸೆನೆಟ್‌ನ ವೆಬ್‌ಸೈಟ್‌ನ ಪ್ರಕಾರ, ಪಾಕಿಸ್ತಾನದ ಉಸ್ತುವಾರಿ ಪ್ರಧಾನಿಯಾಗಿ ನೇಮಕಗೊಳ್ಳುವ ಮೊದಲು, ಅನ್ವರ್-ಉಲ್-ಹಕ್ ಕಾಕರ್ ಅವರು ಸಾಗರೋತ್ತರ ಪಾಕಿಸ್ತಾನಿಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ (ಅಧ್ಯಕ್ಷರಾಗಿ), ವ್ಯವಹಾರ ಸಲಹಾ ಸಮಿತಿ, ಹಣಕಾಸು ಮತ್ತು ಆದಾಯ, ವಿದೇಶಾಂಗ ವ್ಯವಹಾರಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ ಒಳಗೊಂಡ ಐದು ಸಮಿತಿಗಳ ಸದಸ್ಯರಾಗಿದ್ದರು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement