ಆಗ್ರಾ: ಬಾಲಿವುಡ್ ನಟ ಅಕ್ಷಯಕುಮಾರ ಅವರಿಗೆ ಹೊಡೆದರೆ ಅಥವಾ ಅವರ ಮೇಲೆ ಉಗುಳಿದರೆ 10 ಲಕ್ಷ ನೀಡುವುದಾಗಿ ಹಿಂದು ಸಂಘಟನೆ ಘೋಷಿಸಿದೆ.
ಇತ್ತೀಚಿನ ಬಿಡುಗಡೆಯಾದ ಓ ಮೈ ಗಾಡ್ 2 (OMG 2) ನಲ್ಲಿ ಭಗವಾನ್ ಶಿವನ ಸಂದೇಶವಾಹಕನ ಪಾತ್ರದ ಮೂಲಕ ಹಿಂದುಗಳ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಕ್ಷಯಕುಮಾರ ಅವರಿಗೆ ಯಾರಾದರೂ ಕಪಾಳಮೋಕ್ಷ ಮಾಡಿದರೆ ಅಥವಾ ಅವರ ಮೇಲೆ ಉಗುಳುವವರಿಗೆ ಆಗ್ರಾದ ಹಿಂದೂ ಸಂಘಟನೆ ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ 10 ಲಕ್ಷ ರೂ. “ಬಹುಮಾನ” ಘೋಷಿಸಿದೆ.
ಕುಮಾರ್ ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಗುರುವಾರ ನಟನ ಪ್ರತಿಕೃತಿ ಮತ್ತು ಚಿತ್ರದ ಪೋಸ್ಟರ್‌ಗಳನ್ನು ದಹಿಸಿ ಪ್ರತಿಭಟನೆ ನಡೆಸಿತು.
ಸಂಘಟನೆಯ ಅಧ್ಯಕ್ಷ ಗೋವಿಂದ ಪರಾಶರ ಬಹುಮಾನವನ್ನು ಘೋಷಿಸಿದರು, ಕೆಲವು ದೃಶ್ಯಗಳು ಭಗವಾನ್ ಶಿವನನ್ನು ಕೀಳಾಗಿ ಚಿತ್ರಸಿವೆ ಎಂದು ಅವರು ಪ್ರತಿಪಾದಿಸಿದರು. ಶಿವನ ದೂತ ಅಥವಾ ಸಂದೇಶವಾಹಕನಾಗಿ ಅಕ್ಷರಕುಮಾರ ಚಿತ್ರದಲ್ಲಿ ಕೊಳಕು ಕೊಳದ ನೀರಿನಲ್ಲಿ ಸ್ನಾನ ಮಾಡುವ ದೃಶ್ಯವಿದೆ. ಆತ ಪಾದರಕ್ಷೆಗಳೊಂದಿಗೆ ನಿಂತುಕೊಂಡಿದ್ದಾನೆ, ಕಚೋರಿಗಳನ್ನು ಖರೀದಿಸುತ್ತಾನೆನೆ. ಇದರಿಂದ ದೇವರ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ. ಈ ರೀತಿ ತೋರಿಸುವ ಮೂಲಕ ದೇವರನ್ನು ಅವಮಾನಿಸಲಾಗಿದೆ ಎಂದು ಪರಾಶರ ಹೇಳಿದ್ದಾರೆ. ಸೆನ್ಸಾರ್ ಮಂಡಳಿ ಹಾಗೂ ಕೇಂದ್ರ ಸರ್ಕಾರ ಸಿನಿಮಾವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ ಅವರು, ಇಲ್ಲದಿದ್ದರೆ ನಿರಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇತರ ನಗರಗಳಲ್ಲಿಯೂ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಆಗಸ್ಟ್ 11 ರಂದು ಬಿಡುಗಡೆಯಾದ ವಿಡಂಬನಾತ್ಮಕ ಹಾಸ್ಯವನ್ನು ದುರ್ಗಾ ವಾಹಿನಿಯ ಸಂಸ್ಥಾಪಕಿ ವೃಂದಾವನದ ಸಾಧ್ವಿ ರಿತಂಬರ ಟೀಕಿಸಿದ್ದಾರೆ.
ತನ್ನ ಆಶ್ರಮ ವಾತ್ಸಲ್ಯ ಗ್ರಾಮದಲ್ಲಿ ಮಾಡಿದ ಭಾಷಣದಲ್ಲಿ, ಸಾಧ್ವಿ ರಿತಂಬರ, “ಹಿಂದೂ ಧರ್ಮದ ಮೃದುತ್ವವು ಬಾಲಿವುಡ್ ಅನ್ನು ಮತ್ತೆ ಮತ್ತೆ ಇಂತಹ ಧೈರ್ಯವನ್ನು ಮಾಡಲು ಪ್ರೇರೇಪಿಸುತ್ತದೆ. ಅವರು ಹಿಂದೂ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮದ ಬಗ್ಗೆ ಪ್ರತಿಕ್ರಿಯಿಸಲು ಹೆದರುತ್ತಾರೆ. ಈ ಹಿಂದೆಯೂ ಬೆಳ್ಳಿತೆರೆಯಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಲಾಗಿದೆ ಎಂದ ಅವರು “ಹಿಂದೂಗಳ ನಂಬಿಕೆಯೊಂದಿಗೆ ಆಟವಾಡಬಾರದು” ಎಂದು ಹೇಳಿದರು.
ಜನರು ಶಿವನ ಮೇಲಿನ ನಮ್ಮ ಭಕ್ತಿ ಮತ್ತು ಆತನ ಅಲೌಕಿಕ ರೂಪದೊಂದಿಗೆ ಆಟವಾಡಬಾರದು” ಎಂದು ಅವರು ಬಾಲಿವುಡ್ ವಿರುದ್ಧ ಬಲವಾಗಿ ಪ್ರತಿಭಟಿಸಲು ಹಿಂದೂಗಳನ್ನು ಒತ್ತಾಯಿಸಿದರು.
ಉಜ್ಜಯಿನಿಯ ಮಹಾಕಾಲ ದೇವಾಲಯದ ಅರ್ಚಕರು ದೇವಾಲಯದ ಆವರಣದಲ್ಲಿ ಚಿತ್ರೀಕರಿಸಲಾದ ಕೆಲವು ದೃಶ್ಯಗಳನ್ನು “ಅಶ್ಲೀಲ” ಎಂದು ಕರೆದು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ