ಕೆನಡಾದಲ್ಲಿ ದೇವಸ್ಥಾನದ ಗೋಡೆಗಳು, ದ್ವಾರಗಳ ಮೇಲೆ ಭಾರತ ವಿರೋಧಿ ಪೋಸ್ಟರ್‌ಗಳನ್ನು ಅಂಟಿಸಿದ ಖಾಲಿಸ್ತಾನಿ ಬೆಂಬಲಿಗರು.

 ಕೆನಡಾದಲ್ಲಿ ಶನಿವಾರ ರಾತ್ರಿ ಖಾಲಿಸ್ತಾನಿ ಬೆಂಬಲಿಗರು ದೇವಸ್ಥಾನದ ದ್ವಾರದ ಮೇಲೆ ಖಾಲಿಸ್ತಾನಿ ಪೋಸ್ಟರ್‌ ಗಳನ್ನು ಹಾಕಿರುವುದು ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಬ್ರಿಟಿಷ್ ಕೊಲಂಬಿಯಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಗೋಡೆಗಳು ಮತ್ತು ದ್ವಾರದ ಮೇಲೆ “ಖಾಲಿಸ್ತಾನ್ ಪರ” ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 18 ರಂದು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರದ ಬಗ್ಗೆ ಕೆನಡಾ ತನಿಖೆ ಮಾಡಬೇಕೆಂದು ಪೋಸ್ಟರ್‌ಗಳು ಒತ್ತಾಯಿಸಿವೆ.
ಇಬ್ಬರು ಮುಸುಕುಧಾರಿ ವ್ಯಕ್ತಿಗಳು ದೇವಾಲಯದ ಗೋಡೆಗಳು ಮತ್ತು ಗೇಟ್‌ಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದನ್ನು ಭದ್ರತಾ ಕ್ಯಾಮೆರಾ ಸೆರೆಹಿಡಿದಿದೆ.
ಖಲಿಸ್ತಾನ್ ಟೈಗರ್ ಫೋರ್ಸ್ ಮತ್ತು ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಕೆನಡಾದ ಮುಖ್ಯಸ್ಥನಾಗಿದ್ದ ನಿಯೋಜಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಈ ವರ್ಷದ ಜೂನ್‌ನಲ್ಲಿ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು.
ಕೆನಾಡದಲ್ಲಿ ಈ ವರ್ಷ ನಡೆದ ನಾಲ್ಕನೇ ದೇವಸ್ಥಾನಕ್ಕೆ ಹಾನಿ ಮಾಡಿದ ಘಟನೆ ಇದಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ, ಒಂಟಾರಿಯೊದಲ್ಲಿ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಹಾನಿ ಮಾಡಲಾಗಿತ್ತು. ಫೆಬ್ರವರಿಯಲ್ಲಿ, ಕೆನಡಾದ ಮಿಸಿಸೌಗಾದ ರಾಮಮಂದಿರದ ಮೇಲೆ ದಾಳಿ ಮಾಡಲಾಯಿತು ಮತ್ತು ಜನವರಿಯಲ್ಲಿ ಬ್ರಾಂಪ್ಟನ್‌ನಲ್ಲಿರುವ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದಿಂದ ವಿರೂಪಗೊಳಿಸಲಾಯಿತು.
ಕಳೆದ ತಿಂಗಳು, ಕೆನಡಾದಲ್ಲಿ ಹಲವಾರು ಹಿರಿಯ ಭಾರತೀಯ ರಾಜತಾಂತ್ರಿಕರನ್ನು “ಕೊಲೆಗಾರರು” ಎಂದು ಲೇಬಲ್ ಮಾಡುವ ಪೋಸ್ಟರ್‌ಗಳು ಕಾಣಿಸಿಕೊಂಡವು. ಇದನ್ನು ಅನುಸರಿಸಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಕೆನಡಾ, ಬ್ರಿಟನ್‌ ಮತ್ತು ಯುಎಸ್ ಸೇರಿದಂತೆ ಪಾಲುದಾರ ರಾಷ್ಟ್ರಗಳಿಗೆ “ಉಗ್ರವಾದಿ ಖಲಿಸ್ತಾನಿ ಸಿದ್ಧಾಂತಕ್ಕೆ” ವೇದಿಕೆಗಳನ್ನು ಒದಗಿಸುವುದನ್ನು ವಿರೋಧಿಸಲು ಕರೆ ನೀಡಿದರು, ಇದು ಅಂತರರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕವಾಗಿದೆ ಎಂದು ವಾದಿಸಿದರು.
ಖಲಿಸ್ತಾನಿ ಪರ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳಿಗೆ ಜಾಗ ನೀಡುವುದರ ವಿರುದ್ಧ ಭಾರತ ಕೆನಡಾವನ್ನು ಒತ್ತಾಯಿಸಿವುದಾಗಿ ಜೈಶಂಕರ್ ಹೇಳಿದ್ದರು.
ತಮ್ಮ ಸರ್ಕಾರವು ಖಲಿಸ್ತಾನ್ ಬೆಂಬಲಿಗರ ಬಗ್ಗೆ ಮೃದುವಾಗಿರುತ್ತದೆ ಎಂಬ ಕಲ್ಪನೆಯನ್ನು ತಿರಸ್ಕರಿಸಿದ ಪ್ರಧಾನಿ ಜಸ್ಟಿನ್ ಟ್ರುಡೊ, ಕೆನಡಾ ಯಾವಾಗಲೂ ಹಿಂಸಾಚಾರದ ಬೆದರಿಕೆಗಳನ್ನು “ಅತ್ಯಂತ ಗಂಭೀರವಾಗಿ” ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement