ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ

ಕುಮಟಾ : ತಾಲೂಕಿನ ಹೊಲನಗದ್ದೆ ತೆಪ್ಪದಮಠದ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಭಾನುವಾರ ಲಕ್ಷಾಧಿಕ ತುಳಸಿ ದಳದಿಂದ ಪೂಜೆ ನಡೆಯಿತು.
ಸತತವಾಗಿ 10 ವರ್ಷದಿಂದ ಪ್ರತಿವರ್ಷ ವಾರ್ಷಿಕವಾಗಿ ಲಕ್ಷಾಧಿಕ ತುಳಸಿದಳದಿಂದ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಈವರ್ಷ ಅಧಿಕ ಮಾಸ ಇರುವುದರಿಂದ ಈ ಸಂದರ್ಭದಲ್ಲಿ ನಾಡಿನ ಕ್ಷೇಮಕ್ಕಾಗಿ ನಡೆಸುವ ಈ ಪೂಜೆಯಿಂದ ಜನರಿಗೆ ಅಧಿಕ ಫಲ ಪ್ರಾಪ್ತಿಯಾಗುವದು ಎಂದು ಅಧ್ವರ್ಯ ವಹಿಸಿದ್ದ ವೇದಮೂರ್ತಿ ಕೃಷ್ಣ ಭಟ್ಟ ಅವರು ತಮ್ಮ ಆಶೀರ್ವಚನದ ಸಂದರ್ಭದಲ್ಲಿ ಹೇಳಿದರು.
ಮಳೆಗಾಲ ಆಗಿರುವುದರಿಂದ ಲಕ್ಷಾಂತರ ತುಳಸಿ ಸಂಗ್ರಹಣೆಯನ್ನು ತಾಲೂಕಿನ ಯಲವಳ್ಳಿ, ಮಾಸ್ತಿಹಳ್ಳ, ಹಂದಿಗೋಣು, ದಿವಳ್ಳಿ ಮೊದಲಾದಡೆ ಹೋಗಿ ತುಳಸಿ ಸಂಗ್ರಹ ಮಾಡಬೇಕಾಯಿತು ಎಂದು ದೇವಾಲಯದ ಧರ್ಮದರ್ಶಿ ಗಳಾದ ಪ್ರೊ. ವಿ.ಎಸ್. ಹೆಗಡೆ ತಿಳಿಸಿದ್ದಾರೆ.
ಸುಮಾರು 500 ವರ್ಷಗಳಷ್ಟು ಹಿಂದಿನ ಇತಿಹಾಸ ಇರುವ ಈ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ, ಶತರುದ್ರ, ಇತ್ಯಾದಿ ಪೂಜೆ ವಾರ್ಷಿಕವಾಗಿ ನಡೆಯುತ್ತಿದೆ ಎಂದು ಅರ್ಚಕ ರಾದ ಲಕ್ಷ್ಮೀಶ ಭಟ್ಟ ಹೇಳಿದರು.
ಪೂಜೆಯ ನಂತರ ಭಕ್ತಾದಿಗಳಿಗೆ ಪ್ರಸಾದ ಭೋಜನ ವಿತರಿಸಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷ ಅಧ್ಯಕ್ಷ ಎಂ. ಎಂ. ಹೆಗಡೆ. ದೇವಾಲಯದ ಮಾಜಿ ಧರ್ಮ ದರ್ಶಿ ಮಹಾಬಲೇಶ್ವರ ಹೆಗಡೆ ಮೊದಲಾದವರು ಆಗಮಿಸಿದ್ದರು.

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement