ಸಿದ್ದಗಂಗಾ ಮಠದ ಗೋಕಟ್ಟೆಗೆ ಬಿದ್ದು ನಾಲ್ವರು ನೀರು ಪಾಲು: ನೀರಿಗೆ ಬಿದ್ದವನ ರಕ್ಷಣೆ, ರಕ್ಷಣೆಗೆ ಹೋದವರು ನೀರು ಪಾಲು

ತುಮಕೂರು: ಈಜಲು ಹೋಗಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಒಟ್ಟು ನಾಲ್ವರು ನೀರುಪಾಲಾಗಿರುವ ಘಟನೆ ತುಮಕೂರಿನ (Tumakuru) ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಬಳಿ ನಡೆದಿದೆ ಎಂದು ವರದಿಯಾಗಿದೆ.
ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಕೃಷಿ ಹೊಂಡ ಗೋಕಟ್ಟೆಯಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಲು ಮೊದಲು ಇಬ್ಬರು ನೀರಿಗೆ ಧುಮುಕಿದರು. ಅವರು ಆಪತ್ತಿನಲ್ಲಿದ್ದಿದ್ದು ಕಂಡು ಇನ್ನೊಬ್ಬರು ಧುಮುಕಿದ್ದಾರೆ. ಇವರಲ್ಲಿ ನಾಲ್ವರು ನೀರು ಪಾಲಾಗಿದ್ದಾರೆ.
ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಕೃಷಿ ಹೊಂಡ ಗೋಕಟ್ಟೆಯಲ್ಲಿ ಬಿದ್ದು ಶಂಕರ (11), ರಕ್ಷಿತ (11), ಲಕ್ಷ್ಮೀ (50) ಹಾಗೂ ಮಹಾದೇವಪ್ಪ (51) ನೀರು ಪಾಲಾದವರು. ಈಜಲು ಹೋಗಿದ್ದ ಶಂಕರ ಹಾಗೂ ರಕ್ಷಿತ್‌ನನ್ನು ರಕ್ಷಿಸಲು ಧಾವಿಸಿದಾಗ ಲಲಕ್ಷ್ಮೀ ಹಾಗೂ ಮಹದೇವಪ್ಪ ಎಂಬವರು ಸಹ ನೀರು ಪಾಲಾದ ದುರ್ಘಟನೆ ಸಂಭವಿಸಿದೆ.
ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಮಕ್ಕಳನ್ನು ಭಾನುವಾರ ರಜೆ ಇರುವ ಕಾರಣ ಪಾಲಕರು ನೋಡಲು ಬಂದಿದ್ದರು. ಮಧ್ಯಾಹ್ನ 1 ಗಂಟೆಯಲ್ಲಿ ಶಂಕರ, ಹರ್ಷಿತ್, ರಂಜಿತ್ ಹಾಗೂ ರಂಜಿತ, ಆತನ ತಾಯಿ ಲಕ್ಷ್ಮೀ ಸಿದ್ಧಗಂಗಾ ಮಠದ ಗೋ ಕಟ್ಟೆ ಬಳಿ ಊಟ ಮಾಡಿದ್ದರು. ಊಟದ ಬಳಿಕ ಕೈ ತೊಳೆಯಲು ರಂಜಿತ ಗೋ ಕಟ್ಟೆಗೆ ತೆರಳಿದ್ದ. ಕೈತೊಳೆಯಲು ಹೋದ ವಿದ್ಯಾರ್ಥಿ ರಂಜಿತ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ಕಾಪಾಡಲು ಆತನ ತಾಯಿ ನೀರಿಗೆ ಧುಮುಕಿದ್ದಾಳೆ. ಆಗ ಇಬ್ಬರೂ ಮುಳುಗುವುದನ್ನು ನೋಡಿ ಇನ್ನಿಬ್ಬರು ವಿದ್ಯಾರ್ಥಿಗಳು ನೀರಿಗೆ ಧುಮುಕಿದ್ದಾರೆ. ಆದರೆ, ಅವರು ಮುಳುಗುವುದನ್ನು ನೋಡಿ, ಮತ್ತೊಬ್ಬ ವಿದ್ಯಾರ್ಥಿಯ ಪಾಲಕ ಮಹದೇವಪ್ಪ ಕೂಡ ನೀರಿಗೆ ಧುಮುಕಿದ್ದಾರೆ. ಮೊದಲು ಕೈತೊಳೆಯಲು ಹೋಗಿ ನೀರಿಗೆ ಬಿದ್ದ ಎನ್ನಲಾದ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ. ಉಳಿದ ನಾಲ್ವರು ನೀರು ಪಾಲಾಗಿದ್ದಾರೆ  ಎಂದು ವರದಿಯಾಗಿದೆ
ಸದ್ಯ ಲಕ್ಷ್ಮೀ ಹಾಗೂ ಹರ್ಷಿತ್ ಮೃತದೇಹವನ್ನ ಹೊರ ತೆಗೆದಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಹಾಗೂ ಎಸ್​ಪಿ ರಾಹುಲ್​ ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement