ಕೆಲವು ಹಿತೈಷಿಗಳು ಬಿಜೆಪಿ ಜೊತೆ ಹೋಗುವಂತೆ ನನ್ನ ಮನವೊಲಿಸಲು ಪ್ರಯತ್ನಿಸಿದರು : ಶರದ್ ಪವಾರ್

ಮುಂಬೈ : ಕೆಲವು ಹಿತೈಷಿಗಳು ಬಿಜೆಪಿ ಸೇರುವಂತೆ ತನ್ನನ್ನು ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಹೇಳಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಾವು ಹಾಗೂ ತಮ್ಮ ಪಕ್ಷ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಲಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್‌ಸಿಪಿ ರಾಜಕೀಯ ನೀತಿಗಳಿಗೆ ಬಿಜೆಪಿಯ ಸಿದ್ಧಾಂತಗಳು ಸರಿ ಹೋಗುವುದಿಲ್ಲ ಎಂದು ಹೇಳಿದ್ದಾರೆ
ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು ಬಿಜೆಪಿ ಜೊತೆ ನಮ್ಮ ಪಕ್ಷ ಸೇರ್ಪಡೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಬಿಜೆಪಿಯ ತತ್ವ, ಸಿದ್ಧಾಂತಗಳು ಎನ್‌ಸಿಪಿಯ ರಾಜಕೀಯ ನೀತಿಗಳಿಗೆ ಹೊಂದಾಣಿಕೆ ಆಗುವುದಿಲ್ಲ. ಆದರೂ ಕೆಲವರು ಹಿತೈಷಿಗಳು ಬಿಜೆಪಿ ಜೊತೆ ಸೇರುವಂತೆ ಮನವೊಲಿಕೆಗೆ ಪ್ರಯತ್ನಿಸಿದರು. ನಮ್ಮ ಜೊತೆ ಇದ್ದ ಕೆಲವರು ಭಿನ್ನ ನಿಲುವು ಕೈಗೊಂಡಿದ್ದಾರೆ. ಹೀಗಾಗಿ, ನಮ್ಮ ಹಿತೈಷಿಗಳು ನನ್ನ ನಿಲುವು ಬದಲಾಗಬಹುದೇ ಎಂದು ಮನವೊಲಿಸಲು ಪ್ರಯತ್ನಿಸಿದರು. ಇದೇ ಕಾರಣಕ್ಕಾಗಿ ಅವರು ನನ್ನ ಜೊತೆ ಮಾತನಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿರುವ ಶರದ್ ಪವಾರ್ ಆದರೆ, ನಾನು ಬಿಜೆಪಿ ಜೊತೆ ಸೇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಜೊತೆ ರಹಸ್ಯ ಸಭೆ ನಡೆಸಲಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶರದ್ ಪವಾರ್, ಆತ ನನ್ನ ಸಹೋದರನ ಮಗ. ಆತನ ಜೊತೆ ನಾನು ಮಾತನಾಡಿದರೆ ತಪ್ಪೇನು ಎಂದು ಕೇಳಿದರು. ಕುಟುಂಬದ ಹಿರಿಯನಾಗಿ ನಾನು ಆತನನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement