ʼಸುಲಭ್ ಇಂಟರ್‌ನ್ಯಾಶನಲ್ʼ ಸಂಸ್ಥಾಪಕ- ಸಾರ್ವಜನಿಕ ನೈರ್ಮಲ್ಯದ ಪ್ರವರ್ತಕ ಬಿಂದೇಶ್ವರ ಪಾಠಕ ಇನ್ನಿಲ್ಲ

ನವದೆಹಲಿ: ಸುಲಭ್ ಇಂಟರ್‌ನ್ಯಾಶನಲ್ ಸಂಸ್ಥಾಪಕ ಮತ್ತು ಸಾಮಾಜಿಕ ಕಾರ್ಯಕರ್ತ ಬಿಂದೇಶ್ವರ ಪಾಠಕ ಅವರು ಮಂಗಳವಾರ (ಆಗಸ್ಟ್‌ 15) ಹೃದಯ ಸ್ತಂಭನದಿಂದ  ನಿಧನರಾದರು.
ಇಂದು, ಮಂಗಳವಾರ ಬೆಳಗ್ಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯ ವೇಳೆ 80 ವರ್ಷದ ವೃದ್ಧರು ಅಸ್ವಸ್ಥೆಯಿಂದ ಬಳಲುತ್ತಿದ್ದರು. ನಂತರ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್‌)ಗೆ ಕರೆದೊಯ್ಯಲಾಯಿತು ಎಂದು ಸುಲಭ್ ಇಂಟರ್‌ನ್ಯಾಶನಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸುಲಭ್ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕರಾಗಿ, ಪಾಠಕ ಅವರು ಮಾನವ ಹಕ್ಕುಗಳು, ಪರಿಸರ ನೈರ್ಮಲ್ಯ, ಅಸಾಂಪ್ರದಾಯಿಕ ಶಕ್ತಿಯ ಮೂಲಗಳು ಮತ್ತು ಶಿಕ್ಷಣದ ಮೂಲಕ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು.
ಪ್ರಶಸ್ತಿಗಳು ಮತ್ತು ಜಾಗತಿಕ ಮನ್ನಣೆ
ಬಿಂದೇಶ್ವರ ಪಾಠಕ ಅವರು 1970 ರಲ್ಲಿ ಬಿಹಾರದಿಂದ ಸುಲಭ್ ಇಂಟರ್‌ ನ್ಯಾಶನಲ್‌ ಸಮಾಜ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು. ಅಂದಿನಿಂದಲೂ, ಕೊಳಚೆ ಪ್ರದೇಶಗಳು, ಗ್ರಾಮೀಣ ಪ್ರದೇಶಗಳು ಮತ್ತು ನಗರಗಳಲ್ಲಿನ ಜನರ ಅನೈರ್ಮಲ್ಯ ಶೌಚಾಲಯದ ಪದ್ಧತಿಯನ್ನು ಬದಲಾಯಿಸಲು ಪಾಠಕ್ ಕೆಲಸ ಮಾಡುತ್ತಿದ್ದರು. ಅವರು ಕೈಗೆಟುಕುವ ಶೌಚಾಲಯ ವ್ಯವಸ್ಥೆಯನ್ನು ರೂಪಿಸಿದರು. ಅದು ಲಕ್ಷಾಂತರ ಜನರಿಗೆ ಜೀವನವನ್ನು ಉತ್ತಮ ಮತ್ತು ಆರೋಗ್ಯಕರವಾಗಿಸಿದೆ.
ಅವರು ಸ್ಥಾಪಿಸಿದ ಸುಲಭ್ ಇಂಟರ್‌ ನ್ಯಾಶನಲ್‌ ಸಂಸ್ಥೆ ಅಗ್ಗದ, ಎರಡು ಪಿಟ್ ತಂತ್ರಜ್ಞಾನವನ್ನು ಬಳಸಿಕೊಂಡು ಸುಮಾರು 13 ಲಕ್ಷ ಗೃಹ ಶೌಚಾಲಯಗಳನ್ನು ಮತ್ತು 5.4 ಕೋಟಿ ಸರ್ಕಾರಿ ಶೌಚಾಲಯಗಳನ್ನು ನಿರ್ಮಿಸಿದೆ. ಭಾರತದಲ್ಲಿ ಬಕೆಟ್ ಶೌಚಾಲಯಗಳಿಂದ ಮಾನವ ತ್ಯಾಜ್ಯವನ್ನು ಕೈಯಿಂದ ಸ್ವಚ್ಛಗೊಳಿಸುವ ಅಭ್ಯಾಸವನ್ನು ಕೊನೆಗೊಳಿಸಲು ಅವರು ಪ್ರಯತ್ನಿಸುತ್ತಿದ್ದರು.

ಪ್ರಮುಖ ಸುದ್ದಿ :-   ಪಹಲ್ಗಾಮ್‌ ದಾಳಿ | ಪಾಕ್ ಬೆಂಬಲಿಸಿದ್ದ ಟರ್ಕಿಗೆ ದೊಡ್ಡ ಹೊಡೆತ ನೀಡಿದ ಭಾರತ : ಸೆಲೆಬಿ ಏರ್‌ಪೋರ್ಟ್‌ ಸರ್ವೀಸಸ್‌ ಗೆ ಭದ್ರತಾ ಅನುಮತಿ ರದ್ದು...

ಪಾಠಕ ಅವರು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದಿದ್ದಾರೆ. 2003 ರಲ್ಲಿ, ಅವರನ್ನು ಗ್ಲೋಬಲ್ 500 ರೋಲ್ ಆಫ್ ಆನರ್‌ಗೆ ಸೇರ್ಪಡೆ ಮಾಡಲಾಯಿತು ಮತ್ತು 2009 ರಲ್ಲಿ ಅವರಿಗೆ ಪ್ರತಿಷ್ಠಿತ ಸ್ಟಾಕ್‌ಹೋಮ್ ವಾಟರ್ ಪ್ರಶಸ್ತಿಯನ್ನು ನೀಡಲಾಯಿತು. ಅವರ ಇತರ ಪ್ರಶಸ್ತಿಗಳಲ್ಲಿ ಎನರ್ಜಿ ಗ್ಲೋಬ್ ಪ್ರಶಸ್ತಿ, ದುಬೈ ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ಪ್ಯಾರಿಸ್‌ನ ಫ್ರೆಂಚ್ ಸೆನೆಟ್‌ನಿಂದ ಲೆಜೆಂಡ್ ಆಫ್ ಪ್ಲಾನೆಟ್ ಪ್ರಶಸ್ತಿ ಸೇರಿವೆ.
2020 ರಲ್ಲಿ, ಸಾಮಾಜಿಕ ನವೋದ್ಯಮಿಯಾಗಿ ಅವರ ಕೆಲಸವನ್ನು ವಿವರಿಸುವ ಪುಸ್ತಕ, ‘ನಮಸ್ತೆ, ಬಿಂದೇಶ್ವರ ಪಾಠಕ್! (‘Namaste, Bindeshwar Pathak!’)’ ಪ್ರಕಟಿಸಲಾಯಿತು. ನ್ಯೂಯಾರ್ಕ್‌ನಲ್ಲಿ ಅವರ ಹೆಸರಿನ ದಿನವೂ ಇದೆ. 2016 ರಲ್ಲಿ ಮೇಯರ್ ಬಿಲ್ ಡಿ ಬ್ಲಾಸಿಯೊ ಏಪ್ರಿಲ್ 14 ಅನ್ನು ಬಿಂದೇಶ್ವರ ಪಾಠಕ್ ದಿನ ಎಂದು ಘೋಷಿಸಿದರು.

ರಾಷ್ಟ್ರಪತಿ, ಪ್ರಧಾನಿಯಿಂದ ಸಂತಾಪ…
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಂದೇಶ್ವರ ಪಾಠಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪಾಠಕ್‌ ಅವರ ಕುಟುಂಬ ಮತ್ತು ಸುಲಭ್ ಇಂಟರ್‌ನ್ಯಾಶನಲ್‌ನ ಸದಸ್ಯರಿಗೆ ಅವರು X ನಲ್ಲಿನ ಪೋಸ್ಟ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
“ಸುಲಭ್ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ಬಿಂದೇಶ್ವರ ಪಾಠಕ್ ಅವರ ನಿಧನದ ಸುದ್ದಿ ತುಂಬಾ ದುಃಖಕರವಾಗಿದೆ. ಪಾಠಕ್ ಅವರು ಸ್ವಚ್ಛತೆಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಉಪಕ್ರಮವನ್ನು ಕೈಗೊಂಡಿದ್ದಾರೆ. ಅವರಿಗೆ ಪದ್ಮ-ಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. . ನಾನು ಅವರ ಕುಟುಂಬಕ್ಕೆ ಮತ್ತು ಸುಲಭ್ ಇಂಟರ್‌ನ್ಯಾಶನಲ್‌ನ ಸದಸ್ಯರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪಾಠಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಇದು ರಾಷ್ಟ್ರಕ್ಕೆ “ತುಂಬಲಾರದ ನಷ್ಟ” ಎಂದು ಬಣ್ಣಿಸಿದ್ದಾರೆ. ಪಾಠಕ್ ಅವರು “ಸಾಮಾಜಿಕ ಪ್ರಗತಿ ಮತ್ತು ದೀನದಲಿತರ ಸಬಲೀಕರಣಕ್ಕಾಗಿ” ಶ್ರಮಿಸುತ್ತಿದ್ದರು ಎಂದು ಶ್ಲಾಘಿಸಿದರು.
“ಡಾ. ಬಿಂದೇಶ್ವರ ಪಾಠಕ್ ಅವರ ನಿಧನವು ನಮ್ಮ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸಮಾಜದ ಪ್ರಗತಿಗಾಗಿ ಮತ್ತು ದೀನದಲಿತರ ಸಬಲೀಕರಣಕ್ಕಾಗಿ ವ್ಯಾಪಕವಾಗಿ ಶ್ರಮಿಸಿದ ದೂರದೃಷ್ಟಿಯುಳ್ಳವರಾಗಿದ್ದರು” ಎಂದು ಅವರು ಹೇಳಿದ್ದಾರೆ. ಬಿಂದೇಶ್ವರ್ ಪಾಠಕ್ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಅವರ “ಸ್ವಚ್ಛತೆಯೆಡೆಗಿನ ಉತ್ಸಾಹವು ಯಾವಾಗಲೂ ಗೋಚರಿಸುತ್ತದೆ” ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement