ನೂಹ್ ಹಿಂಸಾಚಾರ: ಫರಿದಾಬಾದಿನಲ್ಲಿ ಗೋರಕ್ಷಕ ಬಿಟ್ಟು ಬಜರಂಗಿ ಬಂಧನ

ನವದೆಹಲಿ: ಕಳೆದ ತಿಂಗಳು ನುಹ್, ಗುರುಗ್ರಾಮ ಮತ್ತು ರಾಜ್ಯದ ಇತರ ಪ್ರದೇಶಗಳಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹರಿಯಾಣದ ಗೋರಕ್ಷಕ ಬಿಟ್ಟು ಬಜರಂಗಿಯನ್ನು ಬಂಧಿಸಲಾಗಿದೆ.
ಬಿಟ್ಟು ಬಜರಂಗಿ ಮತ್ತು ಬಜರಂಗದಳದ ಸಹ ಕಾರ್ಯಕರ್ತ ಮೋನು ಮಾನೇಸರ್ ಅವರ ಪ್ರಚೋದನಕಾರಿ ಹೇಳಿಕೆಗಳು ಹಿಂಸಾಚಾರಕ್ಕೆ ಕಾರಣವಾಗಿವೆ ಎಂಬ ಆರೋಪಗಳಿವೆ.
ಇತರ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಿಟ್ಟು ಬಜರಂಗಿಯನ್ನು ಹಿಂಸಾಚಾರ ಭುಗಿಲೆದ್ದ ಸುಮಾರು 20 ದಿನಗಳ ನಂತರ ಆತನ ಫರಿದಾಬಾದ್‌ ಮನೆಯ ಸಮೀಪದಲ್ಲಿ ಬಂಧಿಸಲಾಗಿದೆ.
ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಸರಳ ಉಡುಪಿನಲ್ಲಿ ಶಸ್ತ್ರಸಜ್ಜಿತವಾದ ಪೊಲೀಸರು ಬೆನ್ನಟ್ಟಿದ ನಂತರ ಬಂಧಿಸಿರುವುದನ್ನು ತೋರಿಸಿದೆ. ಗಲಭೆ, ಹಿಂಸಾಚಾರ, ಬೆದರಿಕೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಸರ್ಕಾರಿ ಅಧಿಕಾರಿಯನ್ನು ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಮಾರಕ ಆಯುಧದಿಂದ ಹಾನಿ ಮಾಡಿದ ಆರೋಪ ಈತನ ಮೇಲಿದೆ.
ಲಭ್ಯವಿರುವ ವಿಡಿಯೋಗಳಿಂದ ಬಿಟ್ಟು ಬಜರಂಗಿ ಸಹಚರರನ್ನು ಗುರುತಿಸಲಾಗುತ್ತಿದೆ, ಅವರನ್ನೂ ಬಂಧಿಸಲಾಗುವುದು ಎಂದು ಫರಿದಾಬಾದ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. .

ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸುವವರನ್ನು ಬಿಡುವುದಿಲ್ಲ, ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡಲಾಗಿದೆ… ಯಾವುದೇ ರೀತಿಯ ಪ್ರಚೋದನಕಾರಿ ಭಾಷಣ ಅಥವಾ ದಾರಿತಪ್ಪಿಸುವ ಸುದ್ದಿಗಳನ್ನು ಹರಡುವವರ ವಿರುದ್ಧವೂ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ” ಎಂದು ವಕ್ತಾರರು ತಿಳಿಸಿದ್ದಾರೆ.
ಫರಿದಾಬಾದ್‌ನ ಗಾಜಿಪುರ ಮಾರುಕಟ್ಟೆ ಮತ್ತು ಡಬುವಾ ಮಾಕೆಟ್‌ನಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರಿಯಾಗಿದ್ದ ಬಿಟ್ಟು ಬಜರಂಗಿ ಅಲಿಯಾಸ್ ರಾಜಕುಮಾರ, ಕಳೆದ ಮೂರು ವರ್ಷಗಳಿಂದ ಗೋರಕ್ಷಕರ ಗುಂಪನ್ನು ನಡೆಸುತ್ತಿದ್ದಾರೆ.
ಕಳೆದ ತಿಂಗಳೊಂದರಲ್ಲೇ ಈತನ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಮೂರು ಪ್ರಕರಣಗಳು ದಾಖಲಾಗಿದ್ದವು. ನುಹ್ ನಲ್ಲಿ ಕಳೆದ ತಿಂಗಳು 18 ಗಂಟೆಗಳ ಕಾಲ ನಡೆದ ಕೋಮು ಘರ್ಷಣೆಯು ಐದು ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಕನಿಷ್ಠ 70 ಜನರು ಗಾಯಗೊಂಡರು, ನುಹ್‌ನಿಂದ ಗುರುಗ್ರಾಮಕ್ಕೆ ಮತ್ತು 40 ಕಿಮೀ ದೂರದ ಬಾದ್‌ಶಾಹ್‌ಪುರದವರೆಗೆ ಹಿಂಸೆ ಹರಡಿತು.
ಮಧ್ಯರಾತ್ರಿಯ ನಂತರ ಮಸೀದಿಗೆ ಹಾಗೂ ನೂರಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಹಿಂಸೆಯಲ್ಲಿ ಸತ್ತವರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಒಬ್ಬರು ಮಸೀದಿಯ ಧರ್ಮಗುರು ಸೇರಿದಂತೆ ಇಬ್ಬರು ನಾಗರಿಕರು ಸೇರಿದ್ದಾರೆ.

ಪ್ರಮುಖ ಸುದ್ದಿ :-   'ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement