ಭಟ್ಕಳ : ಚಾಕೊಲೇಟ್​​ ಎಂದು ಭಾವಿಸಿ ಪ್ಯಾಂಟ್ ಬಟನ್​ ನುಂಗಿದ ಹಸುಳೆ

ಕಾರವಾರ: ಎರಡು ತಿಂಗಳ ಮಗುವೊಂದು ಪ್ಯಾಂಟ್‌ ಬಟನ್‌ ನುಂಗಿ ಅಸ್ವಸ್ಥಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಭಟ್ಕಳ ನಗರದ ರಂಗೀಕಟ್ಟೆ ಬಳಿ ವಾಸವಿರುವ ಬಿಹಾರ ಮೂಲದ, ಕಳೆದ 12-13 ವರ್ಷಗಳಿಂದ ಭಟ್ಕಳ ರಂಗೀಕಟ್ಟೆಯಲ್ಲಿ ವಾಸಿಸುತ್ತಿರುವ ಬಿಹಾರ ಮೂಲದ ಕಮಲ ಕಿಶೋರ ಅವರ ಪುತ್ರಿ ಎರಡು ತಿಂಗ ಅಮೃತ ಬಟನ್​ ನುಂಗಿದ್ದ ಹಸುಳೆ ಎಂದು ಹೇಳಲಾಗಿದೆ. ಸುಮಾರು ಎರಡು ವರ್ಷದ ಅಕ್ಕ ಚಾಕೊಲೇಟ್‌ ಎಂದು ಭಾವಿಸಿ ನೀಡಿದ ಪ್ಯಾಂಟಿನ ಬಟನ್‌ ಅನ್ನು ಎರಡು ತಿಂಗಳ ಮಗು ನುಂಗಿದ ನಂತರ ಉಸಿರಾಡಲು ತೊಂದರೆಯಾಗಿ ಒದ್ದಾಡಲು ಪ್ರಾರಂಭಿಸಿದೆ. ಇದನ್ನು ನೋಡಿದ ಪೋಷಕರು ತಕ್ಷಣ ಸರ್ಕಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಗಂಟಲಿನಲ್ಲಿ ಸಿಲುಕಿದ್ದ ಬಟನ್‌ ಅನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಭಟ್ಕಳ ಸರಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸತೀಶ ನೇತೃತ್ವದ ವೈದ್ಯರ ತಂಡ ಕೊಳವೆಯ ಮೂಲಕ ಬಟನ್ ಅನ್ನು ಹೊರತೆಗೆದಿದ್ದಾರೆ ಎಂದು ವರದಿ ತಿಳಿಸಿದೆ. ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ. ಪ್ಯಾಂಟ್‌ ಬಟನ್‌ ಎಂದು ಅರಿವಿರದ 2 ವರ್ಷದ ಅಕ್ಕ ಆಟವಾಡುತ್ತ ಚಾಕೊಲೇಟ್​ ಎಂದು ಭಾವಿಸಿ ಪ್ಯಾಂಟಿನ ಬಟನ್​ ಅನ್ನು ಅಮೃತಾಳಿಗೆ ನೀಡಿದ್ದಳು ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement