ನಿಗೂಢವಾಗಿ ಆಕಾಶದಿಂದ ಕೆಳಗೆ ಬಿದ್ದ ದೊಡ್ಡ ಮೀನು : ಅಮೆರಿಕ ಪಟ್ಟಣದಲ್ಲಿ ವಿದ್ಯುತ್ ಸ್ಥಗಿತ… !

ನ್ಯೂಜೆರ್ಸಿ ಪಟ್ಟಣದಲ್ಲಿ ಸಾವಿರಾರು ಜನರು ಹಲವಾರು ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಪರದಾಡಿದರು. ಇಡೀ ನಗರ ಕತ್ತಲಲ್ಲಿ ಮುಳುಗಿದಿದೆ. ಇದಕ್ಕೆಲ್ಲ ಕಾರಣ ಒಂದು ಮೀನು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದಕ್ಕೆ ಕಾರಣ ಏನೆಂದು ತನಿಖೆ ಮಾಡಿದಾಗ ವಿಷಯ ಗೊತ್ತಾಗಿದೆ. ಮೀನೊಂದು ಆಗಸದಿಂದ ಟ್ರಾನ್ಸ್‌ಫಾರ್ಮರ್‌ ಮೇಲೆ ಬಿದ್ದಿದ್ದು, ಅದು ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಳ್ಳಲು ಕಾರಣವಾಯಿತು ಎಂದು ಎಂಬುದನ್ನು ಕಂಡುಹಿಡಿಯಲಾಗಿದೆ. ಆಗಸದಿಂದ ಭೂಮಿಯತ್ತ ಬೀಳುತ್ತಿದ್ದ ದೊಡ್ಡ ಮೀನು, ವಿದ್ಯುತ್ ಕೇಂದ್ರ ಘಟಕದ ಮುಖ್ಯ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದೆ. ಈ ಮೀನು ಬಿದ್ದ ರಭಸದಿಂದ ಟ್ರಾನ್ಸ್‌ಫಾರ್ಮ್‌ ವಿದ್ಯುತ್ ಪ್ರವಹಿಸಿ ಸ್ಫೋಟಗೊಂಡಿದೆ. ಟ್ರಾನ್ಸ್‌ಫಾರ್ಮ್‌ಗೆ ಬಿದ್ದ ಮೀನು ಬಳಿಕ ಅರ್ಧ ಸುಟ್ಟು ಕೆಳಕ್ಕೆ ಬಿದ್ದಿದೆ.
ಕೇವಲ ಒಂದೇ ಒಂದು ಮೀನು ಆಗಸದಿಂದ ಬಿದ್ದಿದ್ದು ಹೇಗೆ ಎಂಬ ಪ್ರಶ್ನೆಗೆ ಈಗ ಉತ್ತರವನ್ನು ಊಹಿಸಲಾಗಿದೆ. ಮೀನು ಹಿಡಿದುಕೊಂಡು ಆಗಸದಲ್ಲಿ ಹಾರುತ್ತಿದ್ದ ಪಕ್ಷಿಯ ಹಿಡಿತ ತಪ್ಪಿ ಮೀನು ಕೆಳಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ ಎಂದು ವರದಿ ಹೇಳಿದೆ.

“ವಾರಾಂತ್ಯದಲ್ಲಿ ಬ್ಲ್ಯಾಕೌಟ್ ಸಮಯದಲ್ಲಿ ಒಂದು ದೊಡ್ಡ ಮೀನು ಟ್ರಾನ್ಸ್‌ಫಾರ್ಮರ್‌ನ ಮೇಲೆ ಬಿದ್ದಿದೆ, ಅದು ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಳ್ಳಲು ಕಾರಣವಾಯಿತು ಎಂದು NBC ನ್ಯೂಯಾರ್ಕ್ ಜರ್ಸಿ ಸೆಂಟ್ರಲ್ ಪವರ್ ಅಂಡ್ ಲೈಟ್ ಅನ್ನು ಉಲ್ಲೇಖಿಸಿ ಬರೆದಿದೆ. ಇದು (ಮೀನು) ಬಿದ್ದು ಟ್ರಾನ್ಸ್ಫಾರ್ಮರ್ ಅನ್ನು ಸಂಪೂರ್ಣವಾಗಿ ನಾಶಪಡಿಸಿತು ಎಂದು ಲೆಫ್ಟಿನೆಂಟ್ ಸೈರೆವಿಲ್ಲೆ ಪೊಲೀಸ್ ಇಲಾಖೆ ಮುಖ್ಯಸ್ಥರೊಬ್ಬರು ಹೇಳಿದ್ದಾರೆ.

ಸೇರೆವಿಲ್ಲೆ ಪೊಲೀಸ್ ಇಲಾಖೆಯು ಈ ಘಟನೆಯ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ”ಲೋವರ್ ಸೈರೆವಿಲ್ಲೆಯಲ್ಲಿ ವಿದ್ಯುತ್ ವ್ಯಾಪಕ ಪ್ರದೇಶದಲ್ಲಿ ಸ್ಥಗಿತಗೊಂಡಿದೆ. ಜೆಸಿಪಿ ಮತ್ತು ಎಲ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಮೀನು ಕಂಡುಬಂದಿದೆ ಎಂದು ವರದಿ ಮಾಡಿದೆ. ಈ ಮೀನು ಟ್ರಾನ್ಸ್ಫಾರ್ಮರ್ ಮೇಲೆ ಬಿದ್ದ ನಂತರ ಅದನ್ನು ನಾಶಪಡಿಸಿತು! ಅಲ್ಲಿಗೆ ಮೀನು ಹೇಗೆ ಬಂತು??? ನಮಗೆ ಒಂದು ಊಹೆ ಇದೆ. ಒಂದು ಹಕ್ಕಿ ಅದನ್ನು ತೆಗೆದುಕೊಂಡು ಹಾರಿಹೋದಾಗ ಅದನ್ನು ಬೀಳಿಸಿತು ಎಂದು ನಾವು ಊಹಿಸುತ್ತೇವೆ. ರಿಪೇರಿ ಮಾಡುವಾಗ ಕೆಲವು ಗಂಟೆಗಳ ಕಾಲ ಬೇಕಾಗುತ್ತದೆ ಎಂದು ಸೇರೆವಿಲ್ಲೆ ಪೊಲೀಸ್ ಇಲಾಖೆ ತನ್ನ ಫೇಸ್‌ಬುಕ್ ಪುಟಕ್ಕೆ ಪೋಸ್ಟ್ ಮಾಡಿದೆ. “ಶಂಕಿತ ಪಕ್ಷಿ ಕೊನೆಯದಾಗಿ ದಕ್ಷಿಣಕ್ಕೆ ಹಾರುತ್ತಿರುವುದನ್ನು ನೋಡಲಾಗಿದೆ” ಎಂದು ಇಲಾಖೆ ಗಮನಿಸಿದೆ. ಮೀನು ಕೆಳಕ್ಕೆ ಬೀಳಿಸಿದ ಗಿಡುಗನಿಗಾಗಿ ಹುಡುಕಾಟ ಆರಂಭಗೊಂಡಿದೆ. ಈ ಗಿಡುಗ ದಕ್ಷಿಣದತ್ತ ಹಾರಿರುವ ಮಾಹಿತಿಯೂ ಲಭ್ಯವಾಗಿದೆ. ಈ ಗಿಡುಗನ ಕುರಿತು ಯಾವುದೇ ಮಾಹಿತಿ ಸಿಕ್ಕರೆ, ನಮ್ಮ ಹಿರಿಯ ಅಧಿಕಾರಿ ಜಾನ್ ಸಿಲ್ವರ್‌ಗೆ ಮಾಹಿತಿ ನೀಡಿ. ಕಾರಣ ಈ ಮೀನಿನ ಪ್ರಕರಣವನ್ನು ಅವರೇ ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement