2 ಬಿಜೆಪಿ ಚುನಾವಣಾ ಸಮಿತಿಗಳಲ್ಲಿ ವಸುಂಧರಾ ರಾಜೆ, ಮೂವರು ಇತರ ಪ್ರಮುಖ ನಾಯಕರಿಗೆ ಸಿಗದ ಸ್ಥಾನ

ಜೈಪುರ: ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನಕ್ಕೆ ಬಿಜೆಪಿಯು ಗುರುವಾರ ಎರಡು ಪ್ರಮುಖ ಚುನಾವಣಾ ಸಮಿತಿಗಳನ್ನು ಪ್ರಕಟಿಸಿದ್ದು, ಈ ಎರಡೂ ಸಮಿತಿಗಳಲ್ಲೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಹೆಸರಿಲ್ಲ.
ಅವರಲ್ಲದೆ, ಮಾಜಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ಉಪನಾಯಕ ಸತೀಶ್ ಪೂನಿಯಾ, ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಎರಡು ಸಮಿತಿಗಳಲ್ಲೀ ಇಲ್ಲ.
21 ಸದಸ್ಯರ ಚುನಾವಣಾ ನಿರ್ವಹಣಾ ಸಮಿತಿಗೆ ಮಾಜಿ ಸಂಸದ ನಾರಾಯಣ ಪಂಚಾರಿಯಾ ನೇತೃತ್ವ ವಹಿಸಿದ್ದಾರೆ. ಪ್ರದೇಶ ಸಂಕಲ್ಪ ಪತ್ರ (ಪ್ರಣಾಳಿಕೆ) ಸಮಿತಿ ಎಂಬ ಚುನಾವಣಾ ಪ್ರಣಾಳಿಕೆ ಸಮಿತಿಗೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ನೇತೃತ್ವ ವಹಿಸಲಿದ್ದಾರೆ.

ವರ್ಷಾಂತ್ಯದ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವು ಮುಂಬರುವ ವಾರಗಳಲ್ಲಿ ಮೂರನೇ ಚುನಾವಣಾ ಪ್ರಚಾರ ಸಮಿತಿಯನ್ನು ಘೋಷಿಸುವ ನಿರೀಕ್ಷೆಯಿದೆ. ಏತನ್ಮಧ್ಯೆ ಜೈಪುರದಲ್ಲಿ ಪಕ್ಷವು ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ಕೋರ್ ಕಮಿಟಿ ಸಭೆಯನ್ನೂ ನಡೆಸಿದೆ. ಆದರೆ ವಸುಂಧರಾ ರಾಜೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ.
ಚುನಾವಣಾ ಸಮಿತಿಗಳಲ್ಲಿ ರಾಜೇ ಅವರನ್ನು ಸೇರಿಸಿಕೊಳ್ಳದಿರುವ ಬಗ್ಗೆ ಕೇಳಿದಾಗ, ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆ. ಅವರ ಪಾತ್ರ ದೊಡ್ಡದು. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದಾರೆ. ಚುನಾವಣೆಯಲ್ಲಿ ಪ್ರಚಾರ ಮಾಡುತ್ತಾರೆ. ನಾವೆಲ್ಲರೂ ಅವರನ್ನು ಗೌರವಿಸುತ್ತೇವೆ ಎಂದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಪಿಕಪ್ ವಾಹನ ಪಲ್ಟಿಯಾಗಿ 18 ಮಂದಿ ಸಾವು, ನಾಲ್ವರಿಗೆ ಗಾಯ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement