ಬಿಜೆಪಿ ತೊರೆದು 1200 ಕಾರುಗಳ ಬೆಂಗಾವಲಿನಲ್ಲಿ ಬಂದು ಕಾಂಗ್ರೆಸ್‌ ಸೇರ್ಪಡೆಯಾದ ಸಿಂಧಿಯಾ ನಿಷ್ಠ ಸಮಂದರ ಪಟೇಲ್

ಭೋಪಾಲ: ಮಧ್ಯಪ್ರದೇಶದ ವಿದಾನಸಭೆ ಚುನಾವಣೆ ಸನಿಹದಲ್ಲಿರುವಾಗಲೇ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತ ಹಾಗೂ ಮಧ್ಯಪ್ರದೇಶದ ಶಾಸಕ ಸಮಂದರ್ ಸಿಂಗ್ ಅವರು ಬಿಜೆಪಿ ತೊರೆದು, ಕಾಂಗ್ರೆಸ್‌ ಪಕ್ಷೆಕ್ಕೆ ಮರಳಿದ್ದಾರೆ.
ಬಿಜೆಪಿ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸುವ ವೇಳೆ ಶುಕ್ರವಾರ ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಜವಾದ್‌ನಿಂದ ಭೋಪಾಲ ವರೆಗೆ ಅವರು ಸುಮಾರು 1200 ಕಾರುಗಳ ಬೆಂಗಾವಲಿನಲ್ಲಿ ತೆರಳುವ ಮೂಲಕ ಶಕ್ತಿ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ.
ತಮಗೆ ಬಿಜೆಪಿಯಲ್ಲಿ ಉಸಿರುಗಟ್ಟಿಸುವ ಅನುಭವವಾಗಿತ್ತು. ನನ್ನನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿರಲಿಲ್ಲ. ಪಕ್ಷದಲ್ಲಿ ಗೌರವ ಮತ್ತು ಅಧಿಕಾರದ ಸ್ಥಾನವೂ ಇರಲಿಲ್ಲ” ಎಂದು ಸಮಂದರ್ ಪಟೇಲ್ ಆರೋಪಿಸಿದ್ದಾರೆ.

2020ರಲ್ಲಿ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದಾಗ ಅನೇಕ ನಾಯಕರು ಕೂಡ ಅವರೊಂದಿಗೆ ಕಮಲ ಪಾಳೆಯಕ್ಕೆ ಜಿಗಿದಿದ್ದರು. ಈಗ ಪಟೇಲ್ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಿದ್ದು, ಕಾಂಗ್ರೆಸ್‌ ಸೇರಿದ ಸಿಂಧಿಯಾ ಅವರ ಮೂರನೇ ಆಪ್ತ ಎನಿಸಿಕೊಂಡಿದ್ದಾರೆ.
ಜೂನ್ 14ರಂದು ಶಿವಪುರಿಯ ಬಿಜೆಪಿ ನಾಯಕ ಬೈಜನಾಥ ಸಿಂಗ್ ಯಾದವ್ ನಂತರ 700 ಕಾರುಗಳ ರ್ಯಾಲಿ ಮೂಲಕ ಆಗಮಿಸಿ ಕಾಂಗ್ರೆಸ್‌ ಸೇರಿದ್ದರು. ಜೂನ್ 26ರಂದು ಶಿವಪುರಿಯ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ಕುಮಾರ್ ಗುಪ್ತಾ ಬಿಜೆಪಿ ತೊರೆದಿದ್ದರು.

ಈಗ ಸಿಂಧಿಯಾ ಅವರ ಬಲಗೈ ಎಂದೇ ಕರೆಯುತ್ತಿದ್ದ ಪಟೇಲ್ ಅವರು ಬಿಜೆಪಿ ತೊರೆದಿದ್ದಾರೆ. “ಪಟೇಲ್ ಅವರು ಪಕ್ಷದ ತತ್ವ-ಸಿದ್ಧಾಂತಗಳು, ನಿಯಮಗಳು ಹಾಗೂ ನಿಷ್ಠೆಯೊಂದಿಗೆ ಬೇಷರತ್ತಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರು ತಮ್ಮ ಭಾಗದ ಜನರಿಗೆ ಸತ್ಯ ಹೇಳಲಿದ್ದಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ” ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಅಧ ಅಧ್ಯಕ್ಷ ಕಮಲನಾಥ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement