ಲಡಾಖ್‌ ಬಳಿ ವಾಹನ ಕಮರಿಗೆ ಉರುಳಿ 9 ಸೇನಾ ಸಿಬ್ಬಂದಿ ಸಾವು

ಲಡಾಖ್‌: ಭಾರತೀಯ ಸೇನಾ ಸಿಬ್ಬಂದಿ ತೆರಳುತ್ತಿದ್ದ ವಾಹನವು ಲೇಹ್‌ ಸಮೀಪದಲ್ಲಿ ಅಪಘಾತಕ್ಕೀಡಾಗಿ 9 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಒಬ್ಬರಿಗೆ ಗಂಭೀರ ಗಾಯವಾಗಿದೆ.
ಲೇಹ್‌ನಿಂದ ನ್ಯೋಮಾಗೆ ಬೆಂಗಾವಲು ಪಡೆಯ ಭಾಗವಾಗಿ ಚಲಿಸುತ್ತಿದ್ದ ಎಎಲ್‌ಎಸ್‌ ವಾಹನವು ಕಿಯಾರಿಯಿಂದ 7 ಕಿಮೀ ದೂರದಲ್ಲಿ ಸುಮಾರು ಸಂಜೆ 6:30 ಸುಮಾರಿಗೆ ಸ್ಕಿಡ್ ಆಗಿ ಕಂದಕದಲ್ಲಿ ಬಿದ್ದಿದೆ. ವಾಹನದಲ್ಲಿ 10 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಮೃತರಲ್ಲಿ ಎಂಟು ಸೈನಿಕರು ಮತ್ತು ಒಬ್ಬರು ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದ್ದಾರೆ. ಟ್ರಕ್ ಕರು ಗ್ಯಾರಿಸನ್‌ನಿಂದ ಲೇಹ್ ಬಳಿಯ ಕ್ಯಾರಿಗೆ ಚಲಿಸುತ್ತಿದ್ದಾಗ ಕ್ಯಾರಿ ಪಟ್ಟಣದಿಂದ 7 ಕಿಮೀ ಮುಂದೆ ಕಮರಿಗೆ ಬಿದ್ದಿದೆ. ಗಾಯಗೊಂಡವರೊಬ್ಬರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಲಡಾಖ್‌ನ ಲೇಹ್ ಬಳಿ ಅಪಘಾತದಲ್ಲಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಮೃತ ಸೇನಾ ಸಿಬ್ಬಂದಿಯ ದುಃಖಿತ ಕುಟುಂಬಗಳೊಂದಿಗೆ ನಾವೆಲ್ಲಾ ಇದ್ದೇವೆ. ಗಾಯಗೊಂಡ ಸಿಬ್ಬಂದಿಯನ್ನು ಸೇನಾ ಆಸ್ಪತ್ರೆಗೆ ರವಾನಿಸಲಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement