ಕೇರಳದ ಈ ಗ್ರಾಮ ಏಷ್ಯಾದಲ್ಲೇ ಅತಿ ಹೆಚ್ಚು ಅವಳಿ ಮಕ್ಕಳನ್ನು ಹೊಂದಿರುವ ಗ್ರಾಮ… ವಿಜ್ಞಾನಕ್ಕೂ ಕಾರಣ ಗೊತ್ತಿಲ್ಲ…!

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕೊಡಿನ್ಹಿ ಎಂಬ ಗ್ರಾಮದಲ್ಲಿ ಅವಳಿ ಮಕ್ಕಳ ಜನನ ಪ್ರಮಾಣವು ಬಹುಶಃ ಭಾರತದಲ್ಲಿಯೇ ಅತ್ಯಧಿಕವಾಗಿದೆ. ಅನೇಕ ಬಾರಿ ವಿಜ್ಞಾನಿಗಳು ಈ ಅಪರೂಪದ ವಿದ್ಯಮಾನದ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸಿದ್ದಾರೆ, ಆದರೆ ಉತ್ತರ ಅವರಿಗೆ ಸಮರ್ಪಕ ಉತ್ತರ ಇನ್ನೂ ಸಿಕ್ಕಿಲ್ಲ.
ಮೇಲ್ನೋಟಕ್ಕೆ ಕೇರಳದ ಇತರ ಅನೇಕ ಹಳ್ಳಿಗಳಂತೆ ಕೋಡಿನ್ಹಿ ಕೂಡ ಸಾಮಾನ್ಯ ಗ್ರಾಮದಂತೆ ಗೋಚರಿಸುತ್ತದೆ. ಆದರೆ ಗ್ರಾಮದ ಬೀದಿಗಳಲ್ಲಿ ಹೋದರೆ ಒಂದೇ ತೆರನಾಗಿ ಕಾಣುವ ಮುಖಗಳು ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುತ್ತವೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಈ ಮುಸ್ಲಿಂ ಬಹುಸಂಖ್ಯಾತ ಗ್ರಾಮ ಕೊಡಿನ್ಹಿ ಗ್ರಾಮದಲ್ಲಿ ಅಂದಾಜಿನ ಪ್ರಕಾರ, 2000 ಕುಟುಂಬಗಳನ್ನು ಹೊಂದಿರುವ ಗ್ರಾಮದಲ್ಲಿ ಕನಿಷ್ಠ 400 ಜೋಡಿ ಅವಳಿಗಳಿವೆ. 2008 ರಲ್ಲಿ ಅಧಿಕೃತ ಅಂದಾಜಿನ ಪ್ರಕಾರ ಗ್ರಾಮದಲ್ಲಿ ಅವಳಿಗಳ ಸಂಖ್ಯೆ 280 ಜೋಡಿಗಳಿಗೆ ನಿಗದಿಪಡಿಸಲಾಗಿದೆ, ನಂತರದ ವರ್ಷಗಳಲ್ಲಿ ಈ ಸಂಖ್ಯೆಯು ಹೆಚ್ಚಾಗಿದೆ ಎಂದು ನಿವಾಸಿಗಳು ಗಮನಸೆಳೆದಿದ್ದಾರೆ ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಹೇಳುತ್ತದೆ.
ಆರಂಭದಲ್ಲಿ ಕೆಲವು ವರ್ಷಗಳಲ್ಲಿ ಕೆಲವೇ ಅವಳಿ ಮಕ್ಕಳು ಜನಿಸಿದ್ದರು, ಆದರೆ ನಂತರ ಅವಳಿ ಮಕ್ಕಳು ಜನಿಸುವುದು ಹೆಚ್ಚಳವಾಗಿದೆಯಂತೆ. ಇಲ್ಲಿ ಜನಿಸಿದ ಅವಳಿ ಮಕ್ಕಳಿಗೆ ಅಥವಾ ಅವರ ತಾಯಂದಿರಿಗೆ ಯಾವುದೇ ದೈಹಿಕ ನ್ಯೂನತೆಗಳು ಅಥವಾ ಮಾನಸಿಕ ವಿಕಲತೆಗಳಿಲ್ಲ. ಎಲ್ಲರೂ ಸಹ ಆರೋಗ್ಯವಾಗಿರುತ್ತಾರೆ ಮತ್ತು ಯಾವುದೇ ರೀತಿಯ ವಿರೂಪತೆಯಿಂದ ಬಳಲುತ್ತಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಪ್ರಪಂಚದಾದ್ಯಂತ ಸಾಮಾನ್ಯವಾಗಿ ಪ್ರತಿ 1000 ಶಿಶುಗಳಲ್ಲಿ 4 ಅವಳಿಗಳು ಜನಿಸುತ್ತವೆ ಮತ್ತು ಭಾರತದಲ್ಲಿ ಪ್ರತಿ 1000 ಶಿಶುಗಳಲ್ಲಿ 9 ಅವಳಿಗಳು ಜನಿಸುತ್ತವೆ. ಆದರೆ ಈ ಗ್ರಾಮದಲ್ಲಿ ಪ್ರತಿ 1000 ಶಿಶುಗಳಲ್ಲಿ 45 ಶಿಶುಗಳು ಜನಿಸುತ್ತವೆ. ಅವಳಿ ಮಕ್ಕಳ ಸರಾರಿಯಲ್ಲಿ ಇದು ನೈಜೀರಿಯಾದ ಇಗ್ಬೊ-ಓರಾ ಎಂಬ ಪ್ರದೇಶದ ನಂತರ ಇದು ಜಗತ್ತಿನಲ್ಲಿ ಎರಡನೆಯ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ. ನೈಜೀರಿಯಾದ ಇಗ್ಬೊ-ಓರಾದಲ್ಲಿ ಪ್ರತಿ 1000 ಶಿಶುಗಳಲ್ಲಿ 145 ಅವಳಿಗಳು ಜನಿಸುತ್ತವೆ. ಹೀಗಾಗಿ ಅದನ್ನು “ವಿಶ್ವದ ಅವಳಿ ರಾಜಧಾನಿ” ಎಂದೂ ಕರೆಯುತ್ತಾರೆ, ಮತ್ತು ಏಷ್ಯಾದಲ್ಲಿ ಮೊದಲನೆಯದು.
ಹೆಚ್ಚು ಹೆಚ್ಚು ಅವಳಿ ಮಕ್ಕಳಿಗೆ ಜನ್ಮ ನೀಡುವ ಈ ಗ್ರಾಮಕ್ಕೆ ದೇವರ ವಿಶೇಷ ಕೃಪೆ ಇದೆ ಎಂಬುದು ಸ್ಥಳೀಯರ ನಂಬಿಕೆ.

ಅನೇಕ ಅವಳಿಗಳ ಬಗ್ಗೆ ಹಳ್ಳಿಗೆ ಹೇಗೆ ಗೊತ್ತಾಯಿತು?
ತಮ್ಮ ತರಗತಿಯಲ್ಲಿಯೇ ಎಂಟು ಜೋಡಿ ಅವಳಿ ಮಕ್ಕಳು ಮತ್ತು ತಮ್ಮ ಶಾಲೆಯಲ್ಲಿ 24 ಜೋಡಿಗಳು ಇರುವುದನ್ನು ಅರಿತುಕೊಂಡ ಇಬ್ಬರು ಅವಳಿ ಸಹೋದರಿಯರ ಕುತೂಹಲವೇ ಆವಿಷ್ಕಾರದ ಆರಂಭ ಎಂದು ಹೇಳಲಾಗುತ್ತದೆ. ಸುದ್ದಿ ಹರಡುತ್ತಿದ್ದಂತೆ, ಕೊಡಿನ್ಹಿಯಲ್ಲಿ ಸುಮಾರು 280 ಜೋಡಿ ಅವಳಿಗಳಿವೆ ಎಂದು ಅವರು ಅರಿತುಕೊಂಡರು. ಇದು TAKA, ಟ್ವಿನ್ಸ್ ಅಂಡ್ ಕಿನ್ ಅಸೋಸಿಯೇಷನ್‌ ಸ್ಥಾಪನೆಗೆ ಕಾರಣವಾಯಿತು, ಇದು ಕೊಡಿನ್ಹಿಯ ಅವಳಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಬೆಂಬಲವನ್ನು ನೀಡುತ್ತದೆ.
ವಿಜ್ಞಾನಿಗಳು ಮತ್ತು ಸಂಶೋಧಕರು ರಹಸ್ಯವನ್ನು ಭೇದಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ಅಧ್ಯಯನದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಸಂಶೋಧಕರ ತಂಡಗಳು ಹೈದರಾಬಾದ್ ಮೂಲದ CSIR-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಡ್ಯುಲರ್ ಬಯಾಲಜಿ, ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನಗಳ ವಿಶ್ವವಿದ್ಯಾಲಯಗಳು (KUFOS) ಸೇರಿದಂತೆ ಕೊಡಿನ್ಹಿ ಗ್ರಾಮಕ್ಕೆ ಭೇಟಿ ನೀಡಿವೆ. ಮತ್ತು ಲಂಡನ್ ವಿಶ್ವವಿದ್ಯಾನಿಲಯ, ಹಾಗೆಯೇ ಜರ್ಮನಿಯ ಸಂಶೋಧಕರು ಮತ್ತು ಸಂಶೋಧನೆ ಮಾಡಲು ಇಲ್ಲಿಗೆ ಬಂದರು ಮತ್ತು ಕೊಡಿನ್ಹಿ ಗ್ರಾಮದ ರಹಸ್ಯವನ್ನು ತಿಳಿಯಲು ಪ್ರಯತ್ನಿಸಿದ್ದಾರೆ. ಮತ್ತು ಇಲ್ಲಿಯವರೆಗೆ ವಿಜ್ಞಾನಿಗಳು ಸಹ ಅದನ್ನು ಅರಿಯಲು ಸಾಧ್ಯವಾಗಲಿಲ್ಲ.
ಜಗತ್ತಿನಲ್ಲಿ ಹೆಚ್ಚು ಅವಳಿಗಳನ್ನು ಹೊಂದಿರುವ ಪ್ರದೇಶಗಳೆಂದರೆ ನೈಜೀರಿಯಾದಲ್ಲಿ ಇಗ್ಬೊ-ಓರಾ, ಭಾರತದ ಕೇರಳದ ಕೋಡಿನ್ಹಿ ಗ್ರಾಮ, ದಕ್ಷಿಣ ವಿಯೆಟ್ನಾಂನ ಹಂಗ್ ಲೊಕ್ ಕಮ್ಯೂನ್, ಬ್ರೆಜಿಲ್‌ನಲ್ಲಿ ಕ್ಯಾಂಡಿಡೋ ಗೊಡೊ ಪ್ರದೇಶಗಳಾಗಿವೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement