ಶಿರಸಿ : ಟಿಎಸ್ಎಸ್ ಚುನಾವಣೆಯಲ್ಲಿ ಗೋಪಾಲಕೃಷ್ಣ ವೈದ್ಯ ಬಣಕ್ಕೆ ಪ್ರಚಂಡ ಗೆಲುವು

ಶಿರಸಿ : ಟಿಎಸ್ಎಸ್ ಸಂಸ್ಥೆಯ ಚುನಾವಣೆಯಲ್ಲಿ ಗೋಪಾಲಕೃಷ್ಣ ವೈದ್ಯರ ಬಣಕ್ಕೆ ಪ್ರಚಂಡ ಗೆಲುವು ಸಾಧಿಸಿದೆ. ಜನ ಬದಲಾವಣೆ ಬಯಸಿದ್ದರೂ ಸಹ ಹಾಲಿ ಅಧ್ಯಕ್ಷ ಕಡವೆ ರಾಮಕೃಷ್ಣ ಹೆಗಡೆ ಮಾತ್ರ ಗೆದ್ದಿದ್ದಾರೆ.
ರಾಜ್ಯದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಶಿರಸಿಯ ಟಿಎಸ್ಎಸ್ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆ ನಡೆಯಿತು.
ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಬಣದಿಂದ ಸ್ಪರ್ಧೆಗೆ ಇಳಿದಿದ್ದ 15 ಮಂದಿ ಅಭ್ಯರ್ಥಿಗಳ ಪೈಕಿ ರಾಮಕೃಷ್ಣ ಹೆಗಡೆ ಕಡವೆ ಮಾತ್ರ ನಾಲ್ಕು ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಉಳಿದಂತೆ ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದ ಬಣದ 14 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ‘ಅ’ ವರ್ಗದ ಪ್ರಾಥಮಿಕ ಸೊಸೈಟಿ ಕ್ಷೇತ್ರದಲ್ಲಿ 4 ಅಭ್ಯರ್ಥಿಗಳು, ಹಿಂದುಳಿದ ವರ್ಗ ‘ಅ’ ಮೀಸಲು, ಹಿಂದುಳಿದ ವರ್ಗ ‘ಬ’ ಮೀಸಲು ತಲಾ ಒಬ್ಬರು, ಸಾಮಾನ್ಯ ಮಹಿಳಾ ಕ್ಷೇತ್ರದಲ್ಲಿ 2 ಹಾಗೂ ಸಾಮಾನ್ಯ ವರ್ಗದಲ್ಲಿ ಗೋಪಾಲಕೃಷ್ಣ ವೈದ್ಯರ ಬಣದ 6 ಅಭ್ಯರ್ಥಿಗಳು ಸೇರಿ ಒಟ್ಟೂ 14 ಅಭ್ಯರ್ಥಿಗಳು ಜಯಸಾಧಿಸಿದ್ದಾರೆ.
ಹಿಂದುಳಿದ ವರ್ಗ ಅ ಮೀಸಲು ಕ್ಷೇತ್ರದಿಂದ ದೇವೆಂದ್ರ ಈ.ನಾಯ್ಕ ಕುಪ್ಪಳ್ಳಿ, ಹಿಂದುಳಿದ ವರ್ಗ ಬ ಮೀಸಲಾತಿ ಕ್ಷೇತ್ರದಿಂದ ವೀರೆಂದ್ರ ಪಿ.ಗೌಡರ್ ತೋಟದಮನೆ ಗೆಲುವು ಸಾಧಿಸಿದ್ದಾರೆ.
‘ಅ’ ವರ್ಗದ ಸೊಸೈಟಿಯಲ್ಲಿ ವಿಭಾಗದಲ್ಲಿ ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ 2500 ಮತ, ಸೋಂದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಣಪತಿ ಜೋಶಿ 2008 ಮತ, ಸಾಲ್ಕಣಿ ಸೇವಾ ಸಹಕಾರಿ ಸಂಘದ ಪುರುಷೋತ್ತಮ ಹೆಗಡೆ 1734 ಮತ, ಹುಳಗೋಳ ಆರ್.ಡಿ ಸೊಸೈಟಿ ಅಧ್ಯಕ್ಷ ಡಿ.ಎಸ್.ಹೆಗಡೆ 1765 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ನೀರಿನ ಸಂಪರ್ಕ; ಬಿಬಿಎಂಪಿ

ಮತ ಪಡೆದ ವಿವರಗಳು…
ಚುನಾವಣೆಯಲ್ಲಿ `ಅ` ವರ್ಗದ ಪ್ರಾಥಮಿಕ ಸಹಕಾರಿ ಸಂಘಗಳು..
ಗೋಪಾಲಕೃಷ್ಣ ಹೆಗಡೆ (೨೦೭೨) (ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ), ಗಣಪತಿ ಜೋಶಿ ಕೊಪ್ಪಲತೋಟ (೨೦೦೮) (ಸೋಂದಾ ಸೇವಾ ಸಹಕಾರಿ ಸಂಘ), ದತ್ತಗುರು ಹೆಗಡೆ (೧೭೬೫) (ಹುಳಗೋಳ ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಸಹಕಾರಿ ಸಂಘ), ಪುರುಷೋತ್ತಮ ಹೆಗಡೆ (೧೭೩೪) (ಸಾಲ್ಕಣಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಪ್ರತಿ ಸ್ಪರ್ಧಿಗಳಾದ ಗಣಪತಿ ರಾಯ್ಸದ್ (೧೧೬೮), ಗುರುಪಾದ ಹೆಗಡೆ (೧೨೦೮), ರಾಜಶೇಖರ ಗೌಡ್ರು (೮೬೧), ಸುರೇಶ ರಾಮಾ ನಾಯ್ಕ (೮೫೬) ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
` ಬ` ವರ್ಗದ ಸಾಮಾನ್ಯ ವರ್ಗ
ರವೀಂದ್ರ ಹೆಗಡೆ ಹಿರೇಕೈ(೧೮೫೫), ಮಹಾಬಲೇಶ್ವರ ಭಟ್ಟ ತೋಟಿಮನೆ(೧೮೨೦), ಅಶೋಕ ಹೆಗಡೆ ಅಬ್ಬಿಗದ್ದೆ(೧೮೧೩), ರವೀಂದ್ರ ಹೆಗಡೆ ಹಳದೋಟ (೧೭೦೫), ಕೃಷ್ಣ ಹೆಗಡೆ ಜೂಜಿನಬೈಲ್(೧೬೮೩) ವಸಂತ ಹೆಗಡೆ ಶಿರಿಕುಳಿ(೧೫೯೩), ರಾಮಕೃಷ್ಣ ಹೆಗಡೆ ಕಡವೆ(೧೫೧೮) ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಪ್ರತಿಸ್ಪರ್ಧಿಗಳಾದ ಸಂತೋಷ ಭಟ್ಟ ಹಳವಳ್ಳಿ (೧೫೧೪), ಉಮಾನಂದ ಭಟ್ಟ ಕೊಡ್ಲಳ್ಳಿ (೧೧೬೬), ಗಣಪತಿ ಹೆಗಡೆ ಸೂಳಗಾರ (೧೧೬೧), ಕೃಷ್ಣ ಬೋಡೆ ದೋಣಗಾರ (೧೧೧೫), ನರಸಿಂಹ ಭಟ್ಟ ಗುಂಡ್ಕಲ್ (೧೦೯೨), ಬಾಲಚಂದ್ರ ಹೆಗಡೆ ಕೋಡಮೂಡ (೧೦೬೬), ರಾಮಕೃಷ್ಣ ಹೆಗಡೆ ಅಳಗೋಡ (೧೦೪೮), ಸುಬ್ರಾಯ ಭಟ್ಟ ಬಕ್ಕಳ (೨೬೬), ವಾಸುದೇವ ಹೆಗಡೆ ಕರ್ಕಿಸವಲು (೧೮೦) ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
`ಬ` ವರ್ಗದ ಮಹಿಳಾ ಮೀಸಲಾತಿ
ನಿರ್ಮಲಾ ಭಟ್ಟ ಅಗಸಾಲ ಬೊಮ್ಮನಳ್ಳಿ (೧೮೮೫), ವಸುಮತಿ ಭಟ್ಟ ಕ್ಯಾದಗಿ (೧೭೪೫) ಆಯ್ಕೆಯಾಗಿದ್ದಾರೆ. ಅವರ ಪ್ರತಿ ಸ್ಪರ್ಧಿಗಳಾದ ವರದಾ ಹೆಗಡೆ ಜಾಜೀಮನೆ (೧೨೬೧), ವೀಣಾ ಹೆಗಡೆ ಅಪ್ಪೆಕಟ್ಟು (೧೨೦೯) ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಹಿಂದುಳಿದ ವರ್ಗ `ಅ ` ಹಾಗೂ ` ಬ` ವರ್ಗ
ಹಿಂದುಳಿದ ವರ್ಗ `ಅ ` ದಿಂದ ದೇವೇಂದ್ರ ನಾಯ್ಕ ಕುಪ್ಪಳ್ಳಿ (೧೬೮೬) ಹಾಗೂ ಹಿಂದುಳಿದ ವರ್ಗ `ಬ ` ದಿಂದ ವೀರೇಂದ್ರ ಗೌಡರ್ ತೋಟದಮನೆ (೧೮೨೨) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಅವರ ಪ್ರತಿಸ್ಪರ್ಧಿಗಳಾದ ನಾರಾಯಣ ನಾಯ್ಕ (೧೩೨೪), ಪ್ರವೀಣ ಪಾಟೀಲ (೧೨೩೩) ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement