ಬ್ರಿಕ್ಸ್ -2023 ವೇದಿಕೆಯಲ್ಲಿ ನೆಲದ ಮೇಲೆ ಬಿದ್ದಿದ್ದ ಭಾರತದ ಧ್ವಜ ಗಮನಿಸಿದ ಪ್ರಧಾನಿ ಮೋದಿ ಮುಂದೇನು ಮಾಡಿದರು ಗೊತ್ತೆ | ವೀಕ್ಷಿಸಿ

ಜೋಹಾನ್ಸ್‌ ಬರ್ಗ್‌ : ದಕ್ಷಿಣ ಆಫ್ರಿಕಾ ಅಧ್ಯಕ್ಷರಾದ ಸೈರಿಲ್ ರಾಮಫೋಸಾ ಅವರ ಜೊತೆ ಬ್ರಿಕ್ಸ್‌ ಶೃಂಗ ಸಭೆಯ ವೇದಿಕೆ ಏರಲು ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೇದಿಕೆ ಮೇಲೆ ಭಾರತದ ತ್ರಿವರ್ಣ ಧ್ವಜದ ಫೋಟೋ ಬಿದ್ದಿರುವುದು ಕಂಡು ಬಂತು. ಅದು ಅವರು ನಿಂತುಕೊಳ್ಳುವ ಜಾಗದಲ್ಲಿಯೇ ಬಿದ್ದಿತ್ತು. ವೇದಿಕೆ ಏರಿದ ಕೂಡಲೇ ತ್ರಿವರ್ಣ ಧ್ವಜದ ಫೋಟೋ ಕಂಡ ಪ್ರಧಾನಿ ಮೋದಿ ಬಗ್ಗಿ ಅದನ್ನು ಎತ್ತಿಕೊಂಡು ತಮ್ಮ ಕೋಟ್‌ನ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ.
ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಗ್ರೂಪ್ ಫೋಟೊ ಸೆಶನ್‌ಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ನಾಯಕರ ಸ್ಥಾನವನ್ನು ಸೂಚಿಸಲು ಗುರುತಾಗಿ ಇರಿಸಲಾಗಿದ್ದ ನೆಲದ ಮೇಲೆ ಬಿದ್ದಿದ್ದ ತ್ರಿವರ್ಣ ಧ್ವಜದ ಮಾದರಿಯನ್ನು ಕಂಡು ಅನ್ನು ಎತ್ತಿಕೊಂಡು ಜೇಬಿನಲ್ಲಿಟ್ಟುಕೊಂಡರು. ಇದನ್ನು ಗಮನಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸೈರಿಲ್ ರಾಮಫೋಸಾ ಅವರೂ ಕೂಡಾ ತಾವು ನಿಲ್ಲುವ ಜಾಗದಲ್ಲಿ ಬಿದ್ದಿದ್ದ ತ್ರಿವರ್ಣ ಧ್ವಜವನ್ನು ಎತ್ತಿಕೊಂಡು ತಮ್ಮ ಸಹಾಯಕರಿಗೆ ನೀಡಿದರು.

ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಗುಂಪು ಫೋಟೋದ ಭಾಗವಾಗಿದ್ದರು
ವೇದಿಕೆ ಮೇಲೇರುವಾಗ ತ್ರಿವರ್ಣ ಧ್ವಜ ಕಂಡ ಕೂಡಲೇ ಅದರ ಮೇಲ ಕಾಲು ಊರದೆ ತಕ್ಷಣವನ್ನು ಅದನ್ನು ಎತ್ತಿಕೊಂಡು ಜೇಬಿನಲ್ಲಿ ಇಟ್ಟುಕೊಂಡ ಪ್ರಧಾನಿ ಅವರ ಈ ಸಮಯ ಪ್ರಜ್ಞೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಈ ಸನ್ನಿವೇಶವನ್ನು ದೃಶ್ಯ ಸಮೇತ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್‌ನಲ್ಲಿ (ಟ್ವಿಟ್ಟರ್) ಮಾಹಿತಿ ಹಂಚಿಕೊಂಡಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ನಡೆಯುತ್ತಿರುವ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಮೂರು ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. “ದಕ್ಷಿಣ ಆಫ್ರಿಕಾದ ಅಧ್ಯಕ್ಷರ ನೇತೃತ್ವದಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಸಿರಿಲ್ ರಾಮಾಫೋಸಾ ಅವರ ಆಹ್ವಾನದ ಮೇರೆಗೆ ಆಗಸ್ಟ್‌ 22ರಿಂದ 24ರ ವರೆಗೆ ರವರೆಗೆ ದಕ್ಷಿಣ ಆಫ್ರಿಕಾ ಗಣರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಎಂದು ಪಿಎಂಒ ಹೇಳಿದೆ.
ಬ್ರಿಕ್ಸ್ ವಿವಿಧ ವಲಯಗಳಲ್ಲಿ ಬಲವಾದ ಸಹಕಾರ ಕಾರ್ಯಸೂಚಿಯನ್ನು ಅನುಸರಿಸುತ್ತಿದೆ. ಅಭಿವೃದ್ಧಿಯ ಅಗತ್ಯತೆಗಳು ಮತ್ತು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ ಸೇರಿದಂತೆ ಇಡೀ ಜಾಗತಿಕ ದಕ್ಷಿಣದ ಕಾಳಜಿಯ ವಿಷಯಗಳ ಬಗ್ಗೆ ಚರ್ಚಿಸಲು ಬ್ರಿಕ್ಸ್ ವೇದಿಕೆಯಾಗಿದೆ ಎಂದು ನಾವು ಗೌರವಿಸುತ್ತೇವೆ. ಈ ಶೃಂಗಸಭೆಯು ಭವಿಷ್ಯದ ಸಹಕಾರ ಕ್ಷೇತ್ರಗಳನ್ನು ಗುರುತಿಸಲು ಮತ್ತು ಸಾಂಸ್ಥಿಕ ಅಭಿವೃದ್ಧಿಯನ್ನು ಪರಿಶೀಲಿಸಲು ಬ್ರಿಕ್ಸ್‌ಗೆ ಉಪಯುಕ್ತ ಅವಕಾಶವಾಗಿದೆ ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.
ಜಾಗತಿಕ ಸಭೆಯ ಮೊದಲ ದಿನದಂದು, ಭಾರತವು ಶೀಘ್ರದಲ್ಲೇ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅವರು ಬ್ರಿಕ್ಸ್ ಉದ್ಯಮ ವೇದಿಕೆಯ ನಾಯಕರ ಸಂವಾದವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

 

 

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement