ಕಾರವಾರ : ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

ಕಾರವಾರ: ಮೂರು ವರ್ಷದ ಬಾಲಕಿಯೊಬ್ಬಳು ಮನೆಯ ಪಕ್ಕದಲ್ಲೇ ಇದ್ದ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಾರವಾರ ನಗರದ ಹರಿದೇವ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಬಾವಿಯ ಸಮೀಪ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತಳನ್ನು ಮೂರುವರ್ಷದ ಬಾಲಕಿ ಸ್ತುತಿ ಎಂದು ಗುರುತಿಸಲಾಗಿದೆ. ಈಕೆ ಮನೆಯ ಸಮೀಪ ಆಟವಾಡುತ್ತಿದ್ದಳು. ಆಟವಾಡುತ್ತಾ ಇದ್ದ ವೇಳೆ ಮನೆಯ ಪಕ್ಕದಲ್ಲೇ ಇದ್ದ ಬಾವಿಗೆ ಮಣ್ಣನ್ನು ಹಾಕಲು ಮುಂದಾಗಿದ್ದಾಳೆ. ಈ ವೇಳೆ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.
ಮನೆ ಆಟವಾಡುತ್ತಿದ್ದ ಮಗು ಕಾಣದಿದ್ದಾಗ ಪೋಷಕರು ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಎಲ್ಲಿಯೂ ಬಾಲಕಿ ಅವರಿಗೆ ಕಾಣಿಸಲಿಲ್ಲ. ಅನುಮಾನ ಬಂದು ಬಾವಿಯೊಳಗೆ ನೋಡಿದಾಗ, ಬಾಲಕಿ ಬಿದ್ದಿದ್ದು ಗೊತ್ತಾಗಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿತ್ತು. ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement