ʼಇಂಡಿಯಾʼ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ? ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ ಆಮ್‌ ಆದ್ಮಿ ಪಾರ್ಟಿ

ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಲು ತನ್ನ ಕಾರ್ಯತಂತ್ರವನ್ನು ಶನಿವಾರ ಅನಾವರಣಗೊಳಿಸಿದೆ.
2024 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಎಎಪಿಯ ನಿರ್ಧಾರವು ಪ್ರತಿಪಕ್ಷಗಳ ಮೈತ್ರಿಕೂಟ-ಇಂಡಿಯಾದ ಒಗ್ಗಟ್ಟಿನ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಎಎಪಿಯ ಪ್ರಧಾನ ಕಾರ್ಯದರ್ಶಿ ಸಂದೀಪ ಪಾಠಕ ಅವರು ಬಿಹಾರ ಘಟಕದ ಮುಖಂಡರು ಮತ್ತು ಸದಸ್ಯರೊಂದಿಗೆ ಸಭೆ ನಡೆಸಿದರು. ಬಿಹಾರ ವಿಧಾನಸಭೆ ಚುನಾವಣೆ 2025ಕ್ಕೆ ನಡೆಯಲಿದೆ.
ಸಭೆಯ ವೇಳೆ, ಸಂದೀಪ ಪಾಠಕ ಅವರು ಬಿಹಾರದಲ್ಲಿ ಪಕ್ಷವನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದರು. ದೆಹಲಿಯ ಎಎಪಿ ಶಾಸಕ ಮತ್ತು ಪಕ್ಷದ ಬಿಹಾರ ಉಸ್ತುವಾರಿ ಅಜೇಶ ಯಾದವ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
“ಕೊಳಕು ರಾಜಕೀಯದಿಂದಾಗಿ ರಾಜ್ಯವು ಎಲ್ಲಿ ಇರಬೇಕೋ ಅಲ್ಲಿ ಮುನ್ನಡೆಯಲು ಸಾಧ್ಯವಾಗದಿರುವುದು ಬಿಹಾರದ ದೌರ್ಭಾಗ್ಯ, ಬಿಹಾರದಲ್ಲಿ ಎಎಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು, ಸಂಘಟನೆ ಪ್ರಬಲವಾಗಿರುವುದು ಅವಶ್ಯಕ ಎಂದು ಪಾಠಕ್ ಹೇಳಿರುವುದಾಗಿ ವರದಿಯಾಗಿದೆ.

ಬಿಹಾರದಲ್ಲಿ ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ, ಆದರೆ ಯಾವಾಗ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ, ಬಿಹಾರದಲ್ಲಿ ನೇರವಾಗಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ, ಅದಕ್ಕಾಗಿ ಮೊದಲು ಸಂಘಟನೆಯನ್ನು ಬಲಪಡಿಸಬೇಕು, ಪ್ರತಿ ಹಳ್ಳಿಯಲ್ಲೂ ನಮ್ಮದೇ ಆದ ಸಮಿತಿ ರಚಿಸಬೇಕು. ಸಂಘಟನೆಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಈಗಿನಿಂದಲೇ ಶ್ರಮಿಸಿ, ಒಮ್ಮೆ ಸಂಘಟನೆಯು ಬಲಗೊಂಡರೆ, ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಮತ್ತು ಗೆಲ್ಲುತ್ತೇವೆ” ಎಂದು ಪಾಠಕ ಹೇಳಿದ್ದಾರೆ.
ಎಎಪಿ ಗುಜರಾತ್‌ನಲ್ಲಿ ಪ್ರದರ್ಶಿಸಿದ ಅದೇ ಹುರುಪಿನೊಂದಿಗೆ ಬಿಹಾರದ ಚುನಾವಣೆಯನ್ನು ಎದುರಿಸುತ್ತದೆ ಎಂದು ಒತ್ತಿ ಹೇಳಿದ ಅವರು ತನ್ನ ಕಾರ್ಯತಂತ್ರವನ್ನು ವಿವರಿಸಿಸಿದ್ದಾರೆ. ರಾಜ್ಯದಲ್ಲಿ ಪಕ್ಷದ ಆರಂಭಿಕ ಪ್ರವೇಶವು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂಲಕ ನಡೆಯಲಿದೆ ಎಂದು ಉಲ್ಲೇಖಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಆಪರೇಶನ್‌ ಸಿಂಧೂರ ದಾಳಿ ನಂತ್ರ 2019ರ ʼಪುಲ್ವಾಮಾ ಭಯೋತ್ಪಾದಕ ದಾಳಿʼಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ..!

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪಾಠಕ, ದೇಶವು ಎದುರಿಸುತ್ತಿರುವ ಪ್ರಸ್ತುತ ಸವಾಲಿನ ಪರಿಸ್ಥಿತಿಗಳನ್ನು ಟೀಕಿಸಿದರು, ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ವಸ್ತುನಿಷ್ಠ ಪರಿಹಾರಗಳಿಲ್ಲದೆ ಕೇವಲ ಭಾಷಣಗಳನ್ನು ಮಾಡಿದ್ದಾರೆ ಎಂದು ಟೀಕಿಸಿದರು.
“ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹೊಂದಿದೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಲು ಉದ್ದೇಶಿಸಿದೆ” ಎಂದು ಅವರು ಹೇಳಿದರು, ಪಾಲುದಾರಿಕೆಗಳ ಬಗ್ಗೆ ನಿರ್ಧಾರಗಳನ್ನು ನಂತರ ಮಾಡಲಾಗುವುದು ಎಂದು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement