ಚೀನಾದ ಕಾಡಿನಲ್ಲಿ ಡ್ರಗ್ಸ್ ಚೀಲವನ್ನು ಪತ್ತೆ ಮಾಡಿದ ಕಾಡಾನೆ | ವೀಕ್ಷಿಸಿ

ಕಾಡಾನೆಯೊಂದು ದಕ್ಷಿಣ ಚೀನಾದ ಯುನ್ನಾನ್ ಪ್ರಾಂತ್ಯದ ಮೆಂಗ್‌ಮನ್ ಟೌನ್‌ಶಿಪ್‌ನಲ್ಲಿ 2.8 ಕಿಲೋಗ್ರಾಂಗಳಷ್ಟು ಅಫೀಮನ್ನು ಪತ್ತೆಮಾಡಿದೆ ಎಂದು ಸ್ಟ್ರೈಟ್ ಟೈಮ್ಸ್ ವರದಿ ಮಾಡಿದೆ.
ಇದರ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ನಾಲ್ಕು ಕಾಡು ಆನೆಗಳು ಗ್ರಾಮದಿಂದ ಹೋಗುತ್ತಿರುವುದನ್ನು ಕಂಡುಬರುತ್ತದೆ. ಒಂದು ಆನೆಯು ಆಫಿಮಿದ್ದ ಬ್ಯಾಗ್‌ ಅನ್ನು ಪತ್ತೆ ಮಾಡಿದೆ. ಪತ್ತೆ ಮಾಡಿದ ಅದು ಅದನ್ನು ಎತ್ತಿ ಎಸೆದಿದೆ. ನಂತರ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.

ಚೀಲವನ್ನು ಪರಿಶೀಲಿಸುವ ಮೊದಲು ಕಾಡು ಆನೆಗಳು ಆ ಸ್ಥಳದಿಂದ ಹೊರಬರುವವರೆಗೆ ಪೊಲೀಸರು ಕಾಯುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಬಟ್ಟೆಯ ಪದರಗಳ ಅಡಿಯಲ್ಲಿ ಅಡಗಿಸಿಟ್ಟ ಅಫೀಮಿನ ಗಂಟನ್ನು ಹುಡುಕಲು ಪೊಲೀಸರು ಚೀಲವನ್ನು ತೆರೆಯುವುದನ್ನು ದೃಶ್ಯಾವಳಿ ತೋರಿಸುತ್ತದೆ.

ಕಾಡು ಆನೆ ಮಾದಕ ದ್ರವ್ಯ ಪತ್ತೆ ಮಾಡಿದ ವೀಡಿಯೊಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ಭಾರತದ ಆಪರೇಷನ್ ಸಿಂಧೂರ ದಾಳಿಯಲ್ಲಿ ಈ ಐವರು ನೊಟೊರಿಯಸ್‌ ಭಯೋತ್ಪಾದಕರ ಹತ್ಯೆ ; ಆದ್ರೆ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡಿದ ಪಾಕ್‌..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement