ಬ್ಯಾಂಕುಗಳಿಗೆ ಮರಳಿದ 93% ರಷ್ಟು 2000 ರೂ. ನೋಟುಗಳು : ಆರ್‌ಬಿಐ

ನವದೆಹಲಿ: ಆಗಸ್ಟ್ 31ರ ಹೊತ್ತಿಗೆ ಬ್ಯಾಂಕುಗಳಿಗೆ ಹಿಂದಿರುಗಿದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯವು 3.32 ಲಕ್ಷ ಕೋಟಿ ರೂಪಾಯಿಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಹೇಳಿದೆ.
ಬ್ಯಾಂಕ್‌ಗಳಿಂದ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಚಲಾವಣೆಯಿಂದ ಮರಳಿ ಪಡೆದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯವು ಆಗಸ್ಟ್ 31, 2023 ರವರೆಗೆ 3.32 ಲಕ್ಷ ಕೋಟಿ ರೂಪಾಯಿಯಾಗಿದೆ” ಎಂದು ಆರ್‌ಬಿಐ ಹೇಳಿದೆ. ಇದರೊಂದಿಗೆ ಈಗ ಚಲಾವಣೆಯಲ್ಲಿರುವ 2000 ರೂ.ಗಳ ನೋಟುಗಳ ಒಟ್ಟು ಮೌಲ್ಯ 0.24 ಲಕ್ಷ ಕೋಟಿ ರೂ.ಗಳಾಗಿದೆ. ಹಾಗೂ ಮೇ 19, 2023 ರಂತೆ ಚಲಾವಣೆಯಲ್ಲಿರುವ 2,000 ರೂಪಾಯಿಗಳ ಬ್ಯಾಂಕ್‌ನೋಟುಗಳಲ್ಲಿ 93%ರಷ್ಟು ಮರಳಿಬಂದಿದೆ ಎಂದು ಆರ್‌ಬಿಐ ತಿಳಿಸಿದೆ.
ಪ್ರಮುಖ ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಮಾಹಿತಿಯು ಚಲಾವಣೆಯಿಂದ ಹಿಂದಿರುಗಿದ ಒಟ್ಟು 2,000 ರೂ. ನೋಟುಗಳಲ್ಲಿ ಸರಿಸುಮಾರು 87 ಪ್ರತಿಶತವು ಠೇವಣಿ ರೂಪದಲ್ಲಿದೆ ಎಂದು ಸೂಚಿಸಿದೆ, ಉಳಿದ 13 ಪ್ರತಿಶತವು ಇತರ ನೋಟುಗಳಿಗೆ ವಿನಿಮಯವಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
ಸಾರ್ವಜನಿಕರು ಸೆಪ್ಟೆಂಬರ್ 30, 2023 ರವರೆಗಿನ ಉಳಿದ ಅವಧಿಯನ್ನು ತಮ್ಮ ಬಳಿ ಇರುವ 2,000 ರೂಪಾಯಿಗಳ ನೋಟುಗಳನ್ನು ಠೇವಣಿ ಮಾಡಲು ಮತ್ತು/ಅಥವಾ ಬದಲಾಯಿಸಲು ಬಳಸಿಕೊಳ್ಳಲು ಆರ್‌ಬಿಐ ವಿನಂತಿಸಿದೆ.
ಆರ್‌ಬಿಐ ಮೇ ತಿಂಗಳಲ್ಲಿ 2,000 ರೂಪಾಯಿಗಳ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು, ಸೆಪ್ಟೆಂಬರ್ 30 ರವರೆಗೆ ವಿನಿಮಯ ಅಥವಾ ಠೇವಣಿ ಮಾಡಲು ಅದು ಅವಕಾಶ ನೀಡಿದೆ. 2,000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸುವ ನಿರ್ಧಾರವನ್ನು ಆರ್‌ಬಿಐನ ‘ಕ್ಲೀನ್ ನೋಟ್ ನೀತಿ’ಗೆ ಅನುಗುಣವಾಗಿ ಮಾಡಲಾಗಿದೆ.
ಕೆಲವು ತಿಂಗಳ ಹಿಂದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದ ಅಧ್ಯಯನವು ಚಲಾವಣೆಯಿಂದ 2,000 ರೂ ನೋಟುಗಳನ್ನು ತೆಗೆದುಹಾಕುವುದರಿಂದ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದೆ. ಈ ಕ್ರಮವು ಬ್ಯಾಂಕ್ ಠೇವಣಿಗಳನ್ನು ಮತ್ತು ಸಾಲಗಳ ಮರುಪಾವತಿಯನ್ನು ಉತ್ತೇಜಿಸುತ್ತದೆ ಮತ್ತು ಬಳಕೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಿಟೇಲ್ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಮೇಲೆ ಒಟ್ಟಾರೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement