ಇಸ್ರೋ ಸೂರ್ಯಯಾನ: ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಪ್ರಕ್ರಿಯೆ ಯಶಸ್ವಿ

ಬೆಂಗಳೂರು: ಇಸ್ರೋ ತನ್ನ ಮೊದಲ ಸೂರ್ಯ ಯೋಜನೆ ಆದಿತ್ಯ ಎಲ್ 1 ಮಿಷನ್‌ನ ಮೊದಲ ಹಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ
ಪೂರ್ಣಗೊಳಿಸಿದೆ.
ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ. ಇಸ್ರೋ ಈ ಬಗ್ಗೆ ಎಕ್ಸ್‌ (ಟ್ವಿಟರ್‌) ನಲ್ಲಿ ಮಾಹಿತಿ ನೀಡಿದ್ದು, ಆದಿತ್ಯ L1 ನೌಕೆಯ ಮೊದಲ ಭೂ-ಆಧಾರಿತ ಕುಶಲತೆ (ಮೆನೋವರ್)ಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿರುವ ಟೆಲಿಮೆಟ್ರಿ, ಟ್ರ್ಯಾಂಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಯಶಸ್ವಿಯಾಗಿ ಈ ಪ್ರಕ್ರಿಯೆಯನ್ನು ನಿರ್ವಹಿಸಲಾಗಿದೆ. ಬಾಹ್ಯಾಕಾಶ ನೌಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅದು ತಿಳಿಸಿದೆ.ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಈಗ 245 ಕಿ.ಮೀ x 22459 ಕಿ.ಮೀ. ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿದ್ದು, ಮುಂದಿನ ಹಂತದ ಕಕ್ಷೆ ಬದಲಾವಣೆಯನ್ನು ಸೆಪ್ಟೆಂಬರ್ 05, ಮಂಗಳವಾರ 3 ಗಂಟೆಗೆ ನಿಗದಿಪಡಿಸಲಾಗಿದೆ.

ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ ಎಲ್‌–1 ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುವುದು. 125 ದಿನಗಳ ನಂತರ ಲಗ್ರಾಂಜಿಯನ್ ಬಿಂದು(ಎಲ್‌–1 ಬಿಂದು)ವಿಗೆ ಸೇರಿಸಲಾಗುತ್ತದೆ.
ಸೂರ್ಯನ ಅಧ್ಯಯನದ ಉದ್ದೇಶದ ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್‌1 ವೀಕ್ಷಣಾಲಯವನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟ್‌ ಅನ್ನು ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಶನಿವಾರ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement