ಇಸ್ರೋದಿಂದ ಮತ್ತೊಂದು ಮಹತ್ವದ ಸಾಧನೆ : ಆದಿತ್ಯ L1 ಯಶಸ್ವಿ, ಲ್ಯಾಂಗ್ರೇಜಿಯನ್‌ ಪಾಯಿಂಟ್ 1ರಲ್ಲಿ ಆದಿತ್ಯ-ಎಲ್1 ಇರಿಸಿದ ಇಸ್ರೋ…!

ನವದೆಹಲಿ: ಭಾರತ ತನ್ನ ಬಾಹ್ಯಾಕಾಶ ಸಾಧನೆಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಮತ್ತೊಂದು ಐತಿಹಾಸಿಕ ಕ್ಷಣ.., ಸೂರ್ಯನನ್ನು ಅಧ್ಯಯನ ಮಾಡುವ ದೇಶದ ಮೊದಲ ಮಿಷನ್ ಆದಿತ್ಯ-ಎಲ್1 ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪಿದೆ. ಈ ಬಗ್ಗೆ ಇಸ್ರೋ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಇಸ್ರೋ ಆದಿತ್ಯ L1 ಮಿಷನ್ 15 ಲಕ್ಷ ಕಿಲೋಮೀಟರ್‌ಗಳು ಮತ್ತು … Continued

ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿದ ಇಸ್ರೋದ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ | ಮೊದಲ ಚಿತ್ರಗಳನ್ನು ನೋಡಿ

ನವದೆಹಲಿ: ಭಾರತದ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ( SUIT) ಉಪಕರಣವು ನೇರಳಾತೀತ ತರಂಗಾಂತರಗಳ ಸಮೀಪದಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಹೇಳಿದೆ. ಎಸ್‌ಯುಐಟಿ (SUIT 200-400 nm) ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ (ISRO) … Continued

ಸೌರ ಮಾರುತಗಳ ಅಧ್ಯಯನ ಆರಂಭಿಸಿದ ಭಾರತದ ಆದಿತ್ಯ ಎಲ್ 1 ಮಿಷನ್ : ಮೊದಲನೇ ಚಿತ್ರ ಹಂಚಿಕೊಂಡ ಇಸ್ರೋ

ನವದೆಹಲಿ: ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮಹತ್ವಾಕಾಂಕ್ಷೆಯ ಮಿಷನ್ ಆದಿತ್ಯ ಎಲ್ 1 ಈಗ ಸೌರ ಮಾರುತಗಳನ್ನು ವೀಕ್ಷಿಸಲು ಪ್ರಾರಂಭಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಈ ಬೆಳವಣಿಗೆಯನ್ನು ಹಂಚಿಕೊಂಡಿದ್ದು, ಉಪಗ್ರಹದ ಮೇಲಿನ ಆದಿತ್ಯ ಸೌರ ಮಾರುತದ ಕಣ ಪ್ರಯೋಗ (ASPEX) ಪೇಲೋಡ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. … Continued

ಆದಿತ್ಯ-L1 ಯೋಜನೆಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಪರ್ಫ್ಯೂಮ್‌ ಸಹ ಬಳಸಿರಲಿಲ್ಲವಂತೆ : ಯಾಕೆಂದರೆ….

ಬೆಂಗಳೂರಿನ ಆದಿತ್ಯ L-1 ಬಾಹ್ಯಾಕಾಶ ನೌಕೆಯ ಸೌರ ಮಿಷನ್‌ಗಾಗಿ ಮುಖ್ಯ ಪೇಲೋಡ್‌ನಲ್ಲಿ ಕೆಲಸ ಮಾಡುತ್ತಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA)ಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸುಗಂಧ ದ್ರವ್ಯಗಳು ಮತ್ತು ಸ್ಪ್ರೇಗಳನ್ನು ಸಹ ಬಳಸಿರಲಿಲ್ಲವಂತೆ. ಅಷ್ಟು ಕಟ್ಟುನಿಟ್ಟಾದ ನಿಯಮವನ್ನು ಅವರು ಪಾಲಿಸಿದ್ದರಂತೆ. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಎಂದು ಕರೆಯಲ್ಪಡುವ ಆದಿತ್ಯನ ಮುಖ್ಯ ಪೇಲೋಡ್‌ನಲ್ಲಿ … Continued

ಇಸ್ರೋ ಸೂರ್ಯಯಾನ: ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಪ್ರಕ್ರಿಯೆ ಯಶಸ್ವಿ

ಬೆಂಗಳೂರು: ಇಸ್ರೋ ತನ್ನ ಮೊದಲ ಸೂರ್ಯ ಯೋಜನೆ ಆದಿತ್ಯ ಎಲ್ 1 ಮಿಷನ್‌ನ ಮೊದಲ ಹಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ. ಇಸ್ರೋ ಈ ಬಗ್ಗೆ ಎಕ್ಸ್‌ (ಟ್ವಿಟರ್‌) ನಲ್ಲಿ ಮಾಹಿತಿ … Continued

ಇಂದು ಭಾರತದ ಮೊದಲ ಸೂರ್ಯಯಾನ ಬಾಹ್ಯಾಕಾಶ ನೌಕೆ ಉಡಾವಣೆ : ಸಮಯ, ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ..

ನವದೆಹಲಿ: ಭಾರತದ ಮೊದಲ ಸೂರ್ಯನ ಮಿಷನ್ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3 ಐತಿಹಾಸಿಕ ಲ್ಯಾಂಡಿಂಗ್ ನಂತರ, ದೇಶ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಎರಡೂ ಆದಿತ್ಯ L1 ಮಿಷನ್‌ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿವೆ. ಆದಿತ್ಯ L1 (PSLV-C57) ಅನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ … Continued