ಸೌರ ಮಾರುತಗಳ ಅಧ್ಯಯನ ಆರಂಭಿಸಿದ ಭಾರತದ ಆದಿತ್ಯ ಎಲ್ 1 ಮಿಷನ್ : ಮೊದಲನೇ ಚಿತ್ರ ಹಂಚಿಕೊಂಡ ಇಸ್ರೋ

ನವದೆಹಲಿ: ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮಹತ್ವಾಕಾಂಕ್ಷೆಯ ಮಿಷನ್ ಆದಿತ್ಯ ಎಲ್ 1 ಈಗ ಸೌರ ಮಾರುತಗಳನ್ನು ವೀಕ್ಷಿಸಲು ಪ್ರಾರಂಭಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಈ ಬೆಳವಣಿಗೆಯನ್ನು ಹಂಚಿಕೊಂಡಿದ್ದು, ಉಪಗ್ರಹದ ಮೇಲಿನ ಆದಿತ್ಯ ಸೌರ ಮಾರುತದ ಕಣ ಪ್ರಯೋಗ (ASPEX) ಪೇಲೋಡ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. … Continued