ಇಸ್ರೇಲ್ ಗಾಜಾ ಮೇಲೆ ಭೂ ಆಕ್ರಮಣವನ್ನು ವಿಳಂಬಗೊಳಿಸುತ್ತಿರುವುದು ಏಕೆ..?

1,300 ಕ್ಕೂ ಹೆಚ್ಚು ಇಸ್ರೇಲಿಗಳನ್ನು ಬಲಿತೆಗೆದುಕೊಂಡ ಅಭೂತಪೂರ್ವ ಹಮಾಸ್‌ ದಾಳಿಗೆ ಪ್ರತೀಕಾರವಾಗಿ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್)ಈಗ ಹಮಾಸ್ ಹಿಡಿತದಲ್ಲಿರುವ ಗಾಜಾ ಪಟ್ಟಿಯ ಮೇಲೆ ಭೂ ದಾಳಿಗೆ ಸಜ್ಜಾಗಿದೆ. ಇಸ್ರೇಲ್ ಗಾಜಾದಲ್ಲಿ ಹಮಾಸ್-ಸಂಯೋಜಿತ ಸ್ಥಳಗಳ ಮೇಲೆ ತನ್ನ ವೈಮಾನಿಕ ದಾಳಿಯನ್ನು ಮುಂದುವರೆಸಿದೆ, ಬಾಂಬ್ ದಾಳಿಯನ್ನು ನಿಲ್ಲಿಸದಿದ್ದರೆ “ಗಂಭೀರ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. 2006 … Continued

ಆದಿತ್ಯ-L1 ಯೋಜನೆಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಪರ್ಫ್ಯೂಮ್‌ ಸಹ ಬಳಸಿರಲಿಲ್ಲವಂತೆ : ಯಾಕೆಂದರೆ….

ಬೆಂಗಳೂರಿನ ಆದಿತ್ಯ L-1 ಬಾಹ್ಯಾಕಾಶ ನೌಕೆಯ ಸೌರ ಮಿಷನ್‌ಗಾಗಿ ಮುಖ್ಯ ಪೇಲೋಡ್‌ನಲ್ಲಿ ಕೆಲಸ ಮಾಡುತ್ತಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA)ಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸುಗಂಧ ದ್ರವ್ಯಗಳು ಮತ್ತು ಸ್ಪ್ರೇಗಳನ್ನು ಸಹ ಬಳಸಿರಲಿಲ್ಲವಂತೆ. ಅಷ್ಟು ಕಟ್ಟುನಿಟ್ಟಾದ ನಿಯಮವನ್ನು ಅವರು ಪಾಲಿಸಿದ್ದರಂತೆ. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಎಂದು ಕರೆಯಲ್ಪಡುವ ಆದಿತ್ಯನ ಮುಖ್ಯ ಪೇಲೋಡ್‌ನಲ್ಲಿ … Continued

20 ವರ್ಷಗಳ ನಿಷೇಧದ ನಂತರ ಸ್ವಾತಂತ್ರ್ಯ ದಿನದಂದು ಹಿಂದಿ ಸಿನೆಮಾ ಪ್ರದರ್ಶನಕ್ಕೆ ಮುಂದಾದ ಮಣಿಪುರ: ಇಷ್ಟು ವರ್ಷ ಹಿಂದಿ ಸಿನೆಮಾ ನಿಷೇಧಕ್ಕೆ ಕಾರಣ ಗೊತ್ತಾ?

ಗುವಾಹತಿ : 20 ವರ್ಷಗಳ ಸುದೀರ್ಘ ವಿರಾಮದ ನಂತರ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮಂಗಳವಾರ (ಆಗಸ್ಟ್ 15) ಹಿಂದಿ ಚಲನಚಿತ್ರವೊಂದು ಪ್ರದರ್ಶನಗೊಳ್ಳಲಿದೆ. ಹಿಂದಿ ಚಲನಚಿತ್ರವು ಮಂಗಳವಾರ (ಆಗಸ್ಟ್ 15) ಸಂಜೆ ಮಣಿಪುರದ ಅತ್ಯಂತ ಹೆಚ್ಚು ಹಿಂಸಾ ಪೀಡಿತ ಚುರಚಂದಪುರ ಜಿಲ್ಲೆಯ ರೆಂಗ್‌ಕೈ ಎಂಬ ಎಚ್‌ಎಸ್‌ಎ (HSA) ಕ್ಯಾಂಪಸ್‌ನಲ್ಲಿ ಪ್ರದರ್ಶಿತವಾಗಲಿದೆ. ಮಣಿಪುರದ ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆಯಾದ ಹ್ಮಾರ್ … Continued

ಯತ್ನಾಳ ದಿಢೀರ್‌ ದೆಹಲಿ ಭೇಟಿ ಕಾರಣ ಬಹಿರಂಗ

ಶಾಸಕ ಬಸನಗೌಡ ಪಾಟೀಲ ಯತ್ನಾಳ ದೆಹಲಿಗೆ ಭೇಟಿ ನೀಡಿದ ಕಾರಣ ಬಹಿರಂಗಗೊಂಡಿದೆ. ವಿಜಯಪುರದ ಶ್ರೀ ಸಿದ್ದೆಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ಬ ಅಟಲ್‌ ಬಿಹಾರಿ ವಾಜಪೇಯಿ ಶಿಶು ನಿಕೇತನ ಶಾಲೆಯ ಸಿಬಿಎಸ್‌ಇ ನೋಂದಣಿ ಕಾರ್ಯಕ್ಕಾಗಿ ಯತ್ನಾಳ ದೆಹಲಿಗೆ ಹೋಗಿದ್ದಾರೆ. ಪಕ್ಷದ ಹೈಕಮಾಂಡ್‌ನಿಂದ ಯಾವುದೇ ಬುಲಾವ್‌ ಬಂದಿಲ್ಲ. ಯಾವುದೇ ಮುಖಂಡರನ್ನು ಭೇಟಿ ಮಾಡಲು ಹೋಗಿಲ್ಲ ಎಂದು ಯತ್ನಾಳ … Continued