ಇಂದು ಭಾರತದ ಮೊದಲ ಸೂರ್ಯಯಾನ ಬಾಹ್ಯಾಕಾಶ ನೌಕೆ ಉಡಾವಣೆ : ಸಮಯ, ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ..

ನವದೆಹಲಿ: ಭಾರತದ ಮೊದಲ ಸೂರ್ಯನ ಮಿಷನ್ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3 ಐತಿಹಾಸಿಕ ಲ್ಯಾಂಡಿಂಗ್ ನಂತರ, ದೇಶ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಎರಡೂ ಆದಿತ್ಯ L1 ಮಿಷನ್‌ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿವೆ. ಆದಿತ್ಯ L1 (PSLV-C57) ಅನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11:50 IST ಕ್ಕೆ ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇಸ್ರೋ ಶನಿವಾರ ಬೆಳಿಗ್ಗೆ (ಸೆ.2) 11.50ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್‌-1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ-ಸಿ 57 ರಾಕೆಟ್ ನಭಕ್ಕೆ ಹಾರಲಿದೆ ಎಂದು ಹೇಳಿದೆ. ಲಾಂಚ್ ವ್ಯೂ ಗ್ಯಾಲರಿಯಿಂದ ಉಡಾವಣೆಯನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದೆ

ಸೌರ ಮಿಷನ್‌ಗೆ ಆದಿತ್ಯ L1 ಎಂದು ಹೆಸರಿಸಲಾಗಿದೆ. ಸೂರ್ಯ-ಭೂಮಿಯ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ (L1) ಸುತ್ತ ಹಾಲೋ ಕಕ್ಷೆಯಲ್ಲಿ ತನ್ನನ್ನು ತಾನು ಇರಿಸಿಕೊಳ್ಳುವ ಮೂಲಕ ಸೂರ್ಯನ ಬಗ್ಗೆ ಅಭೂತಪೂರ್ವ ಒಳನೋಟಗಳನ್ನು ಒದಗಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. ಇದು ಸೂರ್ಯನ ಹೊರಗಿನ ಪದರಗಳ ಜೊತೆಗೆ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ವೀಕ್ಷಿಸುವ ಗುರಿಯನ್ನು ಹೊಂದಿದೆ. ಸೌರ ಸ್ಫೋಟದ ಘಟನೆಗಳಿಗೆ ಕಾರಣವಾಗುವ ಪ್ರಕ್ರಿಯೆಗಳ ಅನುಕ್ರಮವನ್ನು ಗುರುತಿಸಿ ಸೂರ್ಯನ ಕಣದ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಡೇಟಾವನ್ನು ಒದಗಿಸುವ ಇನ್-ಸಿಟು ಕಣ ಮತ್ತು ಪ್ಲಾಸ್ಮಾ ಪರಿಸರವನ್ನು ಗಮನಿಸುವುದು ಮತ್ತೊಂದು ಉದ್ದೇಶವಾಗಿದೆ.
ಆದಿತ್ಯ L1 ನ ಒಟ್ಟು ವೆಚ್ಚ 378 ಕೋಟಿ ($44.7 ಮಿಲಿಯನ್) ರೂ.ಗಳಾಗಿದೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಅವರು, “ನಾವು ಉಡಾವಣೆಗೆ ತಯಾರಾಗುತ್ತಿದ್ದೇವೆ. ರಾಕೆಟ್ ಮತ್ತು ಉಪಗ್ರಹ ಸಿದ್ಧವಾಗಿದೆ, ನಾವು ಉಡಾವಣೆಯ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿದ್ದೇವೆ. ಶುಕ್ರವಾರ ನಾವು ಉಡಾವಣೆಗೆ ಕ್ಷಣಗಣನೆಯನ್ನು ಪ್ರಾರಂಭಿಸಬೇಕಾಗಿದೆ. ಶನಿವಾರ ಉಡಾವಣೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

ಆದಿತ್ಯ L1 ಲಾಂಚ್ ಲೈವ್ ಸ್ಟ್ರೀಮಿಂಗ್ ವಿವರಗಳು:
ಆದಿತ್ಯ L1 ಮಿಷನ್ ಯಾವಾಗ ಮತ್ತು ಎಲ್ಲಿ ಪ್ರಾರಂಭಿಸಲ್ಪಡುತ್ತದೆ?
ಆದಿತ್ಯ L1 ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ಪೆಟ್ 2 ರಂದು ಬೆಳಿಗ್ಗೆ 11:50 IST ಕ್ಕೆ ಉಡಾವಣೆ ಮಾಡಲಾಗುತ್ತದೆ.
ಜನರು ಈ URL ನಲ್ಲಿ ನೋಂದಾಯಿಸುವ ಮೂಲಕ ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಸೂರ್ಯಯಾನದ ಉಡಾವಣೆಯನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು: https://lvg.shar.gov.in/VSCREGISTRATION/index.jsp ಕ್ಲಿಕ್‌ ಮಾಡಿ ನೀಡಬಹುದಾಗಿದೆ.
ಈಗ ನೋಂದಣಿಗಳನ್ನು ಸ್ಥಗಿತಗೊಳಿಸಲಾಗಿದ್ದರೂ, ಜನರು ISRO ವೆಬ್‌ಸೈಟ್ ಮತ್ತು ಯೂಟ್ಯೂಬ್‌ನಲ್ಲಿ ಉಡಾವಣೆಯನ್ನು ಲೈವ್ ಸ್ಟ್ರೀಮ್ ಮಾಡಬಹುದು. ಸೂರ್ಯಯಾನದ ಕಾರ್ಯಚಾರಣೆ ಉಡಾವಣೆಯನ್ನು ಡಿಡಿ ನ್ಯೂಸ್ ನೇರ ಪ್ರಸಾರ ಮಾಡಲಿದೆ.

ಇಸ್ರೋದ ಸೂರ್ಯಯಾನ ಆದಿತ್ಯ L1 ಮಿಷನ್‌  ಉಡಾವಣೆಯನ್ನು ಇಲ್ಲಿ ನೇರವಾಗಿ ವೀಕ್ಷಿಸಬಹುದು..
ಇಸ್ರೋ ವೆಬ್‌ಸೈಟ್ https://isro.gov.in
ಫೇಸ್ಬುಕ್ https://facebook.com/ISRO
YouTube https://youtube.com/watch?v=_IcgGYZTXQw
ಡಿಡಿ ನ್ಯಾಷನಲ್ ಟಿವಿ ಚಾನೆಲ್
ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11:20ರಿಂದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement