ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಪರೀಕ್ಷೆ ವಿಧಾನದಲ್ಲಿ ಬದಲಾವಣೆ, ವರ್ಷಕ್ಕೆ 3 ಸಲ ಪರೀಕ್ಷೆ…

ಬೆಂಗಳೂರು : ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯು (Second PUC) ಪರೀಕ್ಷೆ ವ್ಯವಸ್ಥೆಯಲ್ಲಿ ಹೊಸ ವಿಧಾನ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ಮುಂದೆ ಒಂದು ವರ್ಷದಲ್ಲಿ ಮೂರು ವಾರ್ಷಿಕ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಲಾಗಿದೆ. .ಅನುತ್ತೀರ್ಣರಾದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಬಹುದು. ಅಂದರೆ, ಅವರಿಗೆ ವರ್ಷಕ್ಕೆ ಎರಡು ಬಾರಿ ಪೂರಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಕುರಿತು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ವಾರ್ಷಿಕ ಪರೀಕ್ಷೆ, ಪೂರಕ ಪರೀಕ್ಷೆ ವ್ಯವಸ್ಥೆ ಕೈಬಿಡಲಾಗುತ್ತದೆ. ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3 ಹೆಸರಿನಲ್ಲಿ ಪರೀಕ್ಷೆ ನಡೆಸಲಾಗುವುದು. ಈ ವರ್ಷದಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್​​​ ಅಥವಾ ಕಡಿಮೆ ಅಂಕ ಬಂದವರು ವರ್ಷಕ್ಕೆ 3 ಬಾರಿ ಪರೀಕ್ಷೆ ಬರೆಯಬಹುದು. ಕೊರೊನಾ ನಂತರ ಕಲಿಕಾ ಚೇತರಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಕ್ಕಳು ಹಾಗೂ ಪಾಲಕರ ಒತ್ತಡ ಕಡಿಮೆ ಮಾಡಲು ಒಂದೇ ವರ್ಷದಲ್ಲಿ 3 ಸಲ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಿದ್ದೇವೆ. ಈ ವರ್ಷದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವರ್ಷಕ್ಕೆ 3 ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ.
ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗಬಾರದು ಎಂದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಅಶ್ಲೀಲ‌ ವೀಡಿಯೊ ಇಟ್ಟುಕೊಳ್ಳುವುದು ಅಪರಾಧ, ಡಿಲೀಟ್‌ ಮಾಡಿ : ಎಸ್‌ಐಟಿ ಮುಖ್ಯಸ್ಥರು

ಏನಿದು ನೂತನ ಪರೀಕ್ಷಾ ವಿಧಾನ..?
* 2023-24ನೇ ಸಾಲಿನಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ.
* ವಿದ್ಯಾರ್ಥಿಗಳು ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ‌ ಪಡೆದರೆ ಇನ್ನೊಂದು ಪರೀಕ್ಷೆ ಬರೆಯಬಹುದು. ಅದರಲ್ಲಿ ಕಡಿಮೆ ಬಂದರೆ 3 ನೇ ಪರೀಕ್ಷೆ ಬರೆಯಬಹುದು.
* 2 ಮತ್ತು 3 ನೇ ಪರೀಕ್ಷೆಯಲ್ಲಿ ಮೊದಲ ಪರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದರೆ, ಎರಡು ಪರೀಕ್ಷೆ ಬರೆದರೂ ವಿದ್ಯಾರ್ಥಿಗಳು ಮೊದಲ ಪರೀಕ್ಷೆಯ ಅಂಕಗಳನ್ನೇ ಉಳಿಸಿಕೊಳ್ಳಬಹುದು.
* ಯಾವುದಾದರೂ ಒಂದು ವಿಷಯದಲ್ಲಿ ಕಡಿಮೆ ಅಂಕ ಬಂದರೆ ವಿದ್ಯಾರ್ಥಿ 2 ಮತ್ತು 3ನೇ ಪರೀಕ್ಷೆಯಲ್ಲಿ ಆ ಒಂದು ವಿಷಯವನ್ನು ಪ್ರತ್ಯೇಕವಾಗಿ ಬರೆಯಬಹುದು.
* ಮೊದಲ ಪರೀಕ್ಷೆಯಲ್ಲಿ ಫೇಲ್ ಆದರೂ ಅ ವಿದ್ಯಾರ್ಥಿಯನ್ನ ಫೇಲ್ ಎಂದು ಕರೆಯುವುದಿಲ್ಲ. ವಿದ್ಯಾರ್ಥಿ 2 ಹಾಗೂ 3 ನೇ ಪರೀಕ್ಷೆ ಬರೆದು ಪಾಸ್ ಆಗಬಹುದು.
* ವಿದ್ಯಾರ್ಥಿ 1, 2, 3 ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಪಾಸ್ ಆಗಿರುತ್ತಾನೋ ಅ ಪರೀಕ್ಷೆಯಲ್ಲಿ ಉತ್ತೀರ್ಣ ಎಂದು ಅಂಕಪಟ್ಟಿ ನೀಡಲಾಗುತ್ತದೆ.

ಹೊಸ ಪರೀಕ್ಷೆ ಸಂಭವನೀಯ ವೇಳಾಪಟ್ಟಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ  ಸಂಭವನೀಯ ವೇಳಾಪಟ್ಟಿ
ಪರೀಕ್ಷೆ 1
ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ
ಫಲಿತಾಂಶ -ಮೇ 8
ಪರೀಕ್ಷೆ 2
ಜೂನ್ 12 ರಿಂದ ಜೂನ್ 19
ಫಲಿತಾಂಶ-ಜೂನ್ 29
ಪರೀಕ್ಷೆ 3
ಜುಲೈ 29 ರಿಂದ ಆಗಸ್ಟ್ 5
ಫಲಿತಾಂಶ-ಆಗಸ್ಟ್ 19

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

ದ್ವೀತಿಯ ಪಿಯುಸಿ ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿ
ಪರೀಕ್ಷೆ 1
ಮಾರ್ಚ್ 1 ರಿಂದ ಮಾರ್ಚ್ 25
ಫಲಿತಾಂಶ-ಏಪ್ರಿಲ್ 22
ಪರೀಕ್ಷೆ 2
ಮೇ 15 ರಿಂದ ಜೂನ್ 5
ಫಲಿತಾಂಶ-ಜೂನ್ 21
ಪರೀಕ್ಷೆ 3
ಜುಲೈ 12 ರಿಂದ ಜುಲೈ 30
ಫಲಿತಾಂಶ-ಆಗಸ್ಟ್ 16

4 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement