ಇಂಡಿಯಾ ಮೈತ್ರಿಕೂಟ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ: ಡಿಎಂಕೆ ಸಂಸದ ಸನಾತನ ಧರ್ಮವನ್ನು ಎಚ್‌ಐವಿಗೆ ಹೋಲಿಸಿದ ನಂತರ ಕಾಂಗ್ರೆಸ್ ಹೇಳಿಕೆ

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ-ಇಂಡಿಯಾ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಗುರುವಾರ ಹೇಳಿದ್ದಾರೆ.
ಡಿಎಂಕೆಯ ಸಂಸದ ಎ.ರಾಜಾ ಅವರು, ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗಕ್ಕೆ ಹೋಲಿಸಿದ ನಂತರ ನಂತರಪವನ ಖೇರಾ ಹೇಳಿಕೆಗಳು ಬಂದಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಎರಡೂ ಹೊಸದಾಗಿ ರೂಪುಗೊಂಡ ವಿರೋಧ ಪಕ್ಷದ ಮೈತ್ರಿಕೂಟ-ಇಂಡಿಯಾದ ಭಾಗವಾಗಿದೆ.
ಡಿಎಂಕೆ ನಾಯಕ ಎ ರಾಜಾ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಪವನ್ ಖೇರಾ, ಇಂತಹ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ನಾವು ಎಲ್ಲಾ ಧರ್ಮ ಮತ್ತು ಜಾತಿಗಳನ್ನು ಗೌರವಿಸುತ್ತೇವೆ. ಕಾಂಗ್ರೆಸ್ ಮಾತ್ರವಲ್ಲ, ಇಂಡಿಯಾ ಮೈತ್ರಿಕೂಟದ ಎಲ್ಲ ಪಕ್ಷಗಳು ಸಹ ಈ ಎಲ್ಲಾ ಧರ್ಮಗಳು ಮತ್ತು ಜಾತಿಗಳನ್ನು ಗೌರವಿಸುತ್ತವೆ ಎಂದು ಹೇಳಿದ್ದಾರೆ.

ಗುರುವಾರ ತಮಿಳುನಾಡು ಸಚಿವ ಎ ರಾಜಾ ಅವರು ಸನಾತನ ಧರ್ಮವನ್ನು ಸಾಮಾಜಿಕ ಕಳಂಕ ಹೊಂದಿರುವ ಏಡ್ಸ್ ಮತ್ತು ಕುಷ್ಠರೋಗದಂತಹ ಕಾಯಿಲೆಗಳಿಗೆ ಹೋಲಿಸಬೇಕು ಎಂದು ಹೇಳಿದರು. ರಾಜಾ ಅವರು ತಮ್ಮ ಪಕ್ಷದ ಸಹೋದ್ಯೋಗಿ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಬಗೆಗಿನ ಕಾಮೆಂಟ್‌ಗಳು “ಮೃದು”ವಾಗಿತ್ತು ಎಂದು ಹೇಳಿದ್ದಾರೆ.
ಡಿಎಂಕೆ ಸಂಸದರ ಹೇಳಿಕೆಗೆ ಭಾರತೀಯ ಜನತಾ ಪಕ್ಷದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎ ರಾಜಾ ಅವರ ಟೀಕೆಗಳನ್ನು “ಅತಿರೇಕ ಎಂದು ಹೇಳಿದ್ದಾರೆ ಮತ್ತು ರಾಜಾ ಅವರ ಹೇಳಿಕೆಗಳು ಇಂಡಿಯಾ ಮೈತ್ರಿಕೂಟದ “ಮಾನಸಿಕ ದಿವಾಳಿತನ” ಹಾಗೂ ಬಲವಾಗಿ ಬೇರೂರಿರುವ ಹಿಂದೂಫೋಬಿಯಾವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ.
ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿ ವಿವಾದಕ್ಕೆ ಎಡೆಮಾಡಿಕೊಟ್ಟ ಕೆಲವೇ ದಿನಗಳಲ್ಲಿ ರಾಜಾ ಅವರ ಈ ಹೇಳಿಕೆ ಬಂದಿದೆ. ಸನಾತನ ಧರ್ಮವನ್ನು ಕೊರೊನಾ ವೈರಸ್, ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ ಅವರು ಅಂತಹ ವಿಷಯಗಳನ್ನು ವಿರೋಧಿಸಬಾರದು ಆದರೆ ತೊಡೆದುಹಾಕಬೇಕು ಎಂದು ಹೇಳಿದ್ದರು.

ಇಂದಿನ ಪ್ರಮುಖ ಸುದ್ದಿ :-   ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ಸ್ಟಾಲಿನ್‌, ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement