ನವದೆಹಲಿ: ವಿವಿಧ ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 7ರಲ್ಲಿ ಬಿಜೆಪಿ 3 ಹಾಗೂ ಇಂಡಿಯಾ ಮೈತ್ರಿಕೂಟವು 4 ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ. ಹಾಗೂ ಬಿಜೆಪಿ ಮೂರರಲ್ಲಿ ಗೆಲುವು ಸಾಧಿಸಿದೆ.
ತ್ರಿಪುರದ ಧನ್‌ಪುರ್ ಮತ್ತು ಬೊಕ್ಸಾನಗರ ವಿಧಾನಸಭಾ ಕ್ಷೇತ್ರ ಹಾಗೂ ಉತ್ತರಾಖಂಡದ ಬಾಗೇಸ್‌ವರ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ತ್ರಿಪುರದಲ್ಲಿ ಬಿಜೆಪಿ ಒಂದು ಸ್ಥಾನ ಹೆಚ್ಚುವರಿಯಾಗಿ ಗೆದಿದ್ದೆ, ಆದರೆ ಜಿದ್ದಾಜಿದ್ದಿ ಹೋರಾಟದಲ್ಲಿ ಪಶ್ಚಿಮ ಬಂಗಾಳದಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡಿದೆ.
ತ್ರಿಪುರದ ಬೊಕ್ಸಾನಗರದಲ್ಲಿ ಕಳೆದ ಬಾರಿ ಸಿಪಿಎಂ ಗೆಲುವು ಪಡೆದುಕೊಂಡಿತ್ತು. ಆದರೆ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಕಂಡಿದೆ. ಇತ್ತ ಪಶ್ಚಿಮ ಬಂಗಾಳದ ದುಪ್ಗುರಿ ಕ್ಷೇತ್ರದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ತೃಣಮೂಲ ಕಾಂಗ್ರೆಸ್ ಇಲ್ಲಿ ಗೆಲುವು ದಾಖಲಿಸಿದೆ.
ಜಾರ್ಖಂಡ್‌ನ ಡುಮ್ರಿ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಎಂಎಂ ಸ್ಾನ ಉಳಿಸಿಕೊಂಡಿದೆ. ಕಳೆದ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಜೆಎಂಎಂ ಪಾಲಾಗಿತ್ತು. ಉಪಚುನಾವಣೆಯಲ್ಲೂ ಜೆಎಂಎಂ ಗೆಲುವು ಕಂಡಿದೆ. ಕೇರಳದ ಪುತ್ತುಪ್ಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಹಿಡಿತ ಮುಂದುವರೆಸಿದ್ದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರದಲ್ಲಿ ಅವರ ಪುತ್ರ ಜಯಗಳಿಸಿದ್ದಾರೆ.ಉತ್ತರ ಪ್ರದೇಶದ ಘೋಸಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ತನ್ನ ಕ್ಷೇತ್ರ ಉಳಿಸಿಕೊಂಡಿದೆ. ಉಪಚುನಾವಣೆಯಲ್ಲೂ ಎಸ್‌ಪಿ ಅಭ್ಯರ್ಥಿ ಜಯಗಳಿಸಿದ್ದಾರೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ