ಡಿಜಿಟಲ್ ಶುಲ್ಕ ಪಾವತಿಗಾಗಿ ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್ ಬಿಡುಗಡೆ ಮಾಡಿದ ಎಸ್‌ಬಿಐ

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್ (Nation First Transit Card) ಹೆಸರಿನ ಹೊಸ ಪ್ರಿಪೇಯ್ಡ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.
ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023 ರ ಸಂದರ್ಭದಲ್ಲಿ ‘ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್’ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿದೆ. ಹೊಸದಾಗಿ ಬಿಡುಗಡೆಯಾದ ರುಪೇ ಎನ್‌ಸಿಎಂಸಿ ಪ್ರಿಪೇಯ್ಡ್ ಕಾರ್ಡ್ ಗ್ರಾಹಕರಿಗೆ ಅನುಕೂಲಕರ ಸೌಲಭ್ಯ ಒದಗಿಸುತ್ತದೆ ಎಂದು ಎಸ್‌ಬಿಐ ಹೇಳಿದೆ.
ರುಪೇ ಎನ್‌ಸಿಎಂಸಿ ಕಾರ್ಡ್‌ ಅನ್ನು ಮೆಟ್ರೋ, ಬಸ್ಸುಗಳು, ಪಾರ್ಕಿಂಗ್ ಇತ್ಯಾದಿಗಳಲ್ಲಿ ಡಿಜಿಟಲ್ ಟಿಕೆಟ್ ಶುಲ್ಕವನ್ನು ಒಂದೇ ಕಾರ್ಡ್ ಮೂಲಕ ಸುಲಭವಾಗಿ ಪಾವತಿಸಬಹುದು. ಇವುಗಳಲ್ಲದೆ, ಚಿಲ್ಲರೆ ಮತ್ತು ಇ-ಕಾಮರ್ಸ್ ಪೇಮೆಂಟ್‌ಗಳನ್ನು ಮಾಡಲು ಸಹ ಈ ಕಾರ್ಡ್ ಅನ್ನು ಬಳಸಬಹುದು ಎಂದು ತಿಳಿಸಲಾಗಿದೆ.

ಎಸ್‌ಬಿಐ   ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ನಾವೀನ್ಯತೆ ತರುತ್ತದೆ. 2019 ರಲ್ಲಿ ಟ್ರಾನ್ಸಿಟ್ ಆಪರೇಟರ್‌ಗಳೊಂದಿಗೆ NCMC ಕಾರ್ಯಕ್ರಮಗಳನ್ನು ಆರಂಭಿಸಿತು. ಇವುಗಳಲ್ಲಿ ಸಿಟಿ1 ಕಾರ್ಡ್, ನಾಗ್ಪುರ್ ಮೆಟ್ರೋ ಮಹಾ ಕಾರ್ಡ್, ನೋಯ್ಡಾ ಮೆಟ್ರೋ, ನಾಗ್ಪುರ ಮೆಟ್ರೋ, ಎಂಎಂಆರ್‌ಡಿಎ ಮೆಟ್ರೋ ಲೈನ್ಸ್ 2ಎ ಮತ್ತು 7, ಕಾನ್ಪುರ್ ಮೆಟ್ರೋ, ಚೆನ್ನೈ ಮೆಟ್ರೋದಲ್ಲಿ ಮುಂಬೈ1 ಕಾರ್ಡ್, ಗೋ ಸ್ಮಾರ್ಟ್ ಕಾರ್ಡ್, ಸಿಂಗಾರ ಚೆನ್ನೈ ಕಾರ್ಡ್ ಸೇರಿವೆ. ಆಗ್ರಾದ ಎಂಎಂಆರ್‌ಸಿ ಮೆಟ್ರೋ ಲೈನ್ 3ರಲ್ಲಿ ಎನ್‌ಸಿಎಂಸಿ ಆಧಾರಿತ ಟಿಕೆಟಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ ಎಂದು ಎಸ್‌ಬಿಐ ತಿಳಿಸಿದೆ.

ಇಂದಿನ ಪ್ರಮುಖ ಸುದ್ದಿ :-   ರಾತ್ರಿ ಸುರಿದ ಭಾರೀ ಮಳೆಯ ನಂತರ ನಾಗ್ಪುರ ಜಲಮಯ : ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಪಡೆಗಳ ನಿಯೋಜನೆ

ಗ್ರಾಹಕರ ದೈನಂದಿನ ಜೀವನದಲ್ಲಿ ಬ್ಯಾಂಕಿಂಗ್ ಅನ್ನು ಸುಲಭಗೊಳಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಎಸ್‌ಬಿಐ ಹೇಳಿದೆ. ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ತಂತ್ರಜ್ಞಾನದೊಂದಿಗೆ ಈ ಪ್ರಿಪೇಯ್ಡ್ ಕಾರ್ಡ್ ಅನ್ನು ತರುತ್ತಿದ್ದೇವೆ ಎಂದು ರುಪೇ ತಿಳಿಸಿದೆ. ಒನ್ ನೇಷನ್ ಒನ್ ಕಾರ್ಡ್ ವಿಷನ್ ನ ಭಾಗವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಎಸ್ ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರ ಮಾತನಾಡಿ, ಈ ಕಾರ್ಡ್ ಗ್ರಾಹಕರಿಗೆ ಅನುಕೂಲಕರ ಸೇವೆ ನೀಡುವುದಲ್ಲದೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಎಸ್‌ಬಿಐ ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್‌ನ ಮಿತಿಗಳು ಮತ್ತು ಷರತ್ತುಗಳನ್ನು ಇನ್ನೂ ಬಹಿರಂಗಪಡಿಸಬೇಕಿದೆ. ಎಸ್‌ಬಿಐ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು, ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನೂನ್‌ ಪಂಜಾಬಿನ ಆಸ್ತಿ ವಶಪಡಿಸಿಕೊಂಡ ಎನ್‌ಐಎ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement