ಶಿಷ್ಟಾಚಾರ ಉಲ್ಲಂಘನೆ : ಅಮೆರಿಕ ಅಧ್ಯಕ್ಷ ಜೋ ಬೈಡನ್​ ಬೆಂಗಾವಲು ವಾಹನ ಚಾಲಕನ ಬಂಧನ

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಬೆಂಗಾವಲು ವಾಹನದಲ್ಲಿದ್ದ ಚಾಲಕನನ್ನು ಶಿಷ್ಟಾಚಾರ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಭಾನುವಾರ ದೆಹಲಿಯಲ್ಲಿ ಬಂಧಿಸಲಾಯಿತು, ವಿಚಾರಣೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯ ಈ ಕಾರು ಯುಎಇ ಅಧ್ಯಕ್ಷರು ತಂಗಿರುವ ತಾಜ್ ಹೋಟೆಲ್‌ಗೆ ಪ್ರವೇಶಿಸಿದ ನಂತರ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕಾರು ತಾಜ್‌ ಹೊಟೇಲಿಗೆ ಪ್ರವೇಶಿಸುತ್ತಿದ್ದಂತೆ ಸ್ಥಳದಲ್ಲಿದ್ದ ಭದ್ರತಾ ಅಧಿಕಾರಿಗಳು ಸಂದೇಶ ರವಾನಿಸಿದರು. ವಿಚಾರಿಸಿದಾಗ, ಕಾರಿನ ಚಾಲಕನು ಬೈಡನ್ ತಂಗಿದ್ದ ಐಟಿಸಿ ಮೌರ್ಯಕ್ಕೆ ಬೆಳಿಗ್ಗೆ 9:30 ಕ್ಕೆ ಬರಬೇಕಿತ್ತು ಎಂಬುದು ಗೊತ್ತಾಗಿದೆ. ಆದರೆ ಲೋಧಿ ಎಸ್ಟೇಟ್ ಪ್ರದೇಶದಿಂದ ಕರೆದೊಯ್ದ ಉದ್ಯಮಿಯನ್ನು ತಾಜ್‌ಗೆ ಬಿಡಬೇಕಾಗಿದ್ದರಿಂದ ಅವರು ತಾಜ್‌ಗೆ ಬಂದಿದ್ದರು. ಚಾಲಕ ತನಗೆ ಪ್ರೋಟೋಕಾಲ್ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು. ಬೆಂಗಾವಲು ಪಡೆಯಿಂದ ಕಾರನ್ನು ಹೊರತೆಗೆದ ಭದ್ರತಾ ಅಧಿಕಾರಿಗಳು ವಿಚಾರಣೆ ನಡೆಸಿದ ನಂತರ ಅವರನ್ನು ಬಿಡುಗಡೆ ಮಾಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement