ನವದೆಹಲಿ : ಸೆಪ್ಟೆಂಬರ್ 18ರಿಂದ 22ರ ವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಇದೇ ವೇಳೆ ಸಿಬ್ಬಂದಿಯ ಸಮವಸ್ತ್ರ ಬದಲಾವಣೆಗೂ ಸರ್ಕಾರ ನಿರ್ಧರಿಸಿದೆ.
ಸೆಪ್ಟೆಂಬರ್ 18 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ದಿನದಂದು ಸಣ್ಣ ಪೂಜೆಯ ಬಳಿಕ ನೂತನ ಸಂಸತ್ ಭವನಕ್ಕೆ ಔಪಚಾರಿಕ ಪ್ರವೇಶ ನಡೆಯಲಿದೆ.
ನೂತನ ಸಂಸತ್‌ನಲ್ಲಿ ಹೊಸ ಡ್ರೆಸ್ ಕೋಡ್‌ನೊಂದಿಗೆ ಸಿಬ್ಬಂದಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಂಸತ್ ಭವನದ ಸಿಬ್ಬಂದಿ ಗಾಢ ಗುಲಾಬಿ ಬಣ್ಣದ ನೆಹರು ಜಾಕೆಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ. ಇವರು ಧರಿಸಲಿರುವ ಶರ್ಟ್ ಕಮಲದ ಹೂವಿನ ಶೈಲಿಯಲ್ಲಿ ವಿನ್ಯಾಸಗೊಳಿಸಿದೆ. ಈ ಸಮವಸ್ತ್ರವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಸಿದ್ಧಗೊಳಿಸಿದೆ
. ಸಂಸತ್ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ 271 ಸಿಬ್ಬಂದಿಗೂ ಇದೇ ಸಮವಸ್ತ್ರವನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಸಚಿವರು ಹಾಗೂ ಸಭಾಧ್ಯಕ್ಷರ ಚೇಂಬರ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೂ ಇದೇ ಸಮವಸ್ತ್ರ ನೀಡಲಾಗಿದೆ.
ಉಭಯ ಸದನಗಳಲ್ಲಿನ ಮಾರ್ಷಲ್‌ಗಳ ಉಡುಗೆಯನ್ನೂ ಬದಲಾಯಿಸಲಾಗಿದೆ. ಅವರು ಮಣಿಪುರಿ ಪೇಟವನ್ನು ಧರಿಸಲಿದ್ದಾರೆ. ಸಂಸತ್ ಭವನದ ಭದ್ರತಾ ಸಿಬ್ಬಂದಿಯ ಉಡುಗೆಯೂ ಬದಲಾಗಲಿದ್ದು, ಸಫಾರಿ ಸೂಟ್‌ಗಳ ಬದಲಿಗೆ, ಅವರಿಗೆ ಮಿಲಿಟರಿ ಉಡುಪು ಹೋಲುವ ಬಟ್ಟೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ. ಈ ಸಮವಸ್ತ್ರಗಳು ಸ್ತ್ರೀ ಹಾಗೂ ಪುರುಷರಿಗೆ ಸಮಾನವಾಗಿ ಇರಲಿದೆ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ